ಬಜಪೆ ಗ್ರಾಮ ಪಂಚಾಯತಿಯಲ್ಲಿ ಸಾಯೀಶ್ ಚೌಟ ಧ್ವಜಾರೋಹಣಗೈ ಸರಳ ರೀತಿಯಲ್ಲಿ
ಬಜಪೆ :74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಜಪೆ ಗ್ರಾಮ ಪಂಚಾಯತಿಯಲ್ಲಿ ಸರಳ ಸುಂದರ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಧ್ವಜಾರೋಹಣ ನೆರವೇರಿಸಿದರು.
ನಂತರ ನಡೆದ ಸಮಾರಂಭದಲ್ಲಿ ಕೊರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ವೈದ್ಯಾಧಿಕಾರಿಗಳು, ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು, ಬೀಟ್ ಪೊಲೀಸ್, ಸ್ವಚ್ಚತಾಗಾರರು,ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯತಿ ಸಿಬ್ಬಂದಿಗೆ ಸನ್ಮಾನಿಸಲಾಯಿತು.
ಪಂಚಾಯತಿಯ ಮಾಜಿ ಅಧ್ಯಕ್ಷರಾಗಿದ್ದ ಹರಿಣಾಕ್ಷಿ, ಸುರೇಂದ್ರ ಪೆರ್ಗಡೆ, ಸಾಹುಲ್ ಹಮೀದ್, ಮಹಮ್ಮದ್ ಶರೀಫ್,ಪ್ರದೀಪ್ ಸುವರ್ಣ,ರೋಝಿ ಮಥಾಯಸ್,ಮತ್ತು ಜಿ.ಪಂ.ಮಾಜಿ ಉಪಾಧ್ಯಕ್ಷರಾದ ರಿತೇಶ್ ಶೆಟ್ಟಿ ಉಪಸ್ತಿತರಿದ್ದು, ಪಂಚಾಯತಿ ಮಾಜಿ ಸದಸ್ಯರು ಗ್ರಾಮಸ್ಥರು ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತಿ ಇದ್ದರು.ಸದಸ್ಯರಾದ ಲೋಕೇಶ್ ಪೂಜಾರಿ ಸ್ವಾಗತಿಸಿ ಪಿಡಿಒ ಸಾಯೀಶ್ ಚೌಟ ಕಾರ್ಯಕ್ರಮ ನಿರ್ವಹಿಸಿದರು.