Published On: Sat, Sep 26th, 2020

ಮಂಗಳೂರು ಮೂಲದ ಕೊಡುಗೈದಾನಿ ಎನ್‍ಆರ್‍ಐ ರೊನಾಲ್ಡ್ ಕೊಲಾಸೋಗೆ `ಮಹಾಂತಮ್ ಪುರಸ್ಕಾರ್’

ಕೈಕಂಬ: ರಾಜ್ಯ ರಾಜಧಾನಿ ಬೆಂಗಳೂರು, ಹುಟ್ಟೂರು ಮಂಗಳೂರಿನಲ್ಲಿ ಅನೇಕ ದೇವಸ್ಥಾನ, ಚರ್ಚ್, ಮಸೀದಿ, ಶಾಲೆ, ಪೊಲೀಸ್ ಠಾಣೆ ಸಹಿತ ನೂರಾರು ಕಡೆಗಳಲ್ಲಿ ಸಾಮಾಜಿಕ ಕಳಕಳಿಯಿಂದ ಅಭಿವೃದ್ಧಿ ಕೆಲಸ ಮಾಡಿರುವ ಮಂಗಳೂರು ಮಂಗಳಾದೇವಿ ಮೂಲದ, ಪ್ರಸಕ್ತ ಬೆಂಗಳೂರು ಸಾದಹಳ್ಳಿ ವಾಸ್ತವ್ಯದ ಅನಿವಾಸಿ ಭಾರತೀಯ(ಎನ್‍ಆರ್‍ಐ) ರೊನಾಲ್ಡ್ ಕೊಲಾಸೊಗೆ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದ `ಭಾರತೀಯ ಮಹಾಂತಮ್ ವಿಕಾಸ್ ಪುರಸ್ಕಾರ’ ಲಭಿಸಿದೆ.ಡಬಗ್ಗರ ಏಳ್ಗೆ, ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡಿರುವ ಸೇವಾ ಮನೋಭಾವನೆಯ ಕೆಲಸಗಳಿಗಾಗಿ ಕೊಲಾಸೊಗೆ 2019-20ರ ಸಾಲಿನ ವಿಕಾಸ್ ಪ್ರಶಸ್ತಿ ಬಂದಿದೆ.

gur-sep-26-coloso-3

ಥೈಲ್ಯಾಂಡ್‍ನಲ್ಲಿರುವ ಭಾರತೀಯರು ಪ್ರತಿ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ತೋರಿದ ಐದು ಮಂದಿಗೆ ನೀಡುತ್ತ ಬಂದಿರುವ ಅತ್ಯುನ್ನತ ನಾಗರಿಕರ ಪುರಸ್ಕಾರ ಇದಾಗಿದೆ ಎಂದು ಕೊಲಾಸೊ ಆಪ್ತ ವಲಯದ ನಾಗರಾಜ ಪೂಜಾರಿ ಸದಾಹಳ್ಳಿ ತಿಳಿಸಿದ್ದಾರೆ.gur-sep-26-coloso-2

ಜಿಲ್ಲೆಯ ಕಟೀಲು ದೇವಳದಲ್ಲಿ ಭಕ್ತರಿಗೆ ಕುಡಿಯಲು ತಂಪು ನೀರಿನ ವ್ಯವಸ್ಥೆ, ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೋದ್ಧಾರ, ಕುದ್ರೋಳಿ ದೇವಸ್ಥಾನಕ್ಕೆ ನೆರವು ಸಹಿತ ಊರಿನಲ್ಲಿ ಅನೇಕ ಧರ್ಮಸಹಿಷ್ಣುತಾ ಸೇವಾ ಕಾರ್ಯಗಳಿಗೆ ಕೊಡುಗೈ ದಾನಿಯಾಗಿರುವ ಇವರು ಬೆಂಗಳೂರಿನಲ್ಲಿ ಅನೇಕ ಜನಪರ ಕೆಲಸಗಳ ಮೂಲಕ ಜಜಾನುರಾಗಿಯಾಗಿದ್ದಾರೆ. ದೇವನಹಳ್ಳಿಯಲ್ಲಿ ಬಡವರ ಬಡಾವಣೆಗಳಿಗೆ ಬೋರ್ವೆಲ್ ಕುಡಿಯುವ ನೀರಿನ ವ್ಯವಸ್ಥೆ, ನವರತ್ನ ಅಗ್ರಹಾರದಲ್ಲಿ 3.5 ಕೋಟಿ ರೂ ವೆಚ್ಚದಲ್ಲಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ, ಯಲಹಂಕದಲ್ಲಿ ಹೋಲಿ ರೊಸಾರಿಯೋ ಚರ್ಚ್ ಕಟ್ಟಡ, ಪ್ರಿಜರ್ ಟೌನ್‍ನಲ್ಲಿ ಪೊಲೀಸ್ ಠಾಣೆ ಕಟ್ಟಡ, ಚಿಕ್ಕಜಾಲದಲ್ಲಿ ಚೋಳರ ಕಾಲದ ಚನ್ನದೇವರಾಯಸ್ವಾಮಿ ದೇವಸ್ಥಾನ ಪುನರ್‍ನಿರ್ಮಾಣ ಹೀಗೆ ಅನೇಕಾನೇಕ ಜನಪರ ಕಾರ್ಯಗಳಲ್ಲಿ ಸಕ್ರಿಯಾಗಿರುವ ಇವರು, ಕೊರೊನಾ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್, ಅಂಗನವಾಡಿ ಕಾರ್ಯಕರ್ತೆಯರ ಸಹಿತ 25,000ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸೊತ್ತುವಿನ ಕಿಟ್ ವಿತರಿಸಿ, ಇತರರಿಗೆ ಮಾದರಿಯಾಗಿದ್ದಾರೆ.

ಇವರ ಸೇವಾ ಕಾರ್ಯಕ್ಕೆ ರಜನೀಶ್ ಎಡಪದವು(ತರೋಳಿಕಾಡು), ಸುರೇಂದ್ರ ಉಡುಪಿ, ಪ್ರಸನ್ನ ಸಾಲ್ಯಾನ್ ನಿಟ್ಟೆ ಹಾಗೂ ಪ್ರಶಾಂತ್ ಭಟ್ ಗುರುಪುರ ಅಭಿಮಾನಿ ಬಳಗ ಮೆಚ್ಚುಗೆ ವ್ಯಕ್ತಪಡಿಸಿದೆ.

“ಭಗವಂತ ನನಗೆ ಕೊಟ್ಟಿರುವುದರಲ್ಲಿ ಒಂದು ಭಾಗ ಸಮಾಜಕ್ಕೆ ನೀಡುತ್ತಿದ್ದೇನೆ. ಸಮಾಜಸೇವೆ ಮನಸ್ಸಿಗೆ ಸಂತೋಷ ತರುವ ವಿಷಯವಾಗಿದೆ. ಇದರಲ್ಲಿ ಪ್ರತಿಫಲ ಅಪೇಕ್ಷೆ ಇಲ್ಲ. ದೇವರ ಇಚ್ಚೆಯಂತೆ ಕೈಲಾದಷ್ಟು ಸೇವೆ ಮಾಡುತ್ತೇನೆ. ಚರ್ಚ್, ಮಸೀದಿ, ದೇವಸ್ಥಾನ, ಶೈಕ್ಷಣಿಕ ಕ್ಷೇತ್ರ…, ಹೀಗೆ ಅರ್ಹರ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ” ಎಂದು ರೊನಾಲ್ಡ್ ಕೊಲಾಸೊ ಹೇಳುತ್ತಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter