Published On: Sun, Aug 2nd, 2020

ಲೊರೆಟ್ಟೊ: ಲಯನ್ಸ್ ಕ್ಲಬ್ ಪದಗ್ರಹಣ ‘ಕೋವಿಡ್ ನಿಯಂತ್ರಣಕ್ಕೆ ರೂ 7.5ಲಕ್ಷ, ಶವಾಗಾರಕ್ಕೆ ರೂ 6.5ಲಕ್ಷ ಕೊಡುಗೆ’

ಬಂಟ್ವಾಳ: ಜಗತ್ತಿಗೆ ಮಹಾಮಾರಿಯಾಗಿ ಕಾಡುತ್ತಿರುವ ಕೊರೋನ ಸೋಂಕು ವಿಸ್ತರಣೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಗೆ ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ವತಿಯಿಂದ ರೂ 7.50ಲಕ್ಷ ವೆಚ್ಚದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಸಹಿತ ಪಿಪಿಇ ಕಿಟ್ ವಿತರಣೆಗೆ ವಿನಿಯೋಗಿಸಿದೆ ಎಂದು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ರೊನಾಲ್ಡ್ ಐಸಾಕ್ ಗೋಮ್ಸ್ ಹೇಳಿದ್ದಾರೆ.

1btl-Lions
ಇಲ್ಲಿನ ಲೊರೆಟ್ಟೊ ಮಾತಾ ಚರ್ಚಿನ ಸಭಾಂಗಣದಲ್ಲಿ ಲೊರೆಟ್ಟೊ-ಅಗ್ರಾರ್ ಲಯನ್ಸ್ ಕ್ಲಬ್ ವತಿಯಿಂದ ಗುರುವಾರ ಸಂಜೆ ನಡೆದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಜಾನ್ ಸಿರಿಲ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎಸ್.ಸಂಜೀವ ಶೆಟ್ಟಿ ಮಾತನಾಡಿ, ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ರೂ 6.50ಲಕ್ಷ ವೆಚ್ಚದಲ್ಲಿ 4 ಹೊಸ ಶವಾಗಾರ ಸಿದ್ಧಗೊಳ್ಳಲಿದೆ ಎಂದರು.

ಲಯನ್ಸ್ ವಲಯಾಧ್ಯಕ್ಷ ಶ್ರೀನಿವಾಸ ಪೂಜಾರಿ, ಸಚಿನ್ ಶೆಟ್ಟಿ ಮೆಲ್ಕಾರ್ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿ ಡಾ.ಮೆಲ್ವಿನ್ ಡಿಸೋಜ ಸದಸ್ಯತ್ವ ಬಗ್ಗೆ ಮಾಹಿತಿ ನೀಡಿದರು.ಕ್ಲಬ್ಬಿನ ಹಾಲಿ ಕಾರ್ಯದರ್ಶಿ ಪ್ರಿನೀತ್ ರಾಡ್ರಿಗಸ್, ಕೋಶಾಧಿಕಾರಿ ಎವ್ಜಿನ್ ಲೋಬೊ, ನಿಕಟಪೂರ್ವ ಕಾರ್ಯದರ್ಶಿ ಐರಿನ್ ಡಿಸೋಜ, ಕೋಶಾಧಿಕಾರಿ ಗ್ರೆಟ್ಟಾ ರಾಡ್ರಿಗಸ್ ಮತ್ತಿತರರು ಇದ್ದರು. ಇದೇ ವೇಳೆ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ರೊನಾಲ್ಡ್ ಐ.ಗೋಮ್ಸ್ ಇವರನ್ನು ಸನ್ಮಾನಿಸಿ, ರೂ 1.30ಲಕ್ಷ ವೆಚ್ಚದ ವಿವಿಧ ಜನಪರ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.ಕ್ಲಬ್ಬಿನ ನಿಕಟಪೂರ್ವ ಅಧ್ಯಕ್ಷ ಲಿಗೋರಿ ಲೋಬೊ ಸ್ವಾಗತಿಸಿ, ಕಾರ್ಯದರ್ಶಿ ಪ್ರಿನೀತ್ ರಾಡ್ರಿಗಸ್ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter