Published On: Fri, Sep 25th, 2020

ಸೆ.27 ಬಿ.ಸಿ.ರೋಡಿನಲ್ಲಿ ಪರಿಸರ ಸ್ನೇಹಿ ಸ್ಕೂಟರ್ ಮಳಿಗೆ ಶುಭಾರಂಭ

ಬಂಟ್ವಾಳ:  ತಾಲೂಕಿನ ಕೇಂದ್ರಸ್ಥಳವಾದ  ಬಿ.ಸಿ.ರೋಡಿನ ರಾಜೀವಿ ಪುಂಡಲೀಕ ಎನ್ ಕ್ಲೇವ್ ನಲ್ಲಿ ಕಂಟ್ರಿ ಈ ವ್ಹೀಲ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆ ಸೆಪ್ಟೆಂಬರ್ 27ರಂದು ಬೆಳಗ್ಗೆ 11 ಗಂಟೆಗೆ ಅನಾವರಣಗೊಳ್ಳಲಿದೆ. ಪರಿಸರ ಸ್ನೇಹಿಯಾಗಿರುವ ಹೊಸ ವಿನ್ಯಾಸಗಳಿಂದ ಕೂಡಿದ ಚಾರ್ಜ್ ಮಾಡಲು ಸುಲಭವಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ. IMG-20200925-WA0061
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ  ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪ್ರವರ್ತಕರಾದ ಡೆನ್ನಿಸ್ ಲೋಬೊ ಅವರು ಮಾಲಿನ್ಯ ರಹಿತ   ಈ ಸ್ಕೂಟರ್ ಗೆ ನೋಂದಾವಣೆಯ ಅವಶ್ಯಕತೆಯಿರುವುದಿಲ್ಲ, ರಸ್ತೆ ತೆರಿಗೆ ಇರುವುದಿಲ್ಲ,ಪರವಾನಿಗೆಯ ಅಗತ್ಯವು ಇರುವುದಿಲ್ಲ,ಕಳ್ಳತನ ಎಚ್ಚರಿಕೆ ಸೂಚನೆ,ರಿಮೋಟ್ ಕಂಟ್ರೋಲ್ ಹೊಂದಿರುವ ಕೇಂದ್ರಲಾಕ್ ವ್ಯವಸ್ಥೆ ಇರುವುದೆಂದು ವಿವರಿಸಿದರು.
ಮಳಿಗೆಯನ್ನು ಹಿರಿಯರಾದ ಎಲಿಜಾ ಲೋಬೊ ಮತ್ತು ಮಾರ್ಸೆಲಿನ್ ಫೆರ್ನಾಂಡಿಸ್ ಉದ್ಘಾಟಿಸುವರು, ಮೊಡಂಕಾಪು ಚರ್ಚ್ ಧರ್ಮಗುರು ಅ|ವಂ| ವಲೇರಿಯನ್ ಡಿಸೋಜಾ ಹಾಗೂ ಅಲ್ಲಿಪಾದೆ ಚರ್ಚ್ ಧರ್ಮಗುರುಗಳಾದ ವಂ|ಫೆಡ್ರಿಕ್ ಮೊಂತೆರೊ ಆಶೀರ್ವಚನ ನೀಡುವರು. ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ,  ಸ್ಥಳೀಯ ಪುರಸಭಾ ಸದಸ್ಯೆ ಜಯಂತಿ ವಸಂತ್, ಇ ಕಾರ್ಬನ್ ನ್ಯೂಟ್ರಾಲಿಟಿ ಮಾರ್ಕೆಟಿಂಗ್ ಮುಖ್ಯಸ್ಥ ಸತೀಶ್ ಶೆಟ್ಟಿ, ವಿತರಕ ಪದ್ಮರಾಜ ಮೊಯ್ಲಿ, ಸುರೇಶ್ ಶೆಟ್ಟಿ ಭಾಗವಹಿಸುವರು.  ಎಂದವರು ತಿಳಿಸಿದರು.   ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ,ಸಂಯೋಜಕಿ ಅನಿತಾ ಲೋಬೊ ಮತ್ತು ದೀಪಕ್ ಲಸ್ರಾದೊ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter