Published On: Sat, Aug 8th, 2020

ತಡೆಗೋಡೆ ಕುಸಿದು ತೋಟಕ್ಕೆ ನುಗ್ಗಿದ ನೀರು: ಅಪಾರ ಪ್ರಮಾಣದ ನಷ್ಟ:ಶಾಸಕರು,ಅಧಿಕಾರಿಗಳಿಂದ ಪರಿಶೀಲನೆ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ದಂಬೆದಾರ್ ಜಯ ಶೆಟ್ಟಿ ಇವರ ತೋಟದ ಬಳಿ ಹೊಳೆ ಬದಿ ಶನಿವಾರ ಬೆಳಗ್ಗಿನ ಜಾವ ತಡೆಗೋಡೆ ಕುಸಿದು ನೀರು ತೋಟಕ್ಕೆ ನುಗ್ಗಿ ಹಾನಿ ಸಂಭವಿಸಿದೆ.ಸುಮಾರು 60ಅಡಿ ಎತ್ತರದ ತಡೆಗೋಡೆ ಕುಸಿದ ಪರಿಣಾಮ ದಂಬೆದಾರ್,ಕಂಚಾರು ,ಕೇದಗೆ ಪರಿಸರದಲ್ಲಿ ತೋಟಕ್ಕೆ ನೀರು ನುಗ್ಗಿದ್ದಲ್ಲದೆ  ತೋಟದಲ್ಲಿ ಮರಳು ತುಂಬಿ ಅಡಕೆ ಗಿಡಗಳಿಗೆ ಹಾನಿಯಾಗಿದೆ ಪರಿಣಾಮ ಅಪಾರ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.IMG-20200808-WA0095

ಸುದ್ದಿ ತಿಳಿದ  ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ತಹಶೀಲ್ದಾರ್ ರಶ್ಮೀ ಎಸ್.ಆರ್ .ಕಂದಾಯಾಧಿಕಾರಿಗಳು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಷ್ಟದ ಬಗ್ಗೆ ಅಂದಾಜಿಸಿದ್ದಾರೆ.   ಈ ಸಂದರ್ಭದಲ್ಲಿ ಬಂಟ್ವಾಳ . ಜಿ.ಪಂ ಸದಸ್ಯ  ತುಂಗಪ್ಪ ಬಂಗೇರಾ,ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಪ್ರ.ಕಾರ್ಯದರ್ಶಿ ಡೊಂಬಯ ಅರಳ, ಪ್ರಮುಖರಾದ ಗಣೇಶ್ ರೈ,ಪುರುಷೋತ್ತಮ ಶೆಟ್ಟಿ ವಾಮದಪದವು,ದಿನೇಶ್ ದಂಬೆದಾರ್,ವಿಜಯ ರೈ,ಗೋಪಾಲಕೃಷ್ಣ ಚೌಟ,ಶ್ಯಾಮ್ ಪ್ರಸಾದ್ ಪೂಂಜಾ,ರವಿರಾಮ ಕಂಚಾರು,ಜಗದೀಶ್ ಉಳಗುಡ್ಡೆ, ವಿಶ್ವನಾಥ ,ಗ್ರಾಮ ಕರಣಿಕೆ ಸ್ವಾತಿ,ಕಂದಾಯ ನಿರೀಕ್ಷಕ ನವೀನ್ ,ನಾಗೇಶ್ ಶೆಟ್ಟಿ,ದೇವಿಪ್ರಸಾದ್     ಮತ್ತು ಸ್ಥಳೀಯರು ಉಪಸ್ಥಿತರಿದ್ದರು.                  IMG-20200808-WA0098

ಮೋರಿ ಕುಸಿತ:

ಹಾಗೆಯೇ ತಾಲೂಕಿನ ಉಳಿಗ್ರಾಮದ ರ್ಕಂಬಡ್ಕ-ಕುಂಜಳಿಕೆ ಸಂಪರ್ಕ ರಸ್ತೆಯಲ್ಲಿ ಮೋರಿ ಕುಸಿದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.ಪರಿಣಾಮ ಈ ಭಾಗದ ಸುಮಾರು 20ಮನೆಗಳಿಗೆ ಸಂಪರ್ಕರಸ್ತೆ ಕಡಿತಗೊಂಡಿದೆ.ಸದ್ಯ ಪರ್ಯಾಯಾ ರಸ್ತೆಯಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಅವಕಾಶ ಮಾಡಲಾಗಿದೆ.ಹಾಗೆಯೇ ತಾತ್ಕಾಲಿಕ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter