Published On: Sun, Jul 19th, 2020

ಬೈಕಂಪಾಡಿ ರೋಟರಿ ಕ್ಲಬ್ 2020-21 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು: ಯಶಸ್ವೀ ನಾಯಕನಾಗಲು ಎಲ್ಲರೊಂದಿಗೆ ಬೆರೆಯುವ ಮನಸು ,ನಿಸ್ವಾರ್ಥ ಸೇವಾ ಮನೋಭಾವನೆ , ಮತ್ತು ಪ್ರಯತ್ನ ಗುಣವಿರಬೇಕು ಎಂದು ರೋಟರಿ ವಲಯ 2 ರ ಉಪರಾಜ್ಯಪಾಲ ಆನಂದ್ ಶೆಟ್ಟಿ ಹೇಳಿದರು.ಅವರು ರೋಟರಿ ಕ್ಲಬ್ ಬೈಕಂಪಾಡಿ ಇದರ 2020-21 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ನೆರೆವೇರಿಸಿ ಮಾತನಾಡಿದರು. ನಿರ್ಗಮನ ಅಧ್ಯಕ್ಷ ಪ್ರಕಾಶ್ ಪಿ ವಿ ಸ್ವಾಗತಿಸಿ, ಪ್ರಸ್ತಾವಿಸಿದರು. ನೂತನ ಅಧ್ಯಕ್ಷರಾಗಿ ಗಣೇಶ್ ಎಂ ಅಧಿಕಾರ ಸ್ವೀಕರಿಸಿ, ಮಾತನಾಡಿ, ಕ್ಲಬ್ ನ ಅಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರ ಅಗತ್ಯ. ನಾನು ಪ್ರಾಮಾಣಿಕವಾಗಿ ಸೇವೆ ಮಾಡಲು ಬದ್ದ ನಾಗಿದ್ದೇನೆ ಎಂದರು.765abad6-de69-4b99-8956-4dd35bd2cfb4

ಸಭಾ ವೇದಿಕೆಯಲ್ಲಿ ವಲಯ ಸೇನಾನಿ ನವೀನ್ ಕುಮಾರ್ ಇಡ್ಯಾ, ಶ್ರೀಕಾಂತ್ ಶೆಟ್ಟಿ ಬಾಳ, ನಿಯೋಜಿತ ಅಧ್ಯಕ್ಷ ಮಹೇಶ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಯಾಗಿ ಸುಧಾಕರ್ ಸಾಲಿಯಾನ್, ಕ್ಲಬ್ ನ ವಿವಿಧ ಸೇವಾ ನಿರ್ದೇಶಕರಾಗಿ ಜಯ್ ಕುಮಾರ್ , ಹರೀಶ್ ಬಿ, ಕಶ್ಯಪ್ ಪ್ರಭು , ಶಬರಿ ಶಂಕರ್ ಶೆಟ್ಟಿ, ಹರೀಶ್ ಶೆಟ್ಟಿ ಶಕ್ತಿ, ಸತೀಶ್ ಮಂಗಲಪೇಟೆ, ಆಯ್ಕೆ ಆದರು.

ಇದೇ ವೇಳೆ ಇತ್ತೀಚಿಗೆ ಲಡಾಖ್ ನಲ್ಲಿ ಹುತಾತ್ಮರಾದ ವೀರಯೋಧರಿಗೆ ಪುಷ್ಪಾ0ಜಲಿ ಅರ್ಪಿಸಿ ಗೌರವ ನಮನ ಸಲ್ಲಿಸಲಾಯಿತು.ರೋಟರಿ ಜಿಲ್ಹಾ ಮಟ್ಟದ ವಿವಿಧ ಸೇವೆಗೆ ಆಯ್ಕೆ ಅದ ಉಸ್ಮಾನ್ ಕುಕ್ಕಾಡಿ, ಕಿರಣ್ ಪ್ರಸಾದ್ ರೈ, ಭರತ್ ಶೆಟ್ಟಿ, ಯೋಗೀಶ್ ನಾಯಕ್, ಸುಭೋದ್ ಕುಮಾರ್, ಇವರನ್ನು ಗೌರವಿಸಲಾಯಿತುಈ ಸಂದರ್ಭ ಲಿಂಗಪ್ಪ ಎಂ ಡಿ ಸತೀಶ್ ಕುಮಾರ್ ಕಟ್ಲಾ, ಪ್ರಸಾದ್ ಪ್ರಭು, ಸುಧಾಕರ್ ಪೂಂಜಾ ಗಂಗಾಧರ್ ಬಂಜನ್, ಕಿರಣ್ ಶೆಟ್ಟಿ, ರಮೇಶ್ ಆಚಾರಿ, ಬಿ ಬಿ ರೈ, ಪುರುಸೋತ್ತಮ ಏನ್ ಆರ್, ಲೋಕನಾಥ್ ಕೋಟಿಯನ್, ಕುಮಾರ್ ಕುಳಾಯಿ, ದಿನೇಶ್ ಕೊಡಿಕ್ಕಲ್ ಗಣೇಶ್ ರಾವ್ ಉಪಸ್ಥಿತರಿದ್ದರು.

ನೂತನ ಕಾರ್ಯದರ್ಶಿ ಅಶೋಕ್ ಏನ್ ಧನ್ಯವಾದ ಗೈದರು ಕವಿತ ಗಣೇಶ್ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter