Published On: Tue, Sep 15th, 2020

ಕರೋಪಾಡಿ: 7 ಕೋ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ,ಶಿಲಾನ್ಯಾಸ

ಬಂಟ್ವಾಳ: ಗ್ರಾಮದ ಅಭಿವೃದ್ಧಿ ಸರಕಾರದ ಮೂಲಮಂತ್ರವಾಗಿದ್ದು,  ಗ್ರಾಮದ ಜನರ ಬೇಡಿಕೆಯನ್ನು ಹಂತಹಂತವಾಗಿ ಈಡೇರಿಸುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.ಅವರು ಬಂಟ್ವಾಳ ಕ್ಷೇತ್ರದ ಕರೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 7 ಕೋ.5 ಲಕ್ಷ ರೂ. ವೆಚ್ಚದ  ವಿವಿಧ  ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ವನ್ನು ನೆರವೇರಿಸಿ ಮಾತನಾಡಿದರು.IMG_1814

 ಗ್ರಾಮದಲ್ಲಿರುವ ಪ್ರತಿ  ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಜನರ ನಿರೀಕ್ಷೆಯಂತೆ ಕೆಲಸ ಮಾಡುವ ಭರವಸೆ ನೀಡಿದ ಶಾಸಕರುು,  ಗ್ರಾಮದ ಮೂಲಭೂತ ಸೌಕರ್ಯಗಳ ಜೊತೆ ವಿವಿಧ ಅಭಿವೃದ್ಧಿ ಗೆ ಶ್ರಮಿಸುವುದಾಗಿ  ಹೇಳಿದರು.ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಿಎಸ್ ವೈ ಅವರ   ಸಹಕಾರದಿಂದ  ಕ್ಷೇತ್ರದ ಅಭಿವೃದ್ಧಿಗೆ       ಯೋಜನೆ ರೂಪಿಸಲಾಗಿದೆ. ಗ್ರಾಮದ ಅಭಿವೃದ್ಧಿ ಯಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಒಡಿಯೂರು  ಕ್ಷೇತ್ರ  ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಗ್ರಾಮದ ವಿಕಾಸವಾದರೆ ರಸ್ತೆ ಅಭಿವೃದ್ಧಿ ಯಾಗಬೇಕು, ರಸ್ತೆ ಅಭಿವೃದ್ಧಿಯಾದರೆ ಗ್ರಾಮ ಅಭಿಯಾಗುತ್ತದೆ, ಆದರೆ  ರಸ್ತೆಯ ಅವಶ್ಯಕತೆಗಳಿರುವುದನ್ನು ಗುರುತಿಸಿ ಪೂರಕವಾದ ಯೋಜನೆ ರೂಪಿಸಿದಾಗ ಗ್ರಾಮದ ಅಭಿವೃದ್ಧಿ ಜೊತೆಗೆ ರಾಷ್ಟ್ರದ ಅಭಿವೃದ್ಧಿ ಯಾಗುತ್ತದೆ ಎಂದು ಹೇಳಿದರು.

ಕರೋಪಾಡಿ ಗ್ರಾ.ಪಂ.ವ್ಯಾಪ್ತಿಯ 2.25 ಕೋಟಿ ವೆಚ್ಚದಲ್ಲಿ ಪಳ್ಳದಕೋಡಿ, ಪದ್ಯಾಣ ರಸ್ತೆ, 60,ಲಕ್ಷ ವೆಚ್ಚದಲ್ಲಿ ಅರಸಳಿಕೆ,ವಗೆನಾಡು ರಸ್ತೆ ಮರುಡಾಮರಿಕರಣ , 75,ಲಕ್ಷ ವೆಚ್ಚದಲ್ಲಿ ಶ್ರೀ ಜಲ ದುರ್ಗಾಪರಮೇಶ್ವರೀ ದೇವಸ್ಥಾನ ಪಡ್ಪು,ಆನೆಕಲ್ಲು,ಬಳಿ ನದಿಗೆ ತಡೆಗೋಡೆ , 10,ಲಕ್ಷ ವೆಚ್ಚದಲ್ಲಿ ಪಾಲಿಗೆ,ನಲಿಕೆ ಕಾಲೋನಿ ರಸ್ತೆ,ಕಾಂಕ್ರೀಟಿಕರಣ. 15,ಲಕ್ಷ ವೆಚ್ಚದಲ್ಲಿ ಚೆಲ್ಲಂಗಾರು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಗೆ,5,ಲಕ್ಷ ವೆಚ್ಚದಲ್ಲಿ ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನದ ಮುಂಭಾಗದಲ್ಲಿ ಒಳಚರಂಡಿ ರಚನೆ,5,ಲಕ್ಷ ವೆಚ್ಚದಲ್ಲಿ ಒಡಿಯೂರು,ಬನಾರಿ ಸಂಪರ್ಕ ರಸ್ತೆ,30 ಲಕ್ಷ ವೆಚ್ಚದಲ್ಲಿ ಪಾದೆಕಲ್ಲು ಪೆರ್ವೋಡಿ ಸಂಪರ್ಕ ರಸ್ತೆ, 10ಲಕ್ಷ ವೆಚ್ಚದಲ್ಲಿ ವಗೆನಾಡು,ಪಂಭತ್ತಾಜೆ ರಸ್ತೆ,5ಲಕ್ಷ ವೆಚ್ಚದಲ್ಲಿ ದೇವಸ್ಯ,ಪಟ್ಲ,ಪರಂದರಮೂಲೆ  ರಸ್ತೆ, 1.25,ಲಕ್ಷ ವೆಚ್ಚದಲ್ಲಿ ಕುಡ್ಪಲ್ತಡ್ಕ ಹೈಮಾಸ್ಟ್  ದೀಪ , 1.25ಲಕ್ಷ ವೆಚ್ಚದಲ್ಲಿ ಬೆಂಗದಪಡ್ಪು ಹೈಮಾಸ್ಟ್ ದೀಪ ಉದ್ಘಾಟನೆ , 1.25 ಲಕ್ಷ. ವೆಚ್ಚದಲ್ಲಿ ಒಡಿಯೂರು ಶ್ರೀ ಗುರುದೇವ್ ದತ್ತ ಸಂಸ್ಥಾನ ಹೈಮಾಸ್ಟ್ , 1.25 ಲಕ್ಷ ವೆಚ್ಚದಲ್ಲಿ ಶ್ರೀ ರಾಜರಾಜೇಶ್ವರೀ ಭಜನಾ ಮಂದಿರ,ಬೇಡಗುಡ್ಡೆ ರಸ್ತೆಯ ಉದ್ಘಾಟನೆ ನಡೆಯಿತು.

ಪ್ರಗತಿಯಲ್ಲಿರುವ ಕಾಮಗಾರಿಗಳಾದ 1ಕೋಟಿ ವೆಚ್ಚದಲ್ಲಿ ಕಮ್ಮಾಜೆಯಿಂದ ಶ್ರೀ ಗುರುದೇವ ಸಂಸ್ಥಾನ ಒಡಿಯೂರು ರಸ್ತೆ,1ಕೋಟಿ ವೆಚ್ಚದಲ್ಲಿ ಬೇತಾ, ಮುಗುಳಿ ರಸ್ತೆ ,ಕಾಂಕ್ರೀಟಿಕರಣ , 30,ಲಕ್ಷ ವೆಚ್ಚದಲ್ಲಿ ಪದ್ಯಾಣ ಗಡಿಜಾಗೆ ಕಲ್ಲುರ್ಟಿ ದೈವಸ್ಥಾನ ರಸ್ತೆ , 10 ಲಕ್ಷ ವೆಚ್ಚದಲ್ಲಿಬೇತಾ,ಪಾದೆಕಲ್ಲು ರಸ್ತೆಗೆ ಶಿಲಾನ್ಯಾಸ ವನ್ನು ಶಾಸಕ ರಾಜೇಶ್ ನಾಯ್ಕ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ  ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಂಟ್ವಾಳ ಕ್ಷೇತ್ರದ ಬಿಜೆಪಿ ಪ್ರ. ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಕರೋಪಾಡಿ ಗ್ರಾಮಪಂಚಾಯತ್ ಮಾಜಿ ಆಧ್ಯಕ್ಷೆ ಬೇಬಿ ಆರ್ ಶೆಟ್ಟಿ,  ಸಾಲೆತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಚಂದ್ರವಾತಿ ಮಲಾರ್,ಎಸ್.ಟಿ.ಮೋರ್ಚಾದ ಆಧ್ಯಕ್ಷ ರಾಮನಾಯ್ಕ್ , ಜಲದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಗೋಪಾಲಕೃಷ್ಣ ಭಟ್  ಬೇತ, ರೈತಮೋರ್ಚಾ ಕೋಶಾಧಿಕಾರಿ  ಪ್ರಶಾಂತ್ ಶೆಟ್ಟಿ ಅಗರಿ, ಕನ್ಯಾ ನ ಗ್ರಾ .ಪಂ. ಮಾಜಿ ಅಧ್ಯಕ್ಷ ರಘರಾಮ ಶೆಟ್ಟಿ ಕನ್ಯಾನ, ಮಾಜಿ ಜಿ.ಪಂ.ಸದಸ್ಯ ಲಿಂಗಪ್ಪ ಗೌಡ,  ಕರೋಪಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ  ವಿಘ್ನೇಶ್ವರ ಭಟ್, ಉಪಾಧ್ಯಕ್ಷ ಪಟ್ಲ ರಘನಾಥ ಶೆಟ್ಟಿ, ಪ್ರಮುಖ ರಾದ ಜಯರಾಮ್ ಮಿತ್ತನಡ್ಕ, ಲಕ್ಷಣ ಮಾಂಬಾಡಿ, ಆಶ್ವತ್ ಶೆಟ್ಟಿ, ಶಶಿಕಿರಣ್ ಶೆಟ್ಟಿ, ಸುನಿಲ್ ಪದ್ಯಾಣ, ರಂಜಿತ್ ಪಾಲಿಗೆ, ಆದರ್ಶ ಶೆಟ್ಟಿ ಪಟ್ಲ, ಜಯರಾಮ ನಾಯ್ಕ, ರಾಮಕೃಷ್ಣ ಮಲಾರ್, ರಾಜೇಶ್ ಮಿತ್ತನಡ್ಕ, ದಾಮೋದರ ಶೆಟ್ಟಿ, ಸಂಕಪ್ಪ ಶೆಟ್ಟಿ ಪಲ್ಲದಕೋಡಿ, ದಿನೇಶ್ ಮಿತ್ತನಡ್ಕ , ರಾಜೇಶ್ ಮಿತ್ತನಡ್ಕ, ಸುದರ್ಶನ ಆಳ್ವ, ವಿನೋದ್ ಶೆಟ್ಟಿ ಪಟ್ಲ , ಪುರಂದರ ಚೆಲ್ಲಂಗಾರ್, ಬಾಲಕೃಷ್ಣ ಚೆಲ್ಲಂಗಾರ್, ಶಾರದ ಚೆಲ್ಲಂಗಾರ್ ,   ಅಕ್ರಮ ಸಕ್ರಮ ಸಮಿತಿ ಸದಸ್ಯ  ರಮನಾಥ ರಾಯಿ, ಗಣೇಶ್ ರೈ ಮಾಣಿ,ಬಾಲಕೃಷ್ಣ ಸೆರ್ಕಳ, ವಿದ್ಯೇಶ್ ರೈ ಸಾಲೆತ್ತೂರು, ವಿಕ್ಟರ್ , ಲೋಕೋಪಯೋಗಿ ಇಲಾಖೆ ಹಿರಿಯ ವಿಭಾಗದ ಇಂಜಿನಿಯರ್ ಷಣ್ಮಗಂ, ಕಿರಿಯ ವಿಭಾಗದ ಇಂಜಿನಿಯರ್ ಪ್ರೀತಂ , ಸಣ್ಣ ನೀರಾವರಿ  ಇಲಾಖೆ ಯ ಇಂಜಿನಿಯರ್  ಶಿವಪ್ರಸನ್ನ. ಉಪಸ್ಥಿತರಿದ್ದರು.
ಕೊಳ್ನಾಡು ಮಹಾ ಶಕ್ತಿ ಕೇಂದ್ರ ಆದ್ಯಕ್ಷ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter