Published On: Sun, Jul 12th, 2020

ರೋಟರಿ ಕ್ಲಬ್ ಫರಂಗಿಪೇಟೆಯ ನೂತನ ಅಧ್ಯಕ್ಷ,ಪದಾಧಿಕಾರಿಗಳ ಪದಗ್ರಹಣ

ಬಂಟ್ವಾಳ: ರೋಟರಿ ಕ್ಲಬ್ ಫರಂಗಿಪೇಟೆ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ರೋಟರಿ ಸಮುದಾಯ ಭವನದಲ್ಲಿ ಸರಳವಾಗಿ ನಡೆಯಿತು.ನಿರ್ಗಮನ ಅಧ್ಯಕ್ಷ ಜಯರಾಮ ಶೇಖ ಮಾತನಾಡಿ  ಅಸಾಧ್ಯವಾದುದನ್ನು ಮಾಡಬೇಕು ಎನ್ನುವ ಹಂಬಲ ನನ್ನಲ್ಲಿದ್ದುದರಿಂದ ರೋಟರಿ ಕ್ಲಬ್ ಫರಂಗಿಪೇಟೆಯ ಅಧ್ಯಕ್ಷನಾಗಿ ಸೇವಾ ಕಾರ್ಯಗಳನ್ನು ಮಾಡಿದ್ದೇನೆ ಎಂದರು.

IMG-20200712-WA0005
ನೂತನ ಅಧ್ಯಕ್ಷರಾಗಿ ರಮೇಶ್ ತುಂಬೆ ಅಧಿಕಾರ ಸ್ವೀಕರಿಸಿ ಮಾತನಾಡಿ ಅಧ್ಯಕ್ಷನಾಗಿ ಸಫಲನಾಗಬೇಕಾದರೆ ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದರು.ಕಾರ್ಯದರ್ಶಿಯಾಗಿ ಅರ್ಜುನ್ ಪೂಂಜಾ, ಕೋಶಾಧಿಕಾರಿಯಾಗಿ ನೋರ್ಬರ್ಟ್ ಡಿಸೋಜಾ,ಉಪಾಧ್ಯಕ್ಷರಾಗಿ ಸುಂದರಶೆಟ್ಟಿ ಕಲ್ಲತಡಮೆ ಹಾಗೂ ಇತರ ವಿಭಾಗಗಗಳ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ನಿರ್ಗಮನ ಅಧ್ಯಕ್ಷ ಜಯರಾಮ ಶೇಖ ಹಾಗೂ ನಿರ್ಗಮನ ಕಾರ್ಯದರ್ಶಿ ರಮೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪದಗ್ರಹಣ ಅಧಿಕಾರಿ ಪೂರ್ವ ಜಿಲ್ಲಾ ಗವರ್ನರ್ ಡಾ. ದೇವದಾಸ ರೈ ಮಾತನಾಡಿ ರೋಟರಿ ಸೇವೆಯ ಅವಕಾಶವನ್ನು ಒದಗಿಸುತ್ತದೆ. 217 ದೇಶಗಳಲ್ಲಿ ರೋಟರಿ  ಕಾರ್ಯ ನಿರ್ವಹಿಸುತ್ತಿದೆ. ಇದು ಅವಕಾಶಗಳ ಆಗರ ಎಂದು ತಿಳಿಸಿದರು.ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ್,  ಸಹಾಯಕ ಗವರ್ನರ್ ಯತಿಕಯಮಾರ್ ಸ್ವಾಮೀ ಗೌಡ, ವಲಯ ಸೇನಾನಿ ಜಯರಾಮ ರೈ, ರೋಟರಿ ಬಂಟ್ವಾಳ ಟೌನ್ ನ ಅಧ್ಯಕ್ಷ ಪದ್ಮನಾಭ ರೈ, ಕಾರ್ಯದರ್ಶಿ ರಮೇಶ್ ಶೆಟ್ಟಿ ಅಡ್ಯಾರ್, ನಿಯೋಜಿತ ಅಧ್ಯಕ್ಷ ಸುರೇಂದ್ರ ಕಂಬಳಿ ಅಡ್ಯಾರ್ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter