Published On: Wed, Jul 8th, 2020

ದುಬಾಯಿನಲ್ಲಿ ಮೃಚ್ಛಕಟಿಕ-ನಾಟಕ ಯುಟ್ಯೂಬ್ ಲೋಕಾರ್ಪಣೆ

ಹೊರನಾಡಲ್ಲಿ ಧ್ವನಿ ಪ್ರತಿಷ್ಠಾನದ ಸೇವೆ ಶ್ಲಾಘನೀಯ : ಡಾ| ತುಂಬೆ ಮೊಯಿದ್ದೀನ್
ಮುಂಬಯಿ: ಧ್ವನಿ ಪ್ರತಿಷ್ಠಾನ ತನ್ನ 34ನೇ ವಾರ್ಷಿಕೋತ್ಸವದ ಅಂಗವಾಗಿ ದುಬಾಯಿ ಇಲ್ಲಿನ ಏಮಿರೇಟ್ಸ್ ಥಿüಯೇಟರ್ ಸಭಾಗಂಣದಲ್ಲಿ ರಂಗವೇರಿಸಿದ ಡಾ| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡಕ್ಕೆ ಭಾಷಾಂತರಿಸಿದ ಶೂದ್ರಕ ಮಹಾಕವಿಯ `ಮೃಚ್ಛಕಟಿಕ’ ನಾಟಕವನ್ನು ಕಳೆದ ಮಂಗಳವಾರ ಯುಟ್ಯೂಬ್ ವೀಕ್ಷಕರಿಗಾಗಿ ಲೋಕಾರ್ಪಣೆ ಗೊಳಿಸಲಾಯಿತು.

mruchchakatika (7)

ತುಂಬೆ ಗ್ರೂಫ್ ಆಫ್ ಕಂಪೆನಿಯ ಸ್ಥಾಪಕ ಹಾಗೂ ಅಧ್ಯಕ್ಷ ಡಾ| ತುಂಬೆ ಮೊಯಿದ್ದೀನ್ ಅವರು ಲೋಕಾರ್ಪಣೆ ಗೊಳಿಸಿ ಮಾತನಾಡಿ ಕಳೆದ ಮೂವತೈದು ವರ್ಷಗಳಿಂದ ಹೊರನಾಡು ಮತ್ತು ವಿದೇಶದಲ್ಲಿ ಕನ್ನಡ ರಂಗ ಸೇವೆ ನಡೆಸುತ್ತಾ ಬಂದಿರುವ ಧ್ವನಿ ಪ್ರತಿಷ್ಠಾನದ ಚಟುವಟಿಕೆಗಳನ್ನು ಶ್ಲಾಘಿಸಿದರು.

mruchchakatika (1)

ನಾಟಕದ ನಿರ್ದೇಶಕ ಹಾಗೂ ಧ್ವನಿ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಯುವ ಜನಾಂಗಕ್ಕೆ ಭಾರತೀಯ ರಂಗ ಭೂಮಿಯನ್ನು ಪರಿಚಯಿಸುವ ಉದ್ದೇಶದಿಂದ ಧ್ವನಿ ಕೆಲವು ವರ್ಷಗಳಿಂದ ಪುರಾತನ ನಾಟಕಗಳನ್ನು ಆಯ್ಕೆ ಮಾಡಿ ದುಬೈಯಲ್ಲಿ ಪ್ರದರ್ಶಿಸಿತ್ತಾ ಬಂದಿದೆ ಎಂದರು.

mruchchakatika (2)

ಅಜ್ಮಾನ್ ನ ತುಂಭೆ ಮೇಡಿಕಲ್ ಕಾಲೇಜಿನಲ್ಲಿ ನೆರವೇರಿದ ಈ ಕಾರ್ಯಕ್ರಮದಲ್ಲಿ ಧ್ವನಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಆಶೋಕ ಅಂಚನ್, ಸುಗಂಧರಾಜ್ ಬೇಕಲ್, ಆಶೋಕ ಬೈಲೂರ್, ಗಣೇಶ್ ಕುಲಾಲ್ ಹಾಗು ವಿಘ್ನೇಶ ಉಪಸ್ಥಿತರಿದ್ದರು.

mruchchakatika (2) mruchchakatika (3) (1) mruchchakatika (4) mruchchakatika (5)

Dhwani Prathishtana Dubai 2

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter