Published On: Fri, Aug 14th, 2020

ಎಸ್ ಡಿಪಿಐ,ಕೆಎಫ್ ಡಿ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಹಿ.ಜಾ.ವೇ.ಯಿಂದ ಪ್ರತಿಭಟನೆ

ಬಂಟ್ವಾಳ: ಕೆ.ಜೆ. ಹಳ್ಳಿ ಹಾಗೂ ಡಿ.ಜೆ.ಹಳ್ಳಿಯಲ್ಲಿ ಕ್ಷುಲಕ ವಿಷಯಕ್ಕೆ ಪೂರ್ವ ನಿಯೋಜಿತ ವಾಗಿ ಆರಕ್ಷಕ ಠಾಣೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು‌ ಧ್ವಂಸ ಮಾಡಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಎಸ್ ಡಿ ಪಿಐ ಹಾಗೂ ಕೆ ಎಫ್ ಡಿ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ವತಿಯಿಂದ ಬಿ.ಸಿ.ರೋಡಿನ ಮಿನಿವಿಧಾನಸೌಧ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಯಿತು.16-54-28-IMG-20200814-WA0017-768x432
ಹಿಂದೂ ಜಾಗರಣ ವೇದಿಕೆಯ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ ಅನ್ಯ ಧರ್ಮಿಯರ ವಿರುದ್ದ ದ್ವೇಷವನ್ನು ಕಾರುತ್ತ ಸರಕಾರಿ ಆಸ್ತಿ ಪಾಸ್ತಿಗಳನ್ನು ಧ್ವಂಸ ಮಾಡಿ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುವ ಕೃತ್ಯದಲ್ಲಿ ಭಾಗಿಯಾಗಿರುವ ಮತಾಂಧ ಮತ್ತು ಭಯೋತ್ಪಾದಕತೆಗೆ ಕುಮ್ಮಕ್ಕು ನೀಡುತ್ತಿರುವ ಸಂಘಟನೆಗಳನ್ನು ತಕ್ಷಣವೇ ಸರಕಾರ ನಿಷೇಧ ಮಾಡಬೇಕು, ಈ ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಕೂಡಲೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ವಿಭಾಗದ ಮಾತೃ ಸುರಕ್ಷ ಸಂಯೋಜಕ ಗಣರಾಜ ಭಟ್ ಕೆದಿಲ  ಮಾತನಾಡಿ ಮಹಮ್ಮದ್ ಅಲಿ ಜಿನ್ನನ ಕನಸನ್ನು ನನಸು ಮಾಡುವ ಪೂರ್ವ ನಿಯೋಜಿತ ಕೃತ್ಯವನ್ನು ಕೆಎಫ್ ಡಿ ಸಂಘಟನೆ ಮಾಡಿದೆ.  ಪೂರ್ವ ನಿಯೋಜಿತ ಕೃತ್ಯ ಅಲ್ಲದೆ ಇದ್ದರೆ ಹಳ್ಳಿಗಳ ದಾರಿಗಳನ್ನು ಬಂದ್ ಮಾಡಿದ್ದು ಹೇಗೆ?, ಪೊಲೀಸ್ ವಾಹನ, ಅಗ್ನಿಶಾಮಕ ದಳದ ವಾಹನಗಳು ಬಾರದಂತೆ ತಡೆದಿದ್ದು ಹೇಗೆ ? ಎಂದು ಪ್ರಶ್ನೆ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ರವಿರಾಜ್ ಬಿ.ಸಿ.ರೋಡು, ರತ್ನಾಕರ ಶೆಟ್ಟಿ, ಟಿ.ಜಿ.ರಾಜಾರಾಮ ಭಟ್,   ರಾಜರಾಮ್ ನಾಯಕ್,  ಬಾಲಕೃಷ್ಣ, ಜಗದೀಶ್, ಪ್ರಶಾಂತ್ ಕೆಂಪುಗುಡ್ಡೆ, ಗಣೇಶ್ ಕುಲಾಲ್ ಕೆದಿಲ, ಅರುಣ್ ಕುಲಾಲ್ ಸಜೀಪ, ಆರ್ ಎಸ್ ಎಸ್ ನ ಚೇತನ್ ಕುಮಾರ್ ಮೊದಲಾದವರು ಹಾಜರಿದ್ದರು.
ಬಳಿಕ ತಹಶೀಲ್ದಾರ್ ಮೂಲಕ ಸರಕಾರ ಕ್ಕೆ ಮನವಿ ಸಲ್ಲಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter