Published On: Wed, Jul 15th, 2020

ಕಲ್ಲಡ್ಕ:ಶ್ರೀರಾಮ ಪದವಿ ಪೂರ್ವ ವಿದ್ಯಾಲಯ- 93% ಫಲಿತಾಂಶ

ಕಲ್ಲಡ್ಕ:2019-20ನೇ ಸಾಲಿನ ದ್ವಿತೀಯ ಪಿ.ಯು.ಸಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಈ ಪೈಕಿ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ303 ವಿದ್ಯಾರ್ಥಿಗಳ ಪೈಕಿ 282 ವಿದ್ಯಾರ್ಥಿಗಳು ತೇರ್ಗಡೆಗೊಂಡು47 ವಿಶಿಷ್ಟ ಶ್ರೇಣಿ, 179 ಪ್ರಥಮ ಶ್ರೇಣಿ ಪಡೆದು 93% ಫಲಿತಾಂಶ ಸಾಧಿಸಿದೆ.ವಿಜ್ಞಾನ ವಿಭಾಗದಲ್ಲಿ ಸೌಮ್ಯ 571, ವಾಣಿಜ್ಯ ವಿಭಾಗದಲ್ಲಿ ನವ್ಯ 571, ಕಲಾ ವಿಭಾಗದಲ್ಲಿ ಭಾಗೇಶ್ 517 ಅಂಕ ಪಡೆದುಕಾಲೇಜಿಗೆ ಪ್ರಥಮ ಸ್ಥಾನಪಡೆದುಕೊಂಡಿರುತ್ತಾರೆ.

puc result wವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 205 ವಿದ್ಯಾರ್ಥಿಗಳ ಪೈಕಿ 35 ಅತ್ಯುನ್ನತ ಶ್ರೇಣಿ, 124 ಪ್ರಥಮ ಶ್ರೇಣಿ, 31 ದ್ವಿತೀಯ ಶ್ರೇಣಿ, 11 ತೃತೀಯ ಶ್ರೇಣಿ ಪಡೆಯುವುದರ ಮೂಲಕ ಶೇಕಡಾ 98% ಫಲಿತಾಂಶದಾಖಲಾಗಿದ್ದು, ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 64 ವಿದ್ಯಾರ್ಥಿಗಳ ಪೈಕಿ 11 ಅತ್ಯುನ್ನತ ಶ್ರೇಣಿ, 43 ಪ್ರಥಮ ಶ್ರೇಣಿ, 6 ದ್ವಿತೀಯ ಶ್ರೇಣಿ ಪಡೆಯುವುದರ ಮೂಲಕ ಶೇಕಡಾ 94% ಫಲಿತಾಂಶದಾಖಲಾಗಿದೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 34 ವಿದ್ಯಾರ್ಥಿಗಳ ಪೈಕಿ 1ಅತ್ಯುನ್ನತ ಶ್ರೇಣಿ, 12 ಪ್ರಥಮ ಶ್ರೇಣಿ, 05 ದ್ವಿತೀಯ ಶ್ರೇಣಿ, 03ತೃತೀಯ ಶ್ರೇಣಿ ಪಡೆಯುವುದರ ಮೂಲಕ ಶೇಕಡಾ62% ಫಲಿತಾಂಶದಾಖಲಾಗಿದೆ. ಅಲ್ಲದೇಅಕ್ಷಯ್ ಡಿ. ಅರ್ಥಶಾಸ್ತ್ರ, ವ್ಯವಹಾರಅಧ್ಯಯನ, ಸಂಖ್ಯಾಶಾಸ್ತ್ರದಲ್ಲಿ, ಪ್ರಣಾಮ್ ಲೆಕ್ಕಶಾಸ್ತ್ರದಲ್ಲಿ, ನಯನ, ಅರ್ಪಿತಾ ವ್ಯವಹಾರಅಧ್ಯಯನದಲ್ಲಿ, ಕೌಶಿಕ್, ನಿರೀಕ್ಷಾ ಸಂಖ್ಯಾಶಾಸ್ತ್ರದಲ್ಲಿ, ಕೃಷ್ಣಕಿರಣ್, ಅನುಷಾ ಅರ್ಥಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದಿರುತ್ತಾರೆ. ಬಹುತೇಕಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿರುವ ಈ ಸಂಸ್ಥೆಯಲ್ಲಿ ಈ ಸಾಧನೆಗೈದಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಶ್ರಮಿಸಿದ ಉಪನ್ಯಾಸಕರ ವರ್ಗದವರನ್ನು ಸಂಸ್ಥೆಯ ಆಡಳಿತ ಮಂಡಳಿ ಅಭಿನಂದಿಸಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter