Published On: Fri, Jul 31st, 2020

ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ:ಒಗ್ಗಟ್ಟಾಗಿ ಪಕ್ಷ ಬಲಪಡಿಸಿ ಪೂಜಾರಿಯಿಂದ ಡಿ.ಕೆ.ಶಿ.ಗೆ ಸಲಹೆ

ಬಂಟ್ವಾಳ: ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಾಗಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ.ಶುಕ್ರವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ,ಮಾಜಿ ಸಚಿವ ಡಿ.ಕೆ.ಶಿವಕುಮಾರ್,ಕಾರ್ಯಾಧ್ಯಕ್ಷ ಸಲೀಂ ಆಹ್ಮದ್ ಅವರು ಬಂಟ್ವಾಳ ಬಸ್ತಿಪಡ್ಪುವಿನಲ್ಲಿ ವಾಸ್ತವ್ಯವಿರುವ ಪಕ್ಷದ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ ಸಂದರ್ಭದಲ್ಲಿ  ಪೂಜಾರಿಯವರು ಈ ಸಲಹೆ ನೀಡಿದ್ದಾರೆ. ಇದೇ ವೇಳೆ ಕೇಂದ್ರದಲ್ಲಿ ಪೂಜಾರಿಯವರು ಹಣಕಾಸು ಸಚಿವರಾಗಿದ್ದಾಗ ಬಡವರಪಾಲಿಗೆ  ಸಾಲಮೇಳದ ಮೂಲಕ ಮನೆಮಾತಾಗಿರುವುದನ್ನು ಡಿ.ಕೆ.ಶಿ.ಯವರು ಮೆಲುಕು ಹಾಕಿದರು.18-02-52-WhatsApp-Image-2020-07-31-at-16.28.59

ಸುಮಾರು ಆರ್ಧತಾಸುಗಳ ಕಾಲ ಜನಾರ್ಧನ ಪೂಜಾರಿಯವರೊಂದಿಗಿದ್ದ ಡಿ.ಕೆ.ಶಿ.ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆಯು ಚರ್ಚಿಸಿದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಪೂಜಾರಿಯವರು ಸೂಚಿಸಿದರು. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಪೂಜಾರಿಯವರ ಕಾಲಿಗೆ ನಮಸ್ಕರಿಸಿದ ಡಿ.ಕೆ.ಶಿಯವರನ್ನು ಪೂಜಾರಿಯವರು ಶಾಲುಹೊದಿಸಿ,ಪುಷ್ಪಗುಚ್ಚವಿತ್ತು ಅಭಿನಂದಿಸಿದರು.FB_IMG_1596200606120 (1)

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಆಹ್ಮದ್,ಶಾಸಕ ಯು.ಟಿ.ಖಾದರ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್,   ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ,ಅಭಯಚಂದ್ರಜೈನ್, ಮಾಜಿ ಶಾಸಕ ಜೆ.ಆರ್.ಲೋಬೋ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ,ಗೇರು ನಿಗಮದ ಮಾಜಿ ಅಧ್ಯಕ್ಷ ಕಳ್ಳಿಗೆ ತಾರನಾಥ ಶೆಟ್ಟಿ, ಟಿ.ಎಂ.ಶಹೀದ್,ಪಿ.ವಿ.ಮೋಹನ್, ತೇಜಸ್ವಿರಾಜ್ ,ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ ಹಾಜರಿದ್ದರು.ಅವರ ಮನೆಯೊಳಗೆ ಪ್ರವೇಶವಿರಲಿಲ್ಲ, ಪೂಜಾರಿಯವರ ಪುತ್ರ ದೀಪಕ್,ಪತ್ನಿ ,ಸೊಸೆ ಅವರು ಉಪಸ್ಥಿತರಿದ್ದರು.

ಬಿ.ಸಿ.ರೋಡಿನಲ್ಲಿ ಸ್ವಾಗತ:

ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲಬಾರಿಗೆ ಬಂಟ್ವಾಳಕ್ಕಾಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಬಳಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ  ಸ್ವಾಗತಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್,ಸುದೀಪ್ ಕುಮಾರ್ ರೈ, ಜಿಪಂ ಸದಸ್ಯರಾದ ಚಂದ್ರಪ್ತಕಾಶ್ ಶೆಟ್ಟಿ,ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್,ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾ ಶೆಟ್ಟಿ,ಜಯಂತಿ ಪೂಜಾರಿ,ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಸದಸ್ಯರಾದ ವಾಸುಪೂಜಾರಿ,ಗಂಗಾದರ,ಲುಕ್ಮಾನ್ ,ಮಾಜಿ ಸದಸ್ಯರಾದ ಸದಾಶಿವ ಬಂಗೇರ,ವೆಂಕಪ್ಪ ಪೂಜಾರಿ ಬಂಟ್ವಾಳ,ಚಂದ್ರಶೇಖರ ಪೂಜಾರಿ,ಉಮ್ಮರ್ ಫಾರೂಕ್, ರಜಾಕ್ ಕುಕ್ಕಾಜೆ, ,ಪಕ್ಷದ ಸ್ಥಳಿಯ ಮುಖಂಡರು ಇದ್ದರು.ಇದಕ್ಕು ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷ ಸಲೀಂ ಆಹ್ಮದ್ ಅವರು ಮುಡಿಪುವಿನ ಇಸ್ಲಾಂ ಧರ್ಮಗುರು ಬೇಕಲ್ ಹಾಜಿಯವರನ್ನು ಭೇಟಿಯಾಗಿ ಮಾತುಕತೆ  ನಡೆಸಿದರು.

ಹೊಸ ಯೋಜನೆ ರೂಪಿಸಿ: 

ಜನಾರ್ದನ ಪೂಜಾರಿಯವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿ ಅವರು,ಸಾಲಮೇಳದ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದ ಜನಾರ್ದನ ಪೂಜಾರಿಯವರ ಕಾನ್ಸೆಪ್ಟ್ ನ್ನು ರಾಜ್ಯ ಸರಕಾರ ಆರ್ಥೈಸಿಕೊಂಡು ಹೊಸ ಯೋಜನೆಯನ್ನು ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಪ್ರಸಕ್ತದ ಸಂಕಷ್ಟ ಕಾಲದಲ್ಲಿ ಜನರಿಗೆ ಹೇಗೆ ಹಣವನ್ನು ಹಂಚಿಕೆ ಮಾಡಿ ನೆರವಾಗಬೇಕೆಂಬುದನ್ನು ಪೂಜಾರಿಯವರಿಂದ ಕಲಿತುಕೊಳ್ಳಬೇಕು ಎಂದ ಅವರು ರಾಷ್ಟ್ರ ರಾಜಕಾರಣದಲ್ಲಿ ಅವರೊಬ್ಬ ಅತ್ಯತ್ತಮ ನಾಯಕರು,ಕೆಪಿಸಿಸಿಯ ಅಧ್ಯಕ್ಷರಾಗಿಯು ಪಕ್ಷವನ್ನು ಸಂಘಟಿಸಿದ್ದು,ನಮಗೆ ಮಾರ್ಗದರ್ಶಕರು ಆಗಿದ್ದರು.ಹಾಗಾಗಿ ಅವರನ್ನು ಭೇಟಿಯಾಗಿ ಆರ್ಶೀವಾದ ಪಡೆದಿದ್ದೇನೆ.ಅವರೊಂದಿಗಿನ ಭೇಟಿ ಖುಷಿಕೊಟ್ಟಿದೆ ಎಂದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter