Published On: Sat, Aug 1st, 2020

ಬಂಟ್ವಾಳ ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣೆ ಸಭೆ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಯುವ ಮೋರ್ಚಾದ ನೂತನ ಪದಾಧಿಕಾರಿಗಳ ಘೋಷಣೆ ಹಾಗೂ ಪ್ರಥಮ ಕಾರ‍್ಯಕಾರಣಿ ಸಭೆಯು ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಶನಿವಾರ ನಡೆಯಿತು. ದ.ಕ.ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ  ಗುರುದತ್ತ್ ನಾಯಕ್  ಕಾರ‍್ಯಕಾರಣಿ ಸಭೆಯನ್ನು ದೀಪ ಬೆಳಗಿಸಿ,ಭಾರತ ಮಾತೆಗೆ ಪುಪ್ಷಾರ್ಚನೆಗೈದು ಉದ್ಫಾಟಿಸಿ ಮಾತನಾಡಿ,ಯುವ ಮೋರ್ಚಾ ಕಾರ‍್ಯಕರ್ತರು ಅಪೇಕ್ಷೆ ರಹಿತವಾಗಿ ಮತ್ತು ಪ್ರಬುದ್ಧತೆಯಿಂದ ಕೆಲಸ ಮಾಡಿದಾಗ ಪಕ್ಷ ಬಲಿಷ್ಠವಾಗಿ ರೂಪುಗೊಳ್ಳುತ್ತದೆ ಎಂದು ಹೇಳಿದರು.
IMG-20200801-WA0044
  ಅತಿಥಿಯಾಗಿದ್ದ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಮಾತಾನಾಡಿ ಯುವ ಮೋರ್ಚಾದ ಕಾರ್ಯಕರ್ತರು ಪಕ್ಷದ ತತ್ವ ಸಿದ್ದಾಂತದ ಆಧಾರ ಹಾಗೂ ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಂಡು ಬೂತ್ ಮಟ್ಟದಲ್ಲಿ ಯುವ ಮೋರ್ಚಾ ತಂಡವನ್ನು ರಚಿಸಬೇಕು ಎಂದು ಸಲಹೆ ನೀಡಿದರು. ಹಿರಿಯರು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ.ನಾವೂ ಕೂಡ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಬೇಕು ಎಂದ ಅವರು,ನೂರು ವರ್ಷಗಳ ಅಪೇಕ್ಷೆ ನಮ್ಮ ಕಣ್ಣ ಮುಂದಿದ್ದು, ಅದೆಲ್ಲವೂ ನನಸಾಗುವ ಸಂದರ್ಭ ಒದಗಿದೆ.ಆ ನಿಟ್ಟಿನಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.                                ಬಂಟ್ವಾಳ ಕ್ಷೇತ್ರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು ಅಧ್ಯಕ್ಷತೆ ವಹಿಸಿದ್ದರು.
IMG-20200801-WA0042
ಪಕ್ಷದ ಜಿಲ್ಲಾ ಪ್ರ.ಕಾರ‍್ಯದರ್ಶಿ ರಾಮ್‌ದಾಸ್ ಬಂಟ್ವಾಳ ,  ಜಿಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ,ಪ್ರಮಖರಾದ ಸಂದೇಶ್ ಶೆಟ್ಟಿ,ಸಹಜ್ ರೈ,ಸುದರ್ಶನ್ ಬಜ,ಸುಜಿತ್ ಕಂಬಳಪದವು, ಬಂಟ್ವಾಳ ಕ್ಷೇತ್ರ ಸಮಿತಿಯ ಪ್ರ.ಕಾರ‍್ಯದರ್ಶಿ ಡೊಂಬಯ್ಯ ಅರಳ,ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ,ದಿನೇಶ್ ಶಟ್ಟಿ ಮೊದಲಾದವರಿದ್ದರು. ಇದೇ ವೇಳೆ ಯುವಮೋರ್ಚಾದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಘೋಷಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter