Published On: Wed, Aug 12th, 2020

ವಿಧೇಯತೆ ಸಾಧನೆಗೆ ಪ್ರೇರಣೆ :ಫಾದರ್ ಗ್ರೆಗರಿ ಪಿರೇರಾ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಧಿಕ ಅಂಕ : ಸೂರಿಕುಮೇರು ಚರ್ಚ್ ನಿಂದ ಅಬಿನಂದನೆ.

ಬಂಟ್ವಾಳ : ವಿದ್ಯಾರ್ಥಿಗಳ ವಿಧೇಯತೆಯೇ ಸಾಧನೆಗೆ ಪ್ರೇರಣೆ , ಅದು ಸೃಷ್ಟಿಕರ್ತನಿಗೂ ಸಂತಸದಾಯಕ ಎಂದು ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚಿನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ಹೇಳಿದರು . ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ನ ಆಶ್ರಯದಲ್ಲಿ ಚರ್ಚ್ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಪಡೆದ ಪುತ್ತೂರಿನ ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿನಿಯಾದ ಶಾಲನ್ ರೀಯಾ ಮಾರ್ಟಿಸ್ (96.48%), ಪುತ್ತೂರು ಸಂತ ಫಿಲೋಮಿನಾ ಪ್ರೌಢ ಶಾಲೆಯ ವಿದ್ಯಾರ್ಥಿ ಜೆನಿಶ್ ಶೃಜನ್ ಮಾರ್ಟಿಸ್ (92.96%) ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿಯ ವಿದ್ಯಾರ್ಥಿ ಜೈಸನ್ ಲಸ್ರಾದೊ (91.68%) ರನ್ನು ಚರ್ಚ್ ವತಿಯಿಂದ ಅಭಿನಂದಿಸಿ ಅವರು ಮಾತನಾಡಿದರು. 8fe2cb74-1956-4b13-931f-c1241a3001f2

ನಮ್ಮ ಧರ್ಮ ಕೇಂದ್ರದ ಈ ಮೂವರು ವಿದ್ಯಾರ್ಥಿಗಳ ವಿಧೇಯತೆ ಮತ್ತು ಸಾಧನೆ ನಮ್ಮ ಧರ್ಮ ಕೇಂದ್ರಕ್ಕೆ ಕೀರ್ತಿಯನ್ನು ತಂದಿದೆ, ಧರ್ಮ ಕೇಂದ್ರದಲ್ಲಿ ಬಹಳ ವಿಧೇಯರಾಗಿ ವೇದಿಕೆಯಲ್ಲಿ ಸೇವೆಯನ್ನು ನೀಡುತ್ತಿದ್ದುದೇ ಇವರಿಗೆ ಸಿಕ್ಕ ಗೌರವ ಇದಾಗಿದ್ದು, ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲೂ ಇಂತಹಾ ಅಂಕಗಳಿಕೆ ನಿಜಕ್ಕೂ ಶ್ಲಾಘನೀಯ ಎಂದು ಹೃದಯಂತರಾಳದಿಂದ ಕೊಂಡಾಡಿದರು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಪಿರೇರಾ, ಮಾತನಾಡಿ ವಿದ್ಯಾರ್ಥಿಗಳ ಸಾಧನೆ ಧರ್ಮಕೇಂದ್ರಕ್ಕೆ ತಂದ ಕೀರ್ತಿಯಾಗಿದೆ ಎಂದರು. ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ನ್ಯಾನ್ಸಿ ಶುಭಾಹಾರೈಸಿದರು. ವಿದ್ಯಾರ್ಥಿನಿ ರಿಯಾಳ‌ ತಂದೆ ಸ್ಟೀವನ್ ಹಾಗೂ ತಾಯಿ ರಶ್ಮಿ ಮಾರ್ಟಿಸ್, ವಿದ್ಯಾರ್ಥಿ ಜೈಸನ್ ನ ತಂದೆ ಬೆನಡಿಕ್ಟ್ ಮತ್ತು ತಾಯಿ ಸೆವರಿನ್ ಲಸ್ರಾದೊ ರವರು ಮಕ್ಕಳ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚರ್ಚ್ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ, ಮಾಜಿ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ಮತ್ತು ಪಾಲನಾ ಸಮಿತಿಯವರು ವಿದ್ಯಾರ್ಥಿಗಳಿಗೆ ನೀಡುವ ಶೈಕ್ಷಣಿಕ ಪ್ರೋತ್ಸಾಹದ ಕುರಿತಾಗಿ ಬಗ್ಗೆ ಹೆತ್ತವರಾದ ಬೆನೆಡಿಕ್ಟ್ ಲಸ್ರಾದೊ ಮೆಚ್ಚುಗೆ ವ್ಯಕ್ತಪಡಿಸಿ,ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿ ಜೆನಿಶ್ ಶೃಜನ್ ಮಾರ್ಟಿಸ್ ಅನಿಸಿಕೆ ವ್ಯಕ್ತಪಡಿಸಿದರು.
ಶಿಕ್ಷಕಿ ಹಾಗೂ ವಿದ್ಯಾರ್ಥಿನಿ ಶಾಲನ್ ಮಾರ್ಟಿಸ್ ನ ತಾಯಿ ರಶ್ಮಿ ಮಾರ್ಟಿಸ್ ರವರು ಮಾತನಾಡಿ, ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದೊರಕುವಂತಾ ಪ್ರೋತ್ಸಾಹ, ಎಲ್ಲಾ ಚರ್ಚ್ ಗಳಲ್ಲಿ ದೊರಕುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸೂರಿಕುಮೇರು ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮುಖ್ಯಶಿಕ್ಷಕಿ ಸಿಸ್ಟರ್ ಲೊವಿಟಾ, ಸಮಿತಿಯ ಸಂಯೋಜಕರಾದ ಸ್ಟೀವನ್ ಪಾಯ್ಸ್, ಅನಿತಾ ಮಾರ್ಟಿಸ್ ಉಪಸ್ಥಿತರಿದ್ದರು. ಚರ್ಚ್ ಪಾಲನಾ‌ ಸಮಿತಿ ಕಾರ್ಯದರ್ಶಿ ಮೇರಿ ಡಿ’ಸೋಜ ಎಲ್ಲರಿಗೂ ಧನ್ಯವಾದ ವಿತ್ತರು. ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ರೋಶನ್ ಬೊನಿಫಾಸ್ ಮಾರ್ಟಿಸ್ ಕಾರ್ಯಕ್ರಮ ‌ನಿರ್ವಹಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter