Published On: Sun, Jul 12th, 2020

ಕೋಲಾರ ಜಿಲ್ಲಾ ಎಸ್‍ಸಿ ಎಸ್‍ಟಿ ನೌಕರರ ಸಂಘದ ಅಧ್ಯಕ್ಷರಾಗಿ ಟಿ.ಜಯಪ್ರಕಾಶ್ ಆಯ್ಕೆ

ಕೋಲಾರ: ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಆರೋಗ್ಯ ಇಲಾಖೆಯ ಟಿ.ಜಯಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಗರದ ನಚಿಕೇತ ನಿಲಯ ಆವರಣದಲ್ಲಿರುವ ಬುದ್ಧ ವಿಹಾರ ಭವನದಲ್ಲಿ ಶನಿವಾರ ಸಂಜೆ ಜರುಗಿದ ಪದಗ್ರಹಣ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷೆ ವಿಜಯಮ್ಮ ನೂತನ ಅಧ್ಯಕ್ಷ ಟಿ.ಜಯಪ್ರಕಾಶ್‍ರಿಗೆ ಅ„ಕಾರ ಹಸ್ತಾಂತರಿಸಿದರು.13kolar3

ಸಂಘದ ಗೌರವಾಧ್ಯಕ್ಷರಾಗಿ ನೂತನ ಸರಕಾರಿ ಪ್ರೌಢಶಾಲೆಯ ಪ್ರಾಂಶುಪಾಲ ಜಯರಾಮ್, ಕಾರ್ಯಾಧ್ಯಕ್ಷರಾಗಿ ಪಿಡಿಒ ಎಸ್.ಸುರೇಶ್‍ಕುಮಾರ್ ಆಯ್ಕೆಯಾದರು.ಪ್ರಧಾನ ಕಾರ್ಯದರ್ಶಿಯಾಗಿ ಪ್ರೌಢ ಶಿಕ್ಷಣ ಇಲಾಖೆಯ ಡಿ.ಎನ್.ಮುಕುಂದ, ಖಜಾಂಚಿಯಾಗಿ ಶಿಕ್ಷಕರಾಗಿ ಮೂರಾಂಡಹಳ್ಳಿ ಶ್ರೀನಿವಾಸ್, ಹಿರಿಯ ಉಪಾಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ಕೆ.ಎಸ್.ಮುನಿರಾಜು, ಉಪಾಧ್ಯಕ್ಷರಾಗಿ ಬೆಸ್ಕಾಂ ವೆಂಕಟೇಶ್, ಶಿಕ್ಷಣ ಇಲಾಖೆಯ ಡಿ.ಚಿಕ್ಕಣ್ಣ.ಜಂಟಿ ಕಾರ್ಯದರ್ಶಿಯಾಗಿ ತೋಟಗಾರಿಕೆ ಇಲಾಖೆಯ ಮಂಜನ ಕುಮಾರ್, ಆರೋಗ್ಯ ಇಲಾಖೆಯ ಮಾರುತಿ ಕುಮಾರ್, ಕೃಷಿ ಇಲಾಖೆಯ ಸುರೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಕಾಲೇಜು ಶಿಕ್ಷಣ ಇಲಾಖೆಯ ಸೀಪೂರ ಶ್ರೀನಿವಾಸ್, ಬೆಸ್ಕಾಂ ಸುಬ್ರಮಣಿ, ಪಿಡಿಒ ನಾರಾಯಣಸ್ವಾಮಿ, ಶಿಕ್ಷಣ ಇಲಾಖೆಯ ಸುಗಟೂರು ವೆಂಕಟೇಶ್, ಪ್ರೌಢ ಶಿಕ್ಷಣ ಇಲಾಖೆಯ ಅಶೋಕ್ ಆಯ್ಕೆಯಾಗಿದ್ದಾರೆ.

ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಎಂ.ರೇಣುಕಾ ಆಯ್ಕೆಯಾಗಿದ್ದಾರೆ ಕೆಂಬೋಡಿ ಮುನಿರಾಜು, ಮಾರ್ಜೇನಹಳ್ಳಿ ಶ್ರೀನಿವಾಸ್ ಕ್ರಾಂತಿಗೀತೆ ಗಾಯನ, ರೇಣುಕಾ ನಿರೂಪಿಸಿದರು.

ನಿರ್ಗಮಿತ ಅಧ್ಯಕ್ಷೆ ಆರೋಗ್ಯ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಮ್ಮ ಮಾತನಾಡಿ, ತಮಗೆ ಮೂರು ವರ್ಷಗಳ ಕಾಲ ಸಂಘವನ್ನು ಸಂಘಟಿಸಿ ಮುನ್ನಡೆಸಲು ಅವಕಾಶ ನೀಡಿ ಬಡ್ತಿ ಮೀಸಲಾತಿ ಹೋರಾಟವನ್ನು ಗುರಿ ತಲುಪಿಸುವಲ್ಲಿ ಬೆಂಬಲ ನೀಡಿದ ಸಮಸ್ತ ನೌಕರರಿಗೆ ಧನ್ಯವಾದಗಳನ್ನು ಅರ್ಪಿಸಿದರು.ದಲಿತ ಮುಖಂಡರಾದ ವಿಜಯಕುಮಾರ್ ಮಾತನಾಡಿ, ಸರಕಾರಿ ನೌಕರರು ಅಂಬೇಡ್ಕರ್ ಮತ್ತು ಭಗವಾನ್ ಬುದ್ಧರ ಆದರ್ಶಗಳನ್ನು ಅನುಸರಿಸುತ್ತಾ ತಮ್ಮಲ್ಲಿರುವ ಸಣ್ಣ ಪುಟ್ಟ ಬೇಧಭಾವಗಳನ್ನು ಬಗೆಹರಿಸಿಕೊಂಡು ಸಂಘಟಿತರಾಗಿ ಸಂಘವನ್ನು ಮುಂದುವರೆಸಬೇಕೆಂದು ಕಿವಿಮಾತು ಹೇಳಿದರು.ಬೌದ್ಧ ಧರ್ಮ ಪ್ರಚಾರಕರಾದ ಸುಬ್ಬರಾಯಪ್ಪ, ಕೃಷ್ಣಯ್ಯ ಬೌಧ್, ಮುಖಂಡರಾದ ವಕ್ಕಲೇರಿ ರಾಜಪ್ಪ, ನಗರಸಭಾ ಸದಸ್ಯ ಅಂಬರೀಶ್, ವಿಜಯ್ ಮತ್ತಿತರರು ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter