Published On: Fri, Aug 14th, 2020

ವಿಶ್ವ ಹಿಂದೂ ಪರಿಷತ್ ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ”ಅಖಂಡ ಭಾರತ ಸಂಕಲ್ಪ ದಿನ”

ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ “ಅಖಂಡ ಭಾರತ ಸಂಕಲ್ಪ ದಿನ” ಕಾರ್ಯಕ್ರಮ ಬಿಸಿರೋಡಿನ ಶಿವಳ್ಳಿ ಸಭಾ ಭವನದಲ್ಲಿ ನಡೆಯಿತು.ಭಾರತ ಮಾತಾ ಮಾತಪೂಜನಾ ಛಾಯಾಚಿತ್ರಕ್ಕೆ ಆರತಿ ಎತ್ತುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು.ab7d502d-19da-44c1-a847-4770f27bdafe

ದಿಕ್ಸೂಚಿ ಭಾಷಣ ಮಾಡಿದ ಭಜರಂಗದಳ ಪ್ರಾಂತ ಸಂಚಾಲಕ ಕೆ.ಆರ್.ಸುನಿಲ್ , ಹಿಂದೂ ಸಮಾಜದ ಮೇಲೆ ಮುಸ್ಲಿಂ ಸಮುದಾಯ ನಿರಂತರವಾಗಿ ದಾಳಿ ನಡೆಸುತ್ತಾ ಬಂದಿದೆ, ಅದರ ಮುಂದುವರಿದ ಭಾಗವೇ ಬೆಂಗಳೂರು, ಮಂಗಳೂರು ದಾಳಿ ಪ್ರಕರಣ ಎಂದು ಅವರು ಹೇಳಿದರು.e50a6ba1-ab2b-4ca8-b5e6-1a68742f217f

ಇದು ವ್ಯವಸ್ಥಿತ ಸಂಚು , ಇಂತಹ ದಾಳಿಯನ್ನು ನಡೆಸಿ ಮತಾಂತರ ಮಾಡುವ ಹುನ್ನಾರವನ್ನು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.ಸಂಘನೆಯ ನಿರಂತರವಾದ ಹೋರಾಟದ ಫಲವಾಗಿ ಅನೇಕ ವಿಚಾರಗಳು ಹಿಂದೂ ರಾಷ್ಟ್ರದ ಪುನರುತ್ಥಾನದ ಕಾರ್ಯಕ್ಕೆ ಪ್ರೇರಣೆ ಯಾಗಿದೆ.ನಮ್ಮ ಧಾರ್ಮಿಕ ಭಾವನೆಗಳ ಮೇಲೆ , ಸಂಸ್ಕೃತಿಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದ್ದು, ಇದರ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಟ ಮಾಡಬೇಕಾದ ಸ್ಥಿತಿ ಹಿಂದೂ ರಾಷ್ಟ್ರದ ಹಿಂದೂಗಳಿಗೆ ಒದಗಿದೆ ಎಂಬುದು ಬೇಸರದ ಸಂಗತಿ ಎಂದರು.e65b240a-82ea-4c38-ac1c-4a91869742d9

ಸಂಘಟನೆ ನಿರಂತರವಾಗಿ ಸಮಾಜಕ್ಕೋಸ್ಕರ ಹಗಲಿರುಳು ಶ್ರಮಿಸುತ್ತಿದೆ. ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದು , ಸವಾಲು ಗಳನ್ನು ಎದುರಿಸಿ ಭಾರತವನ್ನು ವಿಶ್ವಗುರು ಮಾಡುವುದು ಪ್ರಧಾನಿ ನರೇಂದ್ರ ಮೋದಿ ಯವರ ಕನಸು, ಅವರ ಸಂಕಲ್ಪ ಕ್ಕೆ ನಾವೆಲ್ಲರೂ ಒಂದಾಗಿ ಬೆಂಬಲ ನೀಡೋಣ ಎಂದು ಅವರು ಹೇಳಿದರು. ‌ವಿಶ್ವಹಿಂದೂ ಪರಿಷತ್ ಜಿಲ್ಲಾ ಪ್ರಮುಖ್ ಆಶೋಕ್ ಶೆಟ್ಟಿ ಸರಪಾಡಿ ಪ್ರಸ್ತಾವಿಕವಾಗಿ ಮಾತನಾಡಿ ದರು. ಜಿಲ್ಲಾ ಸಹಸಂಚಾಲಕರಾದ ಭರತ್ ಕುಮ್ಡೇಲು, ಗುರುರಾಜ್ ಬಂಟ್ವಾಳ, ಪ್ರಖಂಡ ಸಂಚಾಲಕ ಶಿವಕುಮಾರ್ ತುಂಬೆ, ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ಸುರೇಶ್ ಬೆಂಜನಪದವು, ಪ್ರಸಾದ್ ರಾಮನಗರ, ಅಭಿನ್ ರೈ, ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter