Published On: Mon, Sep 21st, 2020

ಪುಂಜಾಲಕಟ್ಟೆ : ಅಣಬೆ ಬೇಸಾಯ ತರಬೇತಿ ಸ್ವೋದ್ಯೋಗಕ್ಕೆ ತರಬೇತಿ ಸಹಕಾರಿ: ತುಂಗಪ್ಪ ಬಂಗೇರ

ಬಂಟ್ವಾಳ : ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್, ಬಂಟ್ವಾಳ ತಾ. ವಗ್ಗ ವಲಯದ ಪಿಲಾತಬೆಟ್ಟು ಕಾರ್ಯಕ್ಷೇತ್ರ ಮತ್ತು ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ಶ್ರೀ ಮುರುಘೇಂದ್ರ ವನಿತಾ ಸಮಾಜ, ಪಿಲಾತಬೆಟ್ಟು ಗ್ರಾ.ಪಂ. ಮತ್ತು ತೋಟಗಾರಿಕೆ ಇಲಾಖೆ ಬಂಟ್ವಾಳ ಇದರ ಆಶ್ರಯದಲ್ಲಿ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮ ಸೆ.20ರಂದು ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಸಭಾಭವನದಲ್ಲಿ ನಡೆಯಿತು.

2109pkt1
ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಂಘ ಸಂಸ್ಥೆಗಳು ಇಂತಹ ತರಬೇತಿ ನೀಡುವುದರಿಂದ ಸ್ವೋದ್ಯೋಗಕ್ಕೆ ಸಹಕಾರಿಯಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ಧ.ಗ್ರಾ. ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ ಪಿ. ಅವರು ಯೋಜನೆಯ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಬಂಟ್ವಾಳ ತೋಟಗಾರಿಕೆ ಇಲಾಖೆ ಅ„ಕಾರಿ ಪ್ರದೀಪ್ ಡಿಸೋಜ ಅವರು ಇಲಾಖೆಯಿಂದ ದೊರಕುವ ಸವಲತ್ತುಗಳ ಮಾಹಿತಿ ನೀಡಿದರು. ಪಿಲಾತಬೆಟ್ಟು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ ರೈ ಅವರು ಗ್ರಾ.ಪಂ.ನಿಂದ ಪಡೆಯಬಹುದಾದ ವಿವಿಧ ಸೌಲಭ್ಯಗಳ ವಿವಿರ ನೀಡಿದರು. ಸಂಪನ್ಮೂಲ ವ್ಯಕ್ತಿ ಪಾಂಡುರಂಗ ಅವರು ಅಣಬೆ ಬೇಸಾಯ ಬಗ್ಗೆ ತರಬೇತಿ ನೀಡಿದರು. ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತಾ.ಪಂ. ಸದಸ್ಯ ರಮೇಶ್ ಕುಡ್ಮೇರ್, ವಗ್ಗ ವಲಯಾಧ್ಯಕ್ಷ ಮಾಧವ ಪಟ್ರಾಡಿ, ಒಕ್ಕೂಟದ ಅಧ್ಯಕ್ಷರಾದ ಸುಮಿತ್ರಾ ಹಾಗೂ ರಮೇಶ ಪೂಜಾರಿ, ಶ್ರೀ ಮುರುಘೇಂದ್ರ ವನಿತಾ ಸಮಾಜದ ಅಧ್ಯಕ್ಷೆ ಆಶಾ ಡಿ. ಶೆಟ್ಟಿ, ಸೇವಾ ಪ್ರತಿನಿಧಿಗಳಾದ ಅಮೃತಾ ಎಸ್., ರೇಖಾ, ರಜನಿ, ಗೋವಿಂದ, ಸುಮಿತ್ರಾ ಮತ್ತಿತರರು ಉಪಸ್ಥಿತರಿದ್ದರು.

ಸೇವಾಪ್ರತಿನಿಧಿ ಸುಧಾ ಅವರು ಸ್ವಾಗತಿಸಿದರು. ವಿಜಯಾ ವಂದಿಸಿದರು. ಕೃಷಿ ಮೇಲ್ವಿಚಾರಕ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter