Published On: Sat, Aug 15th, 2020

ನಡುಬೈಲ್ ಬಸ್ ತಂಗುದಾಣ ಮತ್ತು ಹಿ. ಜಾ. ವೇ. ಯ ಘಟಕ ಉದ್ಘಾಟನೆ

ಬಂಟ್ವಾಳ : ಪುದು ಗ್ರಾಮದ ಕಡೆಗೋಳಿ – ಪೊಳಲಿ ಸಂಪರ್ಕ ರಸ್ತೆಯ ನಡುಬೈಲು ಎಂಬಲ್ಲಿ ಬಹುದಿನದ ಬೇಡಿಕೆಯಾದ ನೂತನ ಬಸ್ ತಂಗುದಾಣ ಹಾಗೂ  ಹಿಂದೂ ಜಾಗರಣಾ ವೇದಿಕೆ ಕಲಾಸಂಗಮ ಘಟಕದ    ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.    IMG-20200815-WA0131

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘಚಾಲಕರಾದ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಯವರು ಬಸ್ ತಂಗುದಾಣ ಹಾಗೂ ಹಿ.ಜಾ.ವೇ.ಯ ಘಟಕವನ್ನು ಉದ್ಘಾಟಿಸಿ ಮಾತನಾಡಿ, ದೇಶದ  ಯುವಜನತೆಯ ಶಕ್ತಿ ವ್ಯರ್ಥವಾಗಬಾರದು ಅವರು ಸಂಸ್ಕಾರಯುತರಾಗಿ  ಸಂಘಟಿತರಾಗಬೇಕು ಎಂದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ  ಬೌದ್ಧಿಕ್ ಪ್ರಮುಖ್ ನರಸಿಂಹ ಮಾಣಿ , ಪ್ರಾಂತ ಕಾರ್ಯಕಾರಿಣಿ ಸದಸ್ಯ ರವಿರಾಜ್ ಬಿ. ಸಿ. ರೋಡ್ , ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಜಗದೀಶ್ ನೆತ್ತರಕೆರೆ , ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಬೆಂಜನಪದವು , ವಕೀಲರಾದ  ರಾಜೇಶ್ ಬೊಳ್ಳುಕಲ್ಲು , ಕಿಶೋರ್ ಕುಮಾರ್ ಮಂಗಳೂರು , ಬಂಟ್ವಾಳ ತಾಲೂಕು ಪ್ರದಾನ ಕಾರ್ಯದರ್ಶಿ ಯೋಗೀಶ್ ಕುಮುಡೇಲು  ,ತುಂಬೆ ವಲಯ ಪ್ರದಾನ ಕಾರ್ಯದರ್ಶಿ ಲೋಲಾಕ್ಷ ,  ನಡುಬೈಲು ಘಟಕದ ಅಧ್ಯಕ್ಷ ಸುರೇಶ ನಡುಬೈಲು , ಕಾರ್ಯದರ್ಶಿ ಲಿಖಿತ್ ಕುಮಾರ್ ಗೋವಿನತೋಟ ಮತ್ತಿತರರು ಉಪಸ್ಥಿತರಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter