Published On: Tue, Sep 15th, 2020

ನಮ್ಮೂರ ಹೆಮ್ಮೆ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬಂಟ್ವಾಳ:   ಸರಪಾಡಿ ವಲಯ ಕಾಂಗ್ರೆಸ್ ಹಾಗೂ ಪೆರಿಯಪಾದೆ ಬೂತ್ ಕಾಂಗ್ರೆಸ್ ಮತ್ತು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟಇದರ ವತಿಯಿಂದ ಬಿ.ರಮಾನಾಥ ರೈಯವರ ಹುಟ್ಟು ಹಬ್ಬದ ಅಂಗವಾಗಿ ನಮ್ಮೂರ ಹೆಮ್ಮೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

IMG-20200914-WA0085
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಾಜಿ ಸಚಿವ ರಮಾನಾಥರೈ ಅವರು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ತಾಲೂಕು ಪಂಚಾಯತ್ ಸದಸ್ಯೆ ಸ್ವಪ್ನ ವಿಶ್ವನಾಥ್, ಮಾಜಿ ಪಂಚಾಯತ್ ಸದಸ್ಯರಾದ ಧರ್ಣಪ್ಪ ಪೂಜಾರಿ,  ವಿನ್ಸೆಂಟ್ ಪಿಂಟೋ, ಚಂದ್ರಹಾಸ ನಾಯ್ಕ್, ಬಾಲಕೃಷ್ಣ ಪೂಜಾರಿ, ವಿಶ್ವನಾಥ್ ಪೂಜಾರಿ, ಪುರುಷೋತ್ತಮ್ ವಿ ಬಂಗೇರ, ಸುವರ್ಣ ಕುಮಾರ್ ಜೈನ್ ,ಹುಸೇನ್ ಪೆರಿಯಪಾದೆ,ಎನ್ ಎಸ್ ಯು ಐ ನರಾಜ್ಯ ಕಾರ್ಯದರ್ಶಿ ಫಾರೂಕ್ ಬಯಾಬೆ,ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ, ಕಾರ್ಯದರ್ಶಿ ಬಾತಿಷ್ ಅಳಕೆಮಜಲು, ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ವಿನಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅಂಕುಶ್ ಶೆಟ್ಟಿ, ಕಾರ್ಯದರ್ಶಿ ಮುಹಮ್ಮದ್ ಶಫೀಕ್,ಸಾಮಾಜಿಕ ಜಾಲತಾಣ ಸಂಯೋಜಕ ನಜೀಬ್ ಮಂಚಿ ಹಾಗೂ ಮುಹಮ್ಮದ್ ಸಹಝ್ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter