Published On: Wed, Sep 2nd, 2020

ಗುರುಪುರ ಪಿ ಶೇಕಬ್ಬ ನಿಧನ

ಗುರುಪುರ : ಗುರುಪುರ ಜಂಕ್ಷನ್‍ನಲ್ಲಿ ಅಂಗಡಿ ವ್ಯಾಪಾರಿಯಾಗಿದ್ದ, ಗುರುಪುರ ಮಠದ ಬಳಿ ನಿವಾಸಿ, ಕಾಂಗ್ರೆಸ್ಸಿನ ಹಿರಿಯ ಕಾರ್ಯಕರ್ತ ಪಿ. ಶೇಕಬ್ಬ(66) ಸೆ. 2ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.gur-sep-2-shekabba

ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ರಿ) ಇದರ ನಿಕಟಪೂರ್ವ ಉಪಾಧ್ಯಕ್ಷರಾಗಿದ್ದ ಇವರು, ಗುರುಪುರ ಗ್ರಾಮ ಪಂಚಾಯತ್‍ಗೆ ಐದು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಒಂದು ಅವಧಿಗೆ ಪಂಚಾಯತ್ ಉಪಾಧ್ಯಕ್ಷರಾಗಿದ್ದರು. ಒಂದು ಅವಧಿಗೆ ಗುರುಪುರದ ದಾರೂಸ್ಸಾಲಾಂ ಮಸೀದಿ-ದರ್ಗಾದ ಅಧ್ಯಕ್ಷರಾಗಿದ್ದ ಇವರು ಪ್ರಸಕ್ತ ಗೌರವಾಧ್ಯಕ್ಷರಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಸ್ಥಳೀಯ ಮಸೀದಿಯಲ್ಲಿ ನಡೆಯಿತು. ಅಗಲಿದ ಚೇತನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter