Published On: Tue, Sep 15th, 2020

ರೇಷ್ಮೆ ಬೆಳೆಗಾರರ ಖಾತೆಗೆ ಬೆಂಬಲ ಬೆಲೆ ಹಣ ಜಮಾ ಆಗಬೇಕೆಂದು ಒತ್ತಾಯ

ಶ್ರೀನಿವಾಸಪುರ : ವಾರದೊಳಗೆ ರೇಷ್ಮೆ ಬೆಳೆಗಾರರ ಖಾತೆಗೆ ಬೆಂಬಲ ಬೆಲೆ ಹಣ ಜಮಾ ಆಗಬೇಕು ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೋಲಾರ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕರಾದ ಆಂಜನೇಯ ಗೌಡ ಅವರಿಗೆ ಪೌರಾಡಳಿತ , ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವರಾದ ನಾರಾಯಣಗೌಡ ಅವರು ಎಚ್ಚರಿಕೆ ನೀಡಿದರು . ಇಂದು ಶ್ರೀನಿವಾಸಪುರದ ಜೆ . ನಾರಾಯಣಗೌಡ ತೋಟಗಾರಿಕೆ ಕ್ಷೇತ್ರದ ಮಾವು ಉತ್ಕೃಷ್ಟ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು .IMG-20200914-WA0158

ಬೇರೆ ಎಲ್ಲಾ ಕಡೆ ಹಣ ಸಂದಾಯ ಆಗಿದೆ . ರೈತರು ಅಭಿನಂದನೆ ಕೂಡ ಸಲ್ಲಿಸಿದ್ದಾರೆ . ಆದರೆ ಕೋಲಾರದಲ್ಲಿ ಮಾತ್ರ ಯಾಕೆ ವಿಳಂಬ ಆಗಿದೆ . ತಕ್ಷಣ ಸಮಸ್ಯೆ ಪರಿಹಾರ ಆಗದಿದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು . ಲಾಕ್ ಡೌನ್ ಸಂದರ್ಭದಲ್ಲಿ ಹಣ್ಣು , ತರಕಾರಿ , ಹೂವು ಮಾರಾಟವಾಗದೆ ನಷ್ಟವಾಗಿತ್ತು . ಸರ್ಕಾರ ಪರಿಹಾರ ಘೋಷಣೆ ಮಾಡಿದೆ . ಕೆಲವು ಕಡೆ ತಾಂತ್ರಿಕ ಕಾರಣದಿಂದ ರೈತರ ಖಾತೆಗೆ ಹಣ ಜಮೆ ಆಗಿಲ್ಲ . ಅಧಿಕಾರಿಗಳು ಎಲ್ಲಾ ಸಮಸ್ಯೆ ಸರಿಪಡಿಸಬೇಕು . ವಾರದೊಳಗೆ ಪರಿಹಾರ ಹಣ ಸಂದಾಯ ಆಗಬೇಕು ಎಂದು ಸೂಚನೆ ನೀಡಿದ್ದಾರೆ . ಮ್ಯಾಂಗೊಬೋರ್ಡ್ ಇದ್ದೂ ಇಲ್ಲದಂತಿದೆ . ರೈತರಿಗೆ ಸರಿಯಾದ ಅನುಕೂಲ ಆಗುತ್ತಿಲ್ಲ . ಸರ್ಕಾರದಿಂದ ಹಣ ನೀಡಲು ಸಿದ್ದ . ಆದರೆ ರೈತರಿಗೆ ಅದು ಸಹಾಯವಾಗುವಂತಿರಬೇಕು . ಹೀಗಾಗಿ ಅಧಿವೇಶನ ಮುಗಿದ ತಕ್ಷಣ ಮೀಟಿಂಗ್ ನಡೆಸಿ ಬೋರ್ಡ್ ಉನ್ನತೀಕರಣ ಮಾಡುತ್ತೇವೆ ಎಂದು ತಿಳಿಸಿದರು .

ಮ್ಯಾಂಗೊ ಬೋರ್ಡ್ ಗೆ 25 ಕೋಟಿ ರೂ . ವಾರ್ಷಿಕ ಅನುದಾನ ನೀಡುವ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ ಸಚಿವರು , ಡ್ರಿಪ್ ಇರಿಗೇಷನ್ ಗೆ ಶೇ , ನೂರರಷ್ಟು ಸಬ್ಸಿಡಿ ನೀಡಿವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು . ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ಮಾತನಾಡಿ ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ರೈತರ ಮಾವನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಮಾರಾಟ ಮಾಡಿಸಲಾಯಿತು .

ಜಿಲ್ಲೆಯಲ್ಲಿ ಹಲವು ಪ್ರಸಿದ್ದ ತಳಿಯ ಮಾವನ್ನು ಬೆಳೆಯಲಾಗುತ್ತಿದ್ದು , ದೇಶ ವಿದೇಶಗಳಿಗೆ ರಷ್ಟು ಹೆಚ್ಚಿಸಬೇಕು ಆಗ ಉತ್ತಮವಾದ ಬೆಲೆ ಸಿಗುತ್ತದೆ ಎಂದು ತಿಳಿಸಿದರು . ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ ಅವರು ಮಾತನಾಡಿ ರಾಜ್ಯದಲ್ಲಿ ಬೆಳೆಯುವ ಒಟ್ಟು ಮಾವಿನಲ್ಲಿ ಶೇ 34 ರಷ್ಟು ಮಾವನ್ನು ಕೋಲಾರ ಜಿಲ್ಲೆಯಲ್ಲಿಯೇ ಬೆಳೆಯಲಾಗುತ್ತದೆ . ಮಾವು ಮಂಡಳಿಯು ಇಡಿ ರಾಜ್ಯಕ್ಕೆ ಸಂಬಂದಿಸಿದ್ದಾಗಿದ್ದು , ವಾರ್ಷಿಕ 2 ಕೋಟಿ ಅನುದಾನ ಸಾಲುವುದಿಲ್ಲ .

ಆದ್ದರಿಂದ ಕನಿಷ್ಠ 25 ಕೋಟಿ ಅನುದಾನ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು . ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಗಾಯಿತ್ರಿ , ಮಾವು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ನಾಗರಾಜ್ ಅವರು ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter