Published On: Sun, Jul 12th, 2020

ಬಂಟ್ವಾಳದಲ್ಲು ಸಂಪೂರ್ಣ ಸ್ತಬ್ದ

ಬಂಟ್ವಾಳ : ಕೊರೋನ ಮಹಾಮಾರಿ ದಿನೇ ದಿನೇ ಹೆಚ್ಚುತ್ತಿದ್ದು, ಎರಡನೆ ಭಾನುವಾರವು ಲಾಕ್ ಡೌನ್ ಹಿನ್ನಲೆಯಲ್ಲಿ  ಬಿ ಸಿ ರೋಡ್ ಸಹಿತ ಬಂಟ್ವಾಳ ತಾಲೂಕಿನಲ್ಲಿಯು ವ್ಯವಹಾರ ಸಂಪೂರ್ಣ  ಸ್ತಬ್ಧಗೊಂಡಿದ್ದು,ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬೆಳಿಗ್ಗೆಯಿಂದಲೇ ಅಂಗಡಿ,ಮುಂಗಟ್ಟುಗಳು ವಿಶೇಷವಾಗಿ ಮಾಂಸದಂಗಡಿಗಳು ಮುಚ್ಚಿದ್ದವು.17-11-57-320-214-11_50_21_1593930021-kn-mng-bantwal-02-bantwal-visual-kac10019-05072020110016-0507f-1593927016-620

ಮೀನು ಮಾರಾಟವು ಇರಲಿಲ್ಲ, ಬಸ್ ,ಆಟೋ ರಿಕ್ಷಾ,ಬಾಡಿಗೆ ಕಾರುಗಳ ಸಹಿತ ಯಾವುದೇ ವಾಹನಗಳು ರಸ್ತೆಗೆ ಇಳಿದಿರಲಿಲ್ಲ ಹಾಗೆಯೇ ಜನಸಂಚಾರ ಕೂಡ ಇರಲಿಲ್ಲ,ಸದಾ ಜನ,ವಾಹನ ಸಂಚಾರದಿಂದ ಬಿಝಿಯಾಗಿದ್ದ ಬಂಟ್ವಾಳ,ಬಿ.ಸಿ.ರೋಡ್,ಮೆಲ್ಕಾರ್ ,ಕಲ್ಲಡ್ಕ ಮೊದಲಾದ ನಗರ ಪ್ರದೇಶಗಳು ಸಂಪೂರ್ಣ ಬಂದ್ ಆಗಿದ್ದು,ಬಿಕೋ ಅನಿಸಿತು.ಹಾಲು,ಪತ್ರಿಕೆ,ಔಷಧ ಅಂಗಡಿಗಳಿಗಷ್ಟೆ ತೆರದಿತ್ತಾದರೂ ಹೊತ್ತು ಮೀರುತ್ತಿದ್ದಂತೆ ಇವುಗಳು ಕೂಡ ಮುಚ್ಚಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter