Published On: Thu, Jul 30th, 2020

ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಮಂತ್ರಿಗಳ ತೇಜೋವದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯ

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಮಂತ್ರಿಗಳ ತೇಜೋವದೆ ಮಾಡಿರುವ ಆರೋಪಿಯ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಬಂಟ್ವಾಳ ಯುವಮೋರ್ಚಾದ ಆಧ್ಯಕ್ಷ ಪ್ರದೀಪ್ ಕುಮಾರ್ ಅಜ್ಜಿ ಬೆಟ್ಟು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಬಂಟ್ವಾಳ ಯೂತ್ ಕಾಂಗ್ರೆಸ್ ಇದರ ಅಧ್ಯಕ್ಷರಾದ ಪ್ರಶಾಂತ್ ಕುಲಾಲ್ ಯಾನೆ ಮುನ್ನ ಎಂಬ ವ್ಯಕ್ತಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪರವರು,ಉಪ ಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ್ ಮತ್ತು ಅವರ ಸಂಪುಟದ ಸದಸ್ಯರಾದ ಆರ್ ಅಶೋಕ್ , ಡಾ ಸುಧಾಕರ್ ಹಾಗೂ ಮಾಧುಸ್ವಾಮಿರವರನ್ನು ಅಪಮಾನಕರ ರೀತಿಯಲ್ಲಿ ಕಳ್ಳ ಎಂದು ಸಂಭೋದಿಸಿದ್ದಲ್ಲದೆ, ವಿಕೃತಗೊಳಿಸಿ ಅಪಮಾನಕರ ರೀತಿಯಲ್ಲಿ ಚಿತ್ರವನ್ನು ಚಿತ್ರಿಸಿ ಅಪಮಾನ ಮಾಡಿರುತ್ತಾರೆ.b53ab7a6-c90f-421b-acc5-295670abb15e

ಇದರ ವಿರುದ್ಹ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಬಂಟ್ವಾಳದ ಕಾರ್ಯಕರ್ತರು ಈ ಅಪಮಾನದ ದುಸ್ಕ್ರುತ್ಯವನ್ನು ತೀವ್ರವಾಗಿ ಖಂಡಿಸಿದರು ಮತ್ತು ಮತ್ತು ಮುಖ್ಯಮಂತ್ರಿಯವರ ಅಪಮಾನವು ಮತ್ತು ವಿಕೃತ ರೀತಿಯ ಚಿತ್ರವ ಚಿತ್ರಿಸಿದವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಸಂವಿಧಾನ ಅಪಮಾನ ಮತ್ತು ಗಲಭೆಯ ಕುಮ್ಮಕ್ಕು ಖಯ್ದೆಯ ಅಡಿಯಲ್ಲಿ ಕೇಸು ದಾಖಲಿಸುವಂತೆ ಮತ್ತು ಆರೋಪಿಯನ್ನು ತಕ್ಷಣ ಭಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ಯುವಮೋರ್ಚಾ ಬಂಟ್ವಾಳದ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು , ಪ್ರಧಾನ ಕಾರ್ಯದರ್ಶಿಯಾದ ದಿನೇಶ್ ಶೆಟ್ಟಿ ,ಉಪಾಧ್ಯಕ್ಷರಾದ ಕಾರ್ತಿಕ್ ಬಲ್ಲಾಳ್ , ಅಶ್ವಥ್ ರಾವ್ ಬಾಳಿಕೆ , ಕಾರ್ಯದರ್ಶಿಗಳಾದ ನಿಶಾಂತ್ ಶೆಟ್ಟಿ , ಪ್ರಮೋದ್ ನೋಜಿಪ್ಪಡಿ, ಹೇಮಂತ್ ಕೋಶಾಧಿಕಾರಿಯಾದ ಶೈಲೇಶ್ ಬಿಸಿ ರೋಡ್ ಹಾಗೂ ಸದಸ್ಯರಾದ ಯತಿನ್ ಶೆಟ್ಟಿ ಕುಮಂಗಿಲ ,ಸುರೇಂದ್ರ ಕಕ್ಯಾಪದವು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter