Published On: Sun, Aug 2nd, 2020

ಹಡಿಲು ಬಿದ್ದ ದೇವಸ್ಥಾನದ ಗದ್ದೆಗೆ ಕಾಯಕಲ್ಪನೀಡಿದ ನೆಟ್ಲದ ಗ್ರಾಮಸ್ಥರು

ಬಂಟ್ವಾಳ: ಹಡಿಲು ಬಿದ್ದ ದೇವಸ್ಥಾನ ವೊಂದರ ಗದ್ದೆಗೆ ಕಾಯಕಲ್ಪ ನೀಡಿ ಭತ್ತದ ಕೃಷಿ ಮಾಡಿ ದೇವಸ್ಥಾನಕ್ಕೆ ನೀಡುವ ಸಂಕಲ್ಪಕ್ಕೆ ನೆಟ್ಲದ ಗ್ರಾಮಸ್ಥರಿಂದ ಇಂದು ಆಗಸ್ಟ್ 2 ರಂದು ಆದಿತ್ಯವಾರ ಹಡಿಲು ಗದ್ದೆಯಲ್ಲಿ ಉಳುಮೆ ಮಾಡಿ ನೇಜಿ ನೆಟ್ಟು ಚಾಲನೆ ನೀಡಲಾಯಿತು.ಆರ್.ಎಸ್.ಎಸ್.ಪ್ರಮುಖ ರಾದ ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಸ್ವತಃ ಗದ್ದೆಗಿಳಿದು ನೇಜಿ ನೆಟ್ಟು ಚಾಲನೆ ನೀಡಿದ್ದಲ್ಲದೆ ಗ್ರಾಮಸ್ಥರ ಉತ್ತಮ ಕಾರ್ಯವನ್ನು ಶ್ಲಾಘಿಸಿದರು.aa31df53-d2e4-458a-a214-ee4acc8474a8

ಕೊರೊನಾ ಸಂಕಷ್ಟ ದೇವಸ್ಥಾನ ಗಳಿಗೂ ತಟ್ಟಿದೆ.ಕೊರೊನಾ ದಿಂದ ದೇವಸ್ಥಾನ ಗಳ ಆದಾಯಕ್ಕೂ ಕುತ್ತು ಬಿದ್ದಿದೆ.ಈ ಹಿನ್ನೆಲೆಯಲ್ಲಿ ದೇವಸ್ಥಾನ ಕ್ಕೆ ಪ್ರಯೋಜನ ವಾಗಲಿ ಎಂದು ಗ್ರಾಮಸ್ಥರು ಒಟ್ಟು ಸೇರಿ ಹಡಿಲು ಬಿದ್ದ ಗದ್ದೆಯಲ್ಲಿ ಭತ್ತದ ಕೃಷಿ ಮಾಡಿ ಅದರಲ್ಲಿ ಬೆಳೆದ ಭತ್ತವನ್ನು ದೇವಸ್ಥಾನ ನೀಡುವ ಮಾದರಿ ಕೆಲಸವನ್ನು ನೆಟ್ಲದಲ್ಲಿ ಮಾಡಿದ್ದಾರೆ.ಇತಿಹಾಸ ಪ್ರಸಿದ್ಧ ಸಾವಿರ ಸೀಮೆಯ ನಿಟಿಲಾಕ್ಷ ಸದಾಶಿವ ದೇವಸ್ಥಾನ ನೆಟ್ಲ ಕಲ್ಲಡ್ಕ, ಈ ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು ಎರಡು ಎಕರೆ ಗದ್ದೆ ಕಳೆದ ಹತ್ತು ವರ್ಷಗಳಿಂದ ಹಡಿಲು ಬಿದ್ದಿತ್ತು.ಈ ಬಾರಿ ಕೊರೊನಾ ಸಂಕಷ್ಟದ ದಿನಗಳಲ್ಲಿ ದೇವಸ್ಥಾನ ಕ್ಕೂ ಸಂಕಷ್ಟದ ದಿನಗಳು.9f01b8e4-ef63-4079-a84f-7c30fe758e6a

ಹಾಗಾಗಿ ದೇವಸ್ಥಾನ ಕ್ಕೆ ಆದಾಯದ ಹಿನ್ನೆಲೆಯಲ್ಲಿ ಹಡಿಲು ಬಿದ್ದಿರುವ ಗದ್ದೆಯಲ್ಲಿ ಭತ್ತದ ಕೃಷಿ ಮಾಡುವ ಬಗ್ಗೆ ಆರ್.ಎಸ್.ಎಸ್.ಪ್ರಮುಖ ಕಲ್ಲಡ್ಕ ಡಾ ! ಪ್ರಭಾಕರ್ ಭಟ್ ಅವರ ಮಾರ್ಗದರ್ಶನ ದಲ್ಲಿ ಗ್ರಾಮಸ್ಥರು ಸೇರಿ ಶ್ರಮದಾನದ ಮೂಲಕ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದರು.ಈ ಗದ್ದೆಯಲ್ಲಿ ಬೆಳೆದ ಭತ್ತವನ್ನು ದೇವಸ್ಥಾನಕ್ಕೆ ಮತ್ತು ಬೈ ಹುಲ್ಲನ್ನು ದೇವಸ್ಥಾನ ದ ಬಸವ ನಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಗ್ರಾಮಸ್ಥರು ಸಂಕಲ್ಪ ಮಾಡಿದ್ದಾರೆ.

b39911e2-b7f0-4533-a7af-7e966efb1a9b

ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಮಾತನಾಡಿ:
ನಿಟಿಲೇಶ್ವರ ಸನ್ನಿಧಿಯಲ್ಲಿ ಅತನ ಆಶೀರ್ವಾದ ದಿಂದ ನಿಟಿಲೇಶ್ವರ ದೇವಸ್ಥಾನ ದ ಗದ್ದೆಯಲ್ಲಿ ನೇಜಿ ನೆಡುವ ಅಂದರೆ ಕೃಷಿ ಯನ್ನು ಪುನರುಜ್ಜೀವನ ಗೊಳಿಸುವಂತಹ ದೊಡ್ಡ ಪ್ರಯತ್ನ ನೆಟ್ಲದ ಸುತ್ತಮುತ್ತಲಿನ ಭಕ್ತಾಧಿಗಳಿಂದ ನಡೆಯುತ್ತಿದೆ.ನಮ್ಮ ದೇಶದ ಮೂಲ ಶಕ್ತಿ ಇರುವುದು ಹಳ್ಳಿಯಲ್ಲಿ, ಹಳ್ಳಿಯ ಮೂಲ ಶಕ್ತಿ ಯಿರುವುದು ಕೃಷಿಯಲ್ಲಿ, ಹಾಗಾಗಿ ಮತ್ತೊಮ್ಮೆ ಕೃಷಿಯಕಡೆಗೆ ಜನ ಹೋಗಬೇಕು , ಕೇವಲ ಸಾಪ್ಟ್ ವೇರ್ ಆಗುವುದು, ಹಣ ಗಳಿಸುವುದು , ಹಣವನ್ನು ತಿಂದು ಬದುಕಲು ಸಾಧ್ಯವಿಲ್ಲ. ಜೀವನಕ್ಕೆ ಆಹಾರ ಧಾನ್ಯ ಗಳೇ ಬೇಕು .ಆಹಾರ ಧಾನ್ಯ ಗಳಲ್ಲಿ ಭತ್ತ ಪ್ರಮುಖವಾದದ್ದು, ಅ ಹಿನ್ನೆಲೆಯಲ್ಲಿ ಭತ್ತದ ಕೃಷಿಯನ್ನು ಮಾಡುವ ದೊಡ್ಡ ಪ್ರಯತ್ನ ಭಕ್ತಾದಿಗಳು ಮಾಡಿದ್ದಾರೆ.ಇದರ ಪ್ರೇರಣೆ ಯಿಂದ ಜಿಲ್ಲೆ ಯಲ್ಲಿ ಹಡಿಲು ಬಿದ್ದಿರುವ ಎಲ್ಲಾ ಗದ್ದೆಗಳಲ್ಲಿ ಭತ್ತದ ಕೃಷಿಯ ಆಗಲಿ ಎಂದು ಅವರು ಹೇಳಿದರು.

ವಿಜೇತ್ ಹೊಳ್ಳ ದೇವಸ್ಥಾನ ಪ್ರಧಾನ ಅರ್ಚಕರು, ನೇಜಿ ನೆಡುವ ಮೊದಲು ವಿಶೇಷ ಪ್ರಾರ್ಥನೆ ಯನ್ನು ಗದ್ದೆಯಲ್ಲಿ ಮಾಡಿದರು.ಈ ಗದ್ದೆಗೆ ಗ್ರಾಮಸ್ಥ ಕಿರಣ್ ನೆಟ್ಲ ನೀರು ಒದಗಿಸಲು ಸಹಕಾರ ನೀಡಿದ್ದಾರೆ.ಕುಮಾರ್ ಸ್ವಾಮಿ ಕೃಷಿಕರು.ದೇವಸ್ಥಾನದ ಮ್ಯಾನೇಜರ್, ಮಾದವ ಭಟ್,ನವೀನ್ ಶೆಟ್ಟಿ ಚನಿಲ, ಅನಿಲ್ ದೇವಾಡಿಗ, ರವಿ ದೇವಾಡಿಗ, ವಿನಯ ಗಟ್ಟಿ, ಪ್ರಸನ್ನ ಕುಮಾರ್, ಐತ್ತಪ್ಪ ನಾಯ್ಕ್, ಜಗನ್ನಾಥ ಕುಲಾಲ, ನಾಗೇಶ ಎನ್, ಮಾದವ ಗಟ್ಟಿ, ಇಂದಿರಾ, ಭಾಗ್ಯ, ಸುಮತಿ , ಪುಷ್ಪ, ರತ್ನಾವತಿ ಮತ್ತು ಊರವರು ಭಾಗವಹಿಸಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter