Published On: Sat, Aug 8th, 2020

ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು : ರಮೇಶ್ ಕುಮಾರ್ ಸೂಚನೆ

ಶ್ರೀನಿವಾಸಪುರ: ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಅಗತ್ಯ ಇರುವ ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.IMG_20200808_182228

ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕುಂದು ಕೊರತೆ ವಿಚಾರಣಾ ಸಭೆಯಲ್ಲಿ ಮಾತನಾಡಿ, ಪಟ್ಟಣದ 24 ವಾರ್ಡ್‌ಗಳಲ್ಲಿ 115 ಕೊಳವೆ ಬಾವಿಗಳಿದ್ದು, 45 ಕೊಳವೆ ಬಾವಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. 30 ಕೊಳವೆ ಬಾವಿಗಳ ಪಂಪ್‌ ಮೋಟಾರ್‌ ದುರಸ್ತಿ ಆಗಬೇಕಾಗಿದೆ. ಕುಡಿಯುವ ನೀರು ಪೂರೈಕೆಗೆ ಪೂರಕವಾದ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯವಾದ ಹಣವನ್ನು ಸರ್ಕಾರದಿಂದ ಕೊಡಿಸಲಾಗುವುದು ಎಂದು ಹೇಳಿದರು.

2018 – 19ನೇ ಸಾಲಿನಲ್ಲಿ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನಗರೋತ್ಥಾನ ಯೋಜನೆಯಡಿ ರೂ.17 ಕೋಟಿ ಬಿಡುಗಡೆಯಾಗಿದೆ. ಆದರೆ ಪಟ್ಟಣದಲ್ಲಿ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ರಸ್ತೆಗಳ ಅಭಿವೃದ್ಧಿ ಕಾಣಿಸುತ್ತಿಲ್ಲ. ಹೀಗಾದರೆ ಪಟ್ಟಣ ಅಭಿವೃದ್ಧಿ ಹೊಂದುವುದಿಲ್ಲ. ಸರ್ಕಾರದಿಂದ ಬಂದ ಹಣ ಉದ್ದೇಶಿತ ಕಾರ್ಯಗಳಿಗೆ ವಿನಿಯೋಗವಾಗಬೇಕು ಎಂದು ಹೇಳಿದರು.

ಪುರಸಭೆ ಪೌರ ಕಾರ್ಮಿಕರಿಗೆ ಅಮಾನಿ ಕೆರೆ ಅಂಗಳದಲ್ಲಿ ನಿವೇಶನ ನೀಡಲಾಗುವುದು. ಅದಕ್ಕೂ ಮೊದಲು ಆ ಸ್ಥಳದ ಬಗ್ಗೆ ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಳಿಸಬೇಕಾಗಿದೆ ಎಂದು ಹೇಳಿದರು.ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌, ಪುರಸಬೇ ಸದಸ್ಯರಾದ ಅನ್ನೀಸ್‌ ಅಹಮದ್‌, ಭಾಸ್ಕರ್‌, ನಾಗೇಶ್‌, ಮುನಿರಾಜು, ಶ್ರೀನಿವಾಸ್‌, ಶಬ್ಬಿರ್‌, ಆರೋಗ್ಯಾಧಿಕಾರಿಗಳಾದ ಕೆ.ಜಿ.ರಮೇಶ್‌, ಪೃಥ್ವಿರಾಜ್‌, ಪರಿಸರ ಅಭಿಯಂತರ ಶೇಖರ್‌ ರೆಡ್ಡಿ ಇದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter