Published On: Thu, Jul 9th, 2020

ಪುರಸಭಾ ವ್ಯಾಪ್ತಿಯಲ್ಲಿ ಟಾಸ್ಕ್ ಪೋಸ್೯ ರಚನೆ ; ಶಾಸಕ ನಾಯ್ಕ್ ಸೂಚನೆ

ಬಂಟ್ವಾಳ, :  ಗ್ರಾ.ಪಂ.ಗಳಲ್ಲಿ ಕೋವಿಡ್ ಟಾಸ್ಕ್ಪೋರ್ಸ್ ಸಮಿತಿಯ ರೀತಿಯಲ್ಲೇ ನಗರ ಸ್ಥಳೀಯಾಡಳಿತ ಪ್ರದೇಶದಲ್ಲೂ ಟಾಸ್ಕ್ ಪೋಸ್೯ ರಚನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲೂ ಸಮಿತಿ ರಚಿಸುವ ಕುರಿತು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬುಧವಾರ ಬಿ.ಸಿ.ರೋಡು ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್. ಹಾಗೂ ಪುರಸಭಾ ಮುಖ್ಯಾಽಕಾರಿ ಲೀನಾ ಬ್ರಿಟ್ಟೊ ಅವರ ಜತೆ ಸಮಾಲೋಚನೆ ನಡೆಸಿದರು.

IMG_20200330_225207
ನಗರ ಪ್ರದೇಶದಲ್ಲಿ ವಾರ್ಡ್ ಮಟ್ಟದ ಟಾರ್ಸ್ಪೋರ್ಸ್ ಹಾಗೂ ಬೂತ್ ಮಟ್ಟದ ಸಮಿತಿ ಎಂದು ಎರಡು ಸಮಿತಿಗಳು ರಚನೆಯಾಗಲಿದೆ. ಸರಕಾರದ ನಿರ್ದೇಶನದ ಪ್ರಕಾರ ಆ ಎರಡು ಸಮಿತಿಗಳಿಗೆ ಸದಸ್ಯರನ್ನು ನೇಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜತೆಗೆ ಮುಂದೆ ರೋಗ ಲಕ್ಷಣಗಳಿಲ್ಲದ ಪಾಸಿಟಿವ್ ಪ್ರಕರಣಗಳು ಕಂಡುಬಂದಲ್ಲಿ ಅವರು ಹೋಮ್ ಕ್ವಾರಂಟೈನ್ ಆಗಲಿದ್ದು, ಆ ಸಮಯದಲ್ಲಿ ಈ ಸಮಿತಿ ಹೆಚ್ಚಿನ ಜವಾಬ್ದಾರಿಗಳಿರುತ್ತದೆ ಎಂದು ತಿಳಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter