Published On: Sat, Aug 15th, 2020

ಸ್ವಾತಂತ್ರ್ಯ ದಿನಾಚರಣೆ: ಕೊರೋನ ವಾರಿಯಸ್೯, ಎಸ್ ಎಸ್ ಎಲ್ ಸಿ,ಸಾಧಕರಿಗೆ ಅಭಿನಂದನೆ

ಬಂಟ್ವಾಳ: ಬಿ.ಸಿ.ರೋಡಿನ ಮಿನಿವಿಧಾನಸೌಧದ ಮುಂಭಾಗ ಶನಿವಾರ ನಡೆದ ಬಂಟ್ವಾಳ ತಾಲೂಕು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೊರೋನವಾರಿಯಸ್೯ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್ .ಅವರು ದ್ವಜಾರೋಹಣ ನೆರವೇರಿಸಿ ಶುಭಸಂದೇಶವಿತ್ತರು.DSC_9395

ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಮಾತನಾಡಿ, ಈ ಬಾರಿಯ ಅನೀವಾರ್ಯಪರೊಸ್ಥಿತಿಯಲ್ಲಿ ಸ್ವಾತಂತ್ರ್ಯದೊನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಿಸಲಾಗಿದ್ದು,ಕೊರೋನ ವಾರಿಯಸ್೯ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಆರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದರು.ಇದೇ ವೇಳೆ ಅಂಬ್ಯುಲೆನ್ಸ್ ಚಾಲಕರನ್ನು ಗೌರವಿಸಲಾಯಿತು.IMG-20200815-WA0058

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದು ತಾಲೂಕಿಗೆ ಹೆಮ್ಮೆ ತಂದ ವಿದ್ಯಾರ್ಥಿನಿ ಅವ್ರಿಲ್ ಲೀವಾ ಲೂವಿಸ್ ಹಾಗೂ ಕಾಲಬೆರಳಲ್ಲಿ ಪರೀಕ್ಷೆ ಬರೆದು ರಾಜ್ಯದ ಗಮನಸೆಳೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದ ಕೌಶಿಕ್ ಆಚಾರ್ಯ ರನ್ನು ಅಭಿನಂದಿಸಲಾಯಿತು.

ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ,ಉಪಾಧ್ಯಕ್ಷ ಅಬ್ಬಾಸ್ ಆಲಿ,ಎಪಿಎಂಸಿ ಅಧ್ಯಕ್ಷ ನೇಮಿರಾಜ ರೈ,ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ,ತಾಪಂ ಇಒ ರಾಜಣ್ಣ,ಶಿಕ್ಷಣಾಧಿಕಾರಿ ಜ್ಞಾನೇಶ್,ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು,ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್,ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ,ಶಿಶು ಅಭಿವೃದ್ದಿ ಅಧಿಕಾರಿ ಗಾಯತ್ರಿ ರವೀಂದ್ರ ಕಂಬಳಿ,ಸಹಾಯಕ ಕೃಷಿ ಅಧಿಕಾರಿ ನಾರಾಯಣ ಶೆಟ್ಟಿ,ಬಂಟ್ವಾಳ ಉಪವಿಭಾಗದ ಡಿವೈಎಸ್ ಪಿ ವೆಲೆಂಟೀನ್ ಡಿಸೋಜ ಮಾದಲಾದವರಿದ್ದರು. ಕಂದಾಯ ನಿರೀಕ್ಷಕ ರಾಮಕಾಟಿಪಳ್ಳ ಸ್ವಾಗತಿಸಿ,ವಂದಿಸಿದರು.ಬಂಟ್ವಾಳ ಹೋಬಳಿಯ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಕೊರೋನಾ ವಾರಿಯಸ್೯ಗಳ ವಿವರ ನೀಡಿದರು. ಇದಕ್ಕು ಮೊದಲು ಪೊಲೀಸ್ ಹಾಗೂ ಗೃಹರಕ್ಷಕದಳದಿಂದ ಎಸ್ .ಐ.ಗಳಾದ ಅವಿನಾಶ್,ಪ್ರಸನ್ನ ರವರ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter