Published On: Sat, Sep 26th, 2020

ವಿಶ್ವ ಪ್ರವಾಸೋದ್ಯಮ ದಿನ   ಅಭಿವೃದ್ಧಿಯ ಹೊಸ ಹೆಜ್ಜೆಯಾಗಿ ಪರಿಣಮಿಸಲಿ

ಉಡುಪಿ: ಸೆ.27  ವಿಶ್ವ ಪ್ರವಾಸೋದ್ಯಮ ದಿನ, ದೇಶಾದ್ಯಂತ ಈ ದಿನವನ್ನು ವಿಶೇಷ ಕಾಯ೯ಕ್ರಮದ ಮೂಲಕ ಆಚರಿಸಲಾಗುತ್ತದೆ.ಪ್ರವಾಸ ಎಂದರೆ ನಮ್ಮೆಲ್ಲರೂ  ಇಷ್ಟ ಕಾರಣ ಅದು ಹಲವು ವೈವಿದ್ಯತೆಗಳ ಪರಿಚಯ ಮತ್ತು ವಿಭಿನ್ನ ಅನುಭವಗಳನ್ನು ನೀಡುತ್ತದೆ. ಮೈಮನಸ್ಸನ್ನು ಉಲ್ಲಾಸಗೊಳಿಸುವಲ್ಲಿ ಪ್ರವಾಸದ ಪಾತ್ರ ಬಹಳ ಮಹತ್ತರವಾದದ್ದು.ದೇಶ ಸುತ್ತು-ಕೋಶ ಓದು ಎನ್ನುವ ಮಾತು ಎಲ್ಲರಿಗೂ  ಸದಾ ನೆನಪಿಸುತ್ತಲೇ ಇರುತ್ತದೆ. ಏಕೆಂದರೆ ಒಂದು ಪ್ರವಾಸದಲ್ಲಿ ಸಿಗುವ ಅನುಭವ ದೊಡ್ಡ ಗ್ರಂಥ  ಓದುವುದಕ್ಕಿಂತಲು ಹೆಚ್ಚಿನದು ಎಂದರೆ ತಪ್ಪಾಗಲಾರುದು.PicsArt_09-26-07.42.35
 *ವ್ರತ್ತಿಪರ ಪ್ರವಾಸೋದ್ಯಮಿಗಳನ್ನು ಸೃಷ್ಟಿಸುತ್ತಿರುವ ಪ್ರವಾಸೋದ್ಯಮ ಕೋರ್ಸ್* :-
ಇಂದಿನ ದಿನಗಳಲ್ಲಿ ಈ  ಪ್ರವಾಸ ಉದ್ಯಮವಾಗಿ ಪ್ರವಾಸೋದ್ಯಮವಾಗಿದೆ, ಕಾರಣ ಅದರಲ್ಲಿನ ಅನೇಕ ಅನುಕೂಲಗಳು. ಇಂದು ಭಾರತದಲ್ಲಿ ಪ್ರವಾಸೋದ್ಯಮವು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ.ಈ ಮೂಲಕ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಇಂದಿನ ದಿನಗಳಲ್ಲಿ ಈ ಉದ್ಯಮ ಯುವ ಜನಾಂಗವನ್ನು ಸೆಳೆಯತ್ತಿದೆ.
ಪ್ರವಾಸೋದ್ಯಮದಿಂದ ಸಾರಿಗೆ, ಹೊಟೇಲ್ ಉದ್ಯಮಕ್ಕೆ ನೇರ ಲಾಭ ತರುವುದರಿಂದ ಅಲ್ಲಿ ಹೆಚ್ಚು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ. ಅಲ್ಲದೇ ದೇಶಕ್ಕೆ ಆರ್ಥಿಕ ಲಾಭವನ್ನು ಉಂಟು ಮಾಡುತ್ತದೆ.
 *ಪ್ರವಾಸ ಎಂದರೆ ಅದು ಕೇವಲ ಸುತ್ತಾಟವಲ್ಲ.*: 
 ಪ್ರವಾಸದಲ್ಲಿಒಂದು ಕಲಿಕೆ ಇರುತ್ತದೆ. ಇದರಲ್ಲಿ ಹಲವಾರು ವಿಭಾಗದ ಮೂಲಕ ನಾವು ಗುರುತಿಸಬಹುದು. ನಾವು ಪ್ರವಾಸಕ್ಕೆ ತೆರಳುವಾಗ ನಮ್ಮ ಆಸಕ್ತಿ ಯ ಮೇಲೆ ನಾವು ಅಲ್ಲಿ ನೋಡುವ ಸ್ಥಳಗಳನ್ನು ನಿಧ೯ರಿಸುತ್ತೇವೆ.
ಇದರಲ್ಲಿರುವ ಪ್ರಮುಖ ವಿಭಾಗಗಳು ಕೃಷಿ ಪ್ರವಾಸೋದ್ಯಮ, ಅಡುಗೆ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಪರಂಪರೆಯ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ನೌಕಾಯಾನ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ ಹೀಗೆ ಹಲವು ಬಗೆಯ ಪ್ರವಾಸಗಳಿವೆ.
 *ಪ್ರವಾಸೋದ್ಯಮ ದಿನದ ಹಿನ್ನಲೆ* - -ಇದರ ಹಿನ್ನಲೆಯ ಬಗ್ಗೆ ತಿಳಿಯುದಾದರೆ,
1997 ರಿಂದ ಅಚರಣೆಯಲ್ಲಿರುವ ಈ ದಿನವನ್ನು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) 1980ರಲ್ಲಿ ಸೆಪ್ಟಂಬರ್ 27ನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಘೋಷಣೆ ಮಾಡಿತು.
ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ವೃದ್ಧಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ಸೆಪ್ಟಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದೆ.
1997ರ ನಂತರ ಪ್ರತಿ ವರ್ಷವೂ ಒಂದೊಂದು ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡು ಅಧಿಕೃತವಾಗಿ ಪ್ರವಾಸೋದ್ಯಮ ದಿನ ಆಚರಿಸುವ ನಿರ್ಧಾರ ಕೈಗೊಂಡಿತು.
 *ಭಾರತದಲ್ಲಿ ಪ್ರವಾಸೋದ್ಯಮ ಸ್ಥಿತಿ* :-
ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಭಾರತದ ಸಂಸ್ಕೃತಿಗೆ ಮಾರುಹೋಗಿರುವ ವಿದೇಶಿಗರು ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹಾಗೆಯೇ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.
ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ. ಇದು ರಾಷ್ಟ್ರೀಯ ಜಿಡಿಪಿಗೆ 6.23% ಹಾಗೂ ಭಾರತದಲ್ಲಿ ಒಟ್ಟು ಉದ್ಯೋಗಕ್ಕೆ 8.78%ರಷ್ಟು ಕೊಡುಗೆ ನೀಡುತ್ತದೆ. ಸರಾಸರಿ ವಾರ್ಷಿಕ 5 ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶೀ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ. ಭಾರತದ ಪ್ರವಾಸೋದ್ಯಮ ಸೇವಾ ವಲಯವು 2008ರಲ್ಲಿ ಸುಮಾರು ಶತಕೋಟಿ ಡಾಲರ್ ಆದಾಯ ಗಳಿಸಿದೆ.
ವಿಶ್ವ ಪರ್ಯಟನ ಮತ್ತು ಪ್ರವಾಸೋದ್ಯಮ ಸಮಿತಿ ಯ ಪ್ರಕಾರ, ಪರ್ಯಟನ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿಯ ಸಾಮರ್ಥ್ಯ ಹೊಂದಿರುವ ಭಾರತ ಉಪಖಂಡಕ್ಕೆ ಮುಂದಿನ ಹತ್ತು ವರ್ಷಗಳ ವರೆಗೆ ಪ್ರವಾಸೋದ್ಯಮಕ್ಕೆ ಪೂರಕವಾದ ಅಗತ್ಯ ಸಾಮರ್ಥ್ಯವಿದೆ. ವಿಶ್ವದಲ್ಲೇ ಅತಿ ಜನಪ್ರಿಯ ಪ್ರವಾಸೀ ಕೇಂದ್ರಬಿಂದುವಾಗಿ ಹೊರಹೊಮ್ಮಲಿದೆ. ಭಾರತ ದರಗಳ ಸ್ಫರ್ಧೆಯಲ್ಲಿ ಆರನೆಯ ಸ್ಥಾನ ಹಾಗೂ ಸುರಕ್ಷತೆ ಹಾಗೂ ಭದ್ರತೆಯ ವಿಚಾರದಲ್ಲಿ 39ನೆಯ ಸ್ಥಾನದಲ್ಲಿದೆ.
 *ಕರೋನಾ ಮತ್ತು ಪ್ರವಾಸೋದ್ಯಮ :-* ಈ ಕರೋನಾದಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಹಳ ತೊಂದರೆಯಾಗಿದೆ. ಈ ಕ್ಷೇತ್ರದಲ್ಲಿ ದುಡಿಯುವ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ.ಆದರೆ ಇತ್ತಿಚಿಗೆ ನ ದಿನಗಳಲ್ಲಿ ಈ ಕ್ಷೇತ್ರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.ಸಕಾ೯ರ ಕೂಡ ಪೂರಕವಾಗಿ ಸ್ಪಂದಿಸಿದ ಕಾರಣ ಇದು ಸಾಧ್ಯವಾಗಿದೆ.ದೇಶದ ಅಭಿವೃದ್ಧಿಯ ದಾರಿಯಲ್ಲಿ ಈ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ.
 *ಉಡುಪಿ ಜಿಲ್ಲೆ ಮತ್ತು ಪ್ರವಾಸೋದ್ಯಮ :-* ಈ ಜಿಲ್ಲೆಯಲ್ಲಿರುವ ಕಡಲ ತೀರಗಳು, ಧಾಮಿ೯ಕ , ಇತಿಹಾಸ ಕೇಂದ್ರಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಸಕಾ೯ರ ಹೆಚ್ಚಿನ ರೀತಿಯಲ್ಲಿ ಅನುದಾನ ನೀಡಿದರೆ ಉಡುಪಿಯನ್ನು ಮಾದರಿ ಪ್ರವಾಸಿ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಿದೆ.ಕೇವಲ ವಷ೯ಕ್ಕೆ ಒಂದು ಬಾರಿ ಆಚರಣಿ ಮಾಡದೆ ದಿನ ಪ್ರತಿ ಈ ದಿನವನ್ನು ಆಚರಣಿ ಮಾಡಬೇಕು.
✍️ *ರಾಘವೇಂದ್ರ ಪ್ರಭು,ಕವಾ೯ಲು*
ಯುವ ಲೇಖಕ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter