Published On: Sun, Aug 30th, 2020

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ ನಾಲ್ಕನೆಯ ವಾರ್ಷಿಕೋತ್ಸವ ಪ್ರಯುಕ್ತ A1 ಹೆಲ್ಪಿಂಗ್ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಯಶಸ್ವಿ ರಕ್ತದಾನ ಶಿಬಿರ

ಮಂಗಳೂರು: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ A1 ಹೆಲ್ಪಿಂಗ್ ಫೌಂಡೇಶನ್ ಕಣ್ಣೂರು ಇದರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಭಾಗಿತ್ವದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ನಾಲ್ಕನೆಯ ವಾರ್ಷಿಕೋತ್ಸವ ಪ್ರಯುಕ್ತ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 30 ಆಗಸ್ಟ್ 2020 ನೇ ಆದಿತ್ಯವಾರದಂದು ಕಣ್ಣೂರಿನ ಇಂಗ್ಲಿಷ್ ಮೀಡಿಯಂ ಶಾಲೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.778c652b-bb51-483c-bce3-d1706c0364cb

ಕಣ್ಣೂರು ಜುಮಾ ಮಸೀದಿ ಖತೀಬರಾದ ಬಹು| ಅನ್ಸಾರ್ ಫೈಝಿ ಅಲ್-ಬುರ್ಹಾನಿ ಉಸ್ತಾದರ ದುಃವಾಶೀರ್ವಚನದ ಮೂಲಕ ಚಾಲನೆಗೊಂಡ ಕಾರ್ಯಕ್ರಮವನ್ನು A1 ಹೆಲ್ಪಿಂಗ್ ಫೌಂಡೇಶನ್ ಕಣ್ಣೂರು ಇದರ ಅಧ್ಯಕ್ಷರಾದ ಜನಾಬ್: ಎಸ್.ಡಿ ಮಹಮ್ಮದ್ ಶಾಕಿರ್ ಅಧ್ಯಕ್ಷತೆ ವಹಿಸಿದ್ದರು.ಕೊರೋನಾ ಭೀತಿಯ ನಡುವೆಯೂ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 151 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.56decfa0-ab8d-488b-bbb9-738a6da89411

ಮುಖ್ಯ ಅತಿಥಿಗಳಾಗಿ ಕೆ.ಎಸ್ ಎಚ್ ಹಮೀದ್ (ಅಧ್ಯಕ್ಷರು ಜುಮಾ ಮಸೀದಿ ಕಣ್ಣೂರು),ಕೆ ಅಹಮ್ಮದ್ ಬಾವ (ಮಾಜಿ ತಾಲೂಕು ಪಂಚಾಯತ್ ಸದಸ್ಯರು),ಅಬ್ದುಲ್ ಖಾದರ್ ಕಣ್ಣೂರು,ಸಿತಾರ್ ಮಜೀದ್ (ಕಾರ್ಯದರ್ಶಿ ಕಣ್ಣೂರು ಇಂಗ್ಲಿಷ್ ಮೀಡಿಯಮ್ ಶಾಲೆ),ಅಬ್ದುಲ್ ರಹಿಮಾನ್(ಬೋರು ಗುಡ್ಡೆ ಮಸೀದಿ ಅಧ್ಯಕ್ಷರು),ಕೆ ಮಹಮ್ಮದ್ (ಸ್ಥಾಪಕರು A1 ಹೆಲ್ಪಿಂಗ್ ಫೌಂಡೇಶನ್),E.K ಟಿಂಬರ್ ರಫೀಕ್(ಕುಂಡಾಲಾ ಮಸೀದಿ ಅಧ್ಯಕ್ಷರು),ಇಕ್ಬಾಲ್ ಕಣ್ಣೂರು(SDPI ಅಧ್ಯಕ್ಷರು ಕಣ್ಣೂರು),ಯಮ್ ಇಸ್ಮಾಯಿಲ್ ಬುಖಾರಿ(ಖತೀಬರು ಅಡ್ಯಾರ್ ಪದವು),ಬದ್ರುದ್ದೀನ್ ಧಾರಿಮಿ,ಇಬ್ರಾಹಿಮ್ ದಾರಿಮಿ,ನಸೀಮಾ ಅಬ್ದುಲ್ ರಹಿಮಾನ್(ಉಪಾಧ್ಯಕ್ಷರು ಇಂಗ್ಲಿಷ್ ಮೀಡಿಯಮ್ ಕಣ್ಣೂರು),E.K ಮಜೀದ್, ರಿಯಾಝ್ ಕಣ್ಣೂರು,ನಿಸಾರ್ ಉಳ್ಳಾಲ (ಸ್ಥಾಪಕರು ಬ್ಲಡ್ ಹೆಲ್ಪ್ ಕರ್ನಾಟಕ(ರಿ),A1 ಹೆಲ್ಪಿಂಗ್ ಫೌಂಡೇಶನ್ ಕಣ್ಣೂರು ಪದಾಧಿಕಾರಿಗಳು ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು. ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter