Published On: Sat, Aug 15th, 2020

ಯೋಜನೆಗಳು ತಲುಪಲು ಮೊಬೈಲ್ ಆ್ಯಪ್ ಪೂರಕ : ಕೋಟಾ ಶ್ರೀನಿವಾಸ ಪೂಜಾರಿ

ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಲು ಮೊಬೈಲ್ ಆಪ್ ಪೂರಕವಾಗಿದ್ದು,ಆವರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು .ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಪ್ರಗತಿಪರಕೃಷಿಕ ಗಣಪತಿ ಭಟ್ ಅವರ ಮನೆಯ ವಠಾರದಲ್ಲಿ ರಾಜ್ಯ ಸರಕಾರ ಹೊಸದಾಗಿ ಅನುಷ್ಠಾನಗೊಳಿಸಿರುವ ರೈತರೇ ಬೆಳೆ ಸಮೀಕ್ಷೆ ಮಾಡುವ “ಮೊಬೈಲ್ ಆಪ್” ಗೆ ಶನಿವಾರ ಬಂಟ್ವಾಳ ತಾಲೂಕು ಮಟ್ಟದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ನೇತೃತ್ವದಲ್ಲಿ ಚಾಲನೆ ನೀಡಿದರು.IMG-20200815-WA0133 (1)

ರೈತರ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಬದ್ದವಾಗಿದ್ದು ಇದಕ್ಕೆ ಕಾರಣಕರ್ತರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ಈ ಸಂದರ್ಭ ಸಚಿವರು ಅಭಿನಂದನೆ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಮೊಬೈಲ್ ಆಪ್ ಕರಪತ್ರ ಬಿಡುಗಡೆಗೊಳಿಸಿದ ಸಚಿವ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ರಾಜೇಶ್ ನಾಯ್ಕ್ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.IMG_20200815_152039

ಬಳಿಕ ಇತ್ತೀಚೆಗಷ್ಠೆ ಅಡಿಕೆ ಮರ ಹತ್ತುವ ಯಂತ್ರವನ್ನು ಅನ್ವೇಷಿಸಿ ರೈತರ ಗಮನಸೆಳೆದಿದ್ದ  ಗಣಪತಿ ಭಟ್ ಮತ್ತು ಅವರ ಮಗಳು ಯಂತ್ರದ ಮೂಲಕ ಅಡಕೆ ಮರವೇರಿ ಪ್ರಾತ್ಯಕ್ಷಿಕೆ ನೀಡಿ ಸಚಿವರಿಂದ ಶಹಭಾಸ್ ಗಿರಿ ಪಡೆದರು.ಇದೇವೇಳೆಈ ಯಂತ್ರಕ್ಕೆ ಸಹಾಯಧನ ಕೊಡಿಸುವಂತೆಯು ಸಚಿವರಲ್ಲಿ ಮನವಿ ಮಾಡಿದರು.ಈ ಬಗ್ಗೆ ಸಮಗ್ರವಾದ ಮಾಹಿತಿಯಳ್ಳು ಮನವಿಯನ್ನು ಶಾಸಕರ ಮೂಲಕ ಸಲ್ಲಿಸುವಂತೆ ಸಚಿವರು ಸೂಚಿಸಿದರು.ಈಗಾಗಲೇ ಅನೇಕ ಕೃಷಿ ಕರು ಈ ಯಂತ್ರ ಸದುಪಯೋಗ ಪಡಿಸಿಕೊಂಡ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಾಯಿತು.IMG_20200815_152757

ಪಣೋಲಿಬೈಲಿಗೆ ಭೇಟಿ:
ಇದಕ್ಕೂ ಮೊದಲು ಸಚಿವರು,ಶಾಸಕರು ಕಾರಣೀಕ ಕ್ಷೇತ್ರವಾದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ದೈವಸ್ಥಾನದ ಕಾರುಣಿಕ ವನ್ನು ಕೇತ್ರದ ಪ್ರಮುಖರು ವಿವರಿಸಿದರಲ್ಲದೆ ವಿವಿಧ ಬೇಡಿಕೆಯ ಮನವಿಯನ್ನು ಸಚಿವರಿಗೆ ಸಲ್ಲಿಸಲಾಯಿತು.IMG-20200815-WA0138

ಈ ಸಂದರ್ಭದಲ್ಲಿ ಬೂಡ ಆದ್ಯಕ್ಷ ದೇವದಾಸ ಶೆಟ್ಟಿ, ಬಿಜೆಪಿ ಆಧ್ಯಕ್ಷ ದೇವಪ್ಪ ಪೂಜಾರಿ, ಮಾಜಿ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ,ಜಲಮಂಡಳಿ ನಿರ್ದೇಶಕಿ  ಸುಲೋಚನ ಜಿ.ಕೆ.ಭಟ್, ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಸಂಕೇಶ, ರಾಮ್ ದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ಪ್ರಕಾಶ್ ಅಂಚನ್, ಪುರುಷೋತ್ತಮ ಶೆಟ್ಟಿ ವಾಮದಪದವು,ರೋನಾಲ್ಡ್ ಡಿ’ಸೋಜ      ಅಮ್ಟಾಡಿ, ಪ್ರವೀಣ್ ಗಟ್ಟಿ, ಯಶವಂತ ನಗ್ರಿ, ಸೀತರಾಮ ಆಗರಿಬೆಟ್ಟು, ಲೋಹಿತ್ ಪಣೋಲಿಬೈಲು, ವಜ್ರನಾಭ ಕಲ್ಲಡ್ಕ,  ಮುಳ್ಳುಂಜ ವೆಂಕಟೇಶ್ವರ ಭಟ್ ,ತಹಶೀಲ್ದಾರ್  ರಶ್ಮಿ ಎಸ್. ಆರ್, ಜಂಟಿ ಕೃಷಿ ನಿರ್ದೇಶಕಿ ಸೀತಾ, ತಾ.ಪಂ.ಇ.ಒ.ರಾಜಣ್ಣ, ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ, ಹಿರಿಯ ತೋಟಗಾರಿಕ ಸಹಾಯಕ ನಿರ್ದೇಶಕ ಪ್ರದೀಪ್ ಡಿ.ಸೋಜ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಪಣೋಲಿಬೈಲು ಕಾರ್ಯನಿರ್ವಣಾಧಿಕಾರಿ ಪ್ರವೀಣ್,ಗ್ರಾಮ ಕರಣೀಕರಾದ ಸ್ವಾತಿ,ಧರ್ಮಸಾಮ್ರಾಜ್, ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter