Published On: Fri, Jul 10th, 2020

ಹೊಸ ಬದುಕು ನಿರ್ಮಾಣದತ್ತ ಹೆಜ್ಜೆ ಅಗತ್ಯ : ಪ್ರತಾಪ ಸಿಂಹ ನಾಯಕ್

ಬಂಟ್ವಾಳ: ಕೋವಿಡ್-19  ಎಲ್ಲೆಡೆ ವ್ಯಾಪಿಸಿರುವ ಈ ಹೊತ್ತಿನಲ್ಲಿ ಹೊಸ ರೀತಿಯ ಬದುಕನ್ನು ನಾವು ನಿರ್ಮಿಸಿಕೊಳ್ಳಬೇಕಾಗಿದ್ದು, ರೋಟರಿ ಕ್ಲಬ್ ಮೂಲಕ ಸಮಾಜಕ್ಕೆ ಮಾದರಿಯಾಗುವ ಕಾರ್ಯವನ್ನು ನಡೆಸಲು ಸಾಧ್ಯ ಎಂದು  ರೋಟರಿ ವಲಯ ನಾಲ್ಕರ ಸಹಾಯಕ ಗವರ್ನರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದ್ದಾರೆ.ಬಿ.ಸಿ.ರೋಡಿನ ಸಾಧನಾ ರೆಸಿಡೆನ್ಸಿಯಲ್ಲಿರುವ ರೋಟರಿ ಸಾಧನಾ ಹಾಲ್ ಶುಕ್ರವಾರ ನಡೆದ ಬಂಟ್ವಾಳ ಟೌನ್ ರೋಟರಿ ಕ್ಲಬ್ 2020-21ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು  ಸನ್ಮಾನ ಸ್ವೀಕರಿಸಿ ಮಾತನಾಡಿದರು.
IMG-20200710-WA0019 ಪದಗ್ರಹಣ ಅಧಿಕಾರಿಯಾಗಿ ದ್ದ  ರೋಟರಿ ಜಿಲ್ಲೆ 3180ರ ಪೂರ್ವ ಜಿಲ್ಲಾ ಗವರ್ನರ್ ಕೃಷ್ಣ ಶೆಟ್ಟಿ, ಸೇವಾ ಮನೋಭಾವದ ಸಂಘಟನೆಯಾದ ರೋಟರಿಯಲ್ಲಿ ಅನುಭವಿ ನಾಯಕತ್ವ ಹಾಗೂ ಚುರುಕಿನ ತಂಡ ಜತೆಗೂಡಿ ಕೆಲಸ ಮಾಡಿದರೆ ಯಶಸ್ಸು ಖಂಡಿತ ಎಂದರು. ಜಿಲ್ಲಾ ಗವರ್ನರ್ ಆಗಿ ನಿಯೋಜಿತರಾಗಿರುವ ಎನ್. ಪ್ರಕಾಶ್ ಕಾರಂತ, ಬಂಟ್ವಾಳ ರೋಟರಿ ಕ್ಲಬ್  ಅಧ್ಯಕ್ಷ ಎನ್. ನಾರಾಯಣ ಹೆಗ್ಡೆ ಮತ್ತು ಝೋನಲ್ ಲೆಫ್ಟಿನೆಂಟ್ ಜಯರಾಜ್ ಎಸ್. ಬಂಗೇರ ಶುಭ ಹಾರೈಸಿದರು.2020-21ರ ಸಾಲಿಗೆ ಅಧ್ಯಕ್ಷರಾಗಿ ಆಯ್ಜೆಗೊಂಡ ಪದ್ಮನಾಭ ರೈ, ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಮತ್ತು ಖಜಾಂಚಿ ಜ್ಯೋತೀಂದ್ರ ಶೆಟ್ಟಿ ಮುಂಡಾಜೆಗುತ್ತು,  ಉಪಾಧ್ಯಕ್ಷ ಜಗನ್ನಾಥ ಚೌಟಹಾಗೂ ವಿವಿಧ ವಿಭಾಗಗಳ ನೂತನ  ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷ ಪದ್ಮನಾಭ ರೈ ಅಧಿಕಾರ ಸ್ವೀಕರಿಸಿ ಮಾತನಾಡಿ,ಎಲ್ಲರ ಸಹಕಾರ ಯಾಚಿಸಿದರು. ಈ ವೇಳೆ ನಿರ್ಗಮನ ಕಾರ್ಯದರ್ಶಿ ಪಲ್ಲವಿ ಕಾರಂತ, ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಪ್ರತಾಪ್ ಸಿಂಹ ನಾಯಕ್ ಮತ್ತು ಜಿಲ್ಲಾ ಗವರ್ನರ್ ಆಗಿ ಆಯ್ಕೆಗೊಂಡ ಪ್ರಕಾಶ್ ಕಾರಂತ ಅವರನ್ನು ಸನ್ಮಾನಿಸಲಾಯಿತು. ರೊಟೇರಿಯನ್ ಗಳಾದ ಬೊಂಡಾಲ ಚಿತ್ತರಂಜನ್ ಶೆಟ್ಟಿ ಮತ್ತು ವಿಂಧ್ಯಾ ಎಸ್. ರೈ ಕಾರ್ಯಕ್ರಮ ನಿರೂಪಿಸಿದರು. ನಿಕಟಪೂರ್ವ ಅಧ್ಯಕ್ಷ ಜಯರಾಜ್ ಎಸ್. ಬಂಗೇರ ಸ್ವಾಗತಿಸಿದರು. ಕಾರ್ಯದರ್ಶಿ ಕಿಶೋರ್ ಕುಮಾರ್ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter