Published On: Tue, Sep 1st, 2020

*ಮಕ್ಕಳ ಆಟಿಕೆ ತಯಾರಿ  ಆತ್ಮನಿಭ೯ರದತ್ತ ನಮ್ಮ ಭಾರತ*

ನಮ್ಮ ದೇಶದ ಪ್ರಧಾನಿಯವರು ತಮ್ಮ ಮನ್ ಕೀ ಬಾತ್ ಕಾಯ೯ಕ್ರಮದಲ್ಲಿ ಆಟಿಕೆ ಕ್ಷೇತ್ರದಲ್ಲಿ ಭಾರತ ಆತ್ಮ ನಿಭ೯ರವಾಗಬೇಕೆoದು ಕರೆ ನೀಡಿದ್ದರು.ಇದಕ್ಕೆ ಮುನ್ನುಡಿ ಬರೆಯಲು ನಮ್ಮ ರಾಜ್ಯ ತಯಾರಾಗಿದೆ. ಕೊಪ್ಪಳದಲ್ಲಿ ಅತೀ ದೊಡ್ಡ ಆಟಿಕೆ ತಯಾರಿಕಾ ಹಬ್ ನಿಮಾ೯ಣವಾಗುತ್ತಿರುವುದು ಸಂತೋಷದ ವಿಷಯ.PicsArt_08-31-03.03.30
ನಮ್ಮ ದೇಶದಲ್ಲಿ ಹೆಚ್ಚಿನ ಮಕ್ಕಳು ಬಳಸುವ ಆಟಿಕೆಗಳು ಚೀನಾದಿಂದ ಬಂದವುಗಳಾಗಿವೆ.ಈ ಆಟಿಕೆಗಳು ನೋಡಲು ಬಹಳ ಸುಂದರವಾಗಿದ್ದರೂ  ಗುಣಮಟ್ಟದಲ್ಲಿ ಅತ್ಯಂತ ಕೆಟ್ಟದ್ದಾಗಿರುತ್ತವೆ.ಹೆಚ್ಚಿನ ಅಂಗಡಿಗಳಲ್ಲಿ ನಮ್ಮ ದೇಶದಲ್ಲಿ ತಯಾರಾದ ಗೊಂಬೆ / ಆಟಿಕೆಗಳಿಗಿಂತ ಈ ಚೀನಾ ದ ಆಟಿಕೆಗಳು ಬಹಳ ವೇಗದ ಮಾರುಕಟ್ಟೆ ಪಡೆದಿರುವುದು ದುರಂತ.ನಮ್ಮ ದೇಶದ ವಾರ್ಷಿಕ ಆಟಿಕೆಗಳ ವಹಿವಾಟು ಸುಮಾರು 10 ಸಾವಿರ ಕೋಟಿ ರೂಪಾಯಿ ದಾಟಿದೆ ಅದರ ಶೇ.80 ರಷ್ಟು ಪಾಲು ಚೀನಾ ಪಡೆದಿದೆ!
ಚೀನಾದ ವರು ನಮ್ಮ ದೇಶಕ್ಕೆ ಬೇಕಾದ ಹಾಗಿರುವ ಅಣಕು ಆಟಿಕೆ ಸೃಷ್ಠಿಸುವಲ್ಲಿ ನಿಪುಣರು ಹೀಗಾಗಿ ಬಹಳ ಬೇಗನೇ ನಮ್ಮ ಮಾರುಕಟ್ಟೆಯನ್ನು ಈ ಚೀನಾ ಆಟಿಕೆಗಳು ವ್ಯಾಪಿಸಿವೆ ಬೆಲೆ ಕಡಿಮೆಯಾಗಿರುವ ಕಾರಣ ಇದು ಜನರಿಗೆ ಹತ್ತಿರವಾಗಿದ್ದವೆ. ದೇಶದಲ್ಲಿ ಯಾವುದೇ ಹಬ್ಬ ಹರಿದಿನ ಬಂದಾಗ ಅದಕ್ಕೆ ಬೇಕಾದ ರೀತಿಯಲ್ಲಿ ಈ ಚೀನಾ ಪದಾಥ೯ಗಳು ಭಾರತಕ್ಕೆ ಬಂದು ಇಲ್ಲಿನ ಮಾರುಕಟ್ಟೆಯನ್ನು ಆವರಿಸುತ್ತವೆ. ಹೀಗಾಗಿ ನಮ್ಮ ದೇಶದಲ್ಲಿ ತಯಾರಾದ ಉತ್ತಮ ಗುಣಮಟ್ಟದ ವಸ್ತುಗಳಿಗೆ ಬೆಲೆ ಇಲ್ಲವಾಗಿ ಕೈಗಾರಿಕೆಗಳು ಬಂದ್ ಆಗುವ ಸ್ಥಿತಿ ಬಂದಿದೆ.
 *ಕರೋನಾ ಭಾರತಕ್ಕೆ ಮುಂದೆ ವರವಾಗಲಿದೆ.*
ಈ ಕರೋನಾ ಭಾರತಕ್ಕೆ ಬಂದ ನಂತರ ಜನರ ಮನೋಭಾವನೆ ಬಹಳಷ್ಟು ಬದಲಾವಣೆಯಾಗಿವೆ. ಮುಖ್ಯವಾಗಿ ಆತ್ಮನಿಭ೯ರ ಭಾರತ ಅಂದರೆ ಇದೇ ದೇಶದಲ್ಲಿ ತಯಾರಾದ ವಸ್ತುಗಳಿಗೆ ಮಾರುಕಟ್ಟೆ ಸೃಷ್ಟಿಯಾಗುತ್ತಿವೆ. ಇದಕ್ಕೆ ಸಕಾ೯ರ ಕೂಡ ತೆರಿಗೆ ವಿನಾಯಿತಿ ನೀಡುವ ಮೂಲಕ ಉದ್ದಿಮೆಗಳ ಸ್ಥಾಪನೆಗೆ ಆದ್ಯತೆ ನೀಡುತ್ತಿರುವುದು ಅಭಿನಂದನೀಯ. ಚೀನಾವು ನಮ್ಮ ದೇಶಕ್ಕೆ ಅನ್ಯಾಯ ಮಾಡುವ ಎಲ್ಲ ಪ್ರಯತ್ನ ಮಾಡುತ್ತಿದೆ ಹೀಗಾಗಿ ನಮ್ಮ ದೇಶದ ಜನರಿಗೆ ಚೀನಾದ ಮೇಲೆ ಇರುವ ಸಿಟ್ಟಿನ ಲಾಭವನ್ನುಸ್ವದೇಶಿ ವಸ್ತುಗಳು ಪಡೆಯಲಾರಂಭಿಸಿರುವುದು ಸಂತೋಷದ ವಿಷಯ.
 *ನಮ್ಮ ಚನ್ನಪಟ್ಟಣದ ಗೊಂಬೆಗಳಿಗೆ ಮತ್ತೊಮ್ಮೆ ಜೀವ ಕಳೆ ಬರಲಿದೆ* :- ನಮ್ಮ ರಾಜ್ಯದ ಚನ್ನಪಟ್ಟಣದ ಮರದ ಗೊಂಬೆಗಳು ದೇಶಾದ್ಯಂತ ಖ್ಯಾತಿ ಪಡೆದಿವೆ .ವಿದೇಶಗಳಿಗೂ ರಫ್ತಾಗುತ್ತಿವೆ.ವಿಶಿಷ್ಟವಾದ ಕೆತ್ತನೆ, ಆಕಷ೯ಕ ಬಣ್ಣ ಅನನ್ಯ ವಿನ್ಯಾಸಗಳನ್ನು ಶತಮಾನಗಳಿಂದ ಕಾಪಾಡಿಕೊಂಡು ಬಂದಿವೆ.ಆದರೆ ವಿದೇಶಿ ಅದರಲ್ಲಿಯೂ ಚೀನಾ ಆಟಿಕೆಗಳ ಹೊಡೆತದಿಂದ ಈ ಗೊಂಬೆಗಳನ್ನು ತಯಾರಿಸುವ ಜನರು ಕಡಿಮೆಯಾಗಿದ್ದಾರೆ ಪರಿಣಾಮ ಈ ಉದ್ಯಮ ನಷ್ಟದತ್ತ ಸಾಗುತ್ತಿತ್ತು. ಆದರೆ ಇದೀಗ ಆತ್ಮ ನಿಭ೯ರ ಭಾರತ ಈ ಗೊಂಬೆ / ಆಟಿಕೆ ತಯಾರಿಕೆಯಲ್ಲಿ ನಡೆಯುತ್ತಿರುದರಿಂದ ಚನ್ನ ಪಟ್ಟಣದ ಗೊಂಬೆಗಳಿಗೆ ಜೀವಕಳೆ ಬರುತ್ತಿವೆ.ಸಕಾ೯ರ ಈ ನಿಟ್ಟಿನಲ್ಲಿ ಕಾಯ೯ ನಿವ೯ಹಿಸುತ್ತಿರುದರಿಂದ ಭಾರತದಲ್ಲಿ ತಯಾರಾಗುವ ಆಟಿಕೆಗಳಿಗೆ ಉತ್ತಮ ಮಾರುಕಟ್ಟಿ ನಿಮಾ೯ಣವಾಗಲಿದೆ.
 *ಸಕಾ೯ರ ಮತ್ತು ಸಾವ೯ಜನಿಕರ ಸಹಭಾಗಿತ್ವ ಅಗತ್ಯವಿದೆ.* ಮಕ್ಕಳ ಆಟಿಕೆ ತಯಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಅದೇ ರೀತಿ ಸಾವ೯ಜನಿಕರು ಸ್ವದೇಶಿ ಆಂದೋಲನಕ್ಕೆ ವಿಶೇಷ ಆದ್ಯತೆ ನೀಡಿದ್ದಲ್ಲಿ ಭಾರತವು ವಿದೇಶಗಳಿಂದ ಆಮದನ್ನು ಕಡಿಮೆ ಮಾಡಿ ರಫ್ತು ಮಾಡುವ ಹಂತಕ್ಕೆ ಬರಬಹುದು.ಅದೇ ರೀತಿ ಕುಂಬಾರಿಕಾ ಅಲಂಕಾರಿಕಾ ವಸ್ತುಗಳು ಸ್ವದೇಶಿ ವಸ್ತುಗಳಿಗೆ ಸಕಾ೯ರ ಸುಂಕ ವಿನಾಯಿತಿ ನೀಡಬೇಕು.ಪ್ರಧಾನಿ ಮೋದಿಯವರ ಕನಸು ನನಸಾಗಬೇಕಾದರೆ ಚೀನಾ ವಸ್ತುಗಳಿಗೆ ಬೈ ಎನ್ನೋಣ ಸ್ವದೇಶಿ ವಸ್ತುಗಳಿಗೆ ಜೈ ಎನ್ನೋಣ. ಭಾರತ ಆತ್ಮ ನಿಭ೯ರವಾಗಲು ಜೊತೆಯಾಗಿ ಸಾಗೋಣ.
 **ರಾಘವೇಂದ್ರ ಪ್ರಭು,* 
 *ಕವಾ೯ಲು**
ಯುವ ಲೇಖಕ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter