Published On: Sun, Aug 23rd, 2020

ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ಮೂಡಿಗೆರೆ ಪಟ್ಟಣ ಸಮೀಪದ ಚತ್ರಮೈದಾನದಲ್ಲಿ ನೆರವೇರಿಸಿದ ಪುದು ಗ್ರಾಮ ಪಂಚಾಯತ್ ಸದಸ್ಯರು

ಮಂಗಳೂರು: ಕೊರೋನಾ ಸೋಂಕಿನಿಂದ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣ ಸಮೀಪದ ಚತ್ರಮೈದಾನ ನಿವಾಸಿ ಸುಮಾರು 47ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.b5173e10-50dc-4bef-9511-93ed3204bc0f

ಅವರ ಪಾರ್ಥಿವ ಶರೀರವನ್ನು ಮಂಗಳೂರು ಖಾಸಗಿ ಆಸ್ಪತ್ರೆಯಿಂದ ಮೂಡಿಗೆರೆಯ ಚತ್ರ ಮೈದಾನದ ರುದ್ರಭೂಮಿಯ ಚಿತಾಗಾರಕ್ಕೆ ತಲುಪಿಸಿ ಜಿಲ್ಲಾಡಳಿತ & ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗಸೂಚಿಯ ಪ್ರಕಾರದಂತೆ ಹಿಂದೂ ಸಂಪ್ರದಾಯ ವಿಧಿ ವಿಧಾನಗಳನ್ನು ಅನುಸರಿಸಿ ಪುದು ಗ್ರಾಮ ಪಂಚಾಯತ್ ಸದಸ್ಯರಾದ ಹಾಶೀರ್ ಪೇರಿಮಾರ್, ಶಿಹಾಬ್ ತಂಙಳ್ ರಿಲೀಫ್ ಸೆಲ್ ಕಾರ್ಯ ಸಂಯೋಜಕರಾದ ನೌಶಾದ್ ಮಲಾರ್, ಪಿ.ಎಮ್ ಸಿರಾಜ್ ಪೇರಿಮಾರ್, ಶ್ರೀ ಗಣೇಶ್ ಆಂಬ್ಯುಲೆನ್ಸ್ ನ ಚಾಲಕರಾದ ಶಮೀರ್ ಪಳ್ನೀರ್ ರವರು ಅಂತ್ಯಕ್ರಿಯೆ ಕಾರ್ಯವನ್ನು ನೆರವೇರಿಸಿದರು.

98de62ac-4a97-4196-8f36-c0e5eea2072b (1)

ಮೃತರ ಅಂತ್ಯಸಂಸ್ಕಾರದ ವೇಳೆ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳ, ಊರಿನ ನಾಗರಿಕರ ಮತ್ತು ಮೃತರ ಕುಟುಂಬಸ್ಥರ ಸಹಕಾರದೊಂದಿಗೆ ಯಶಸ್ವಿಯಾಗಿ ಅಂತ್ಯ ಕ್ರಿಯೆ ಕಾರ್ಯವನ್ನು ನಡೆಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter