Published On: Tue, Jul 7th, 2020

ಭಾರತ ಜಗದ್ಗುರವಾಗಲಿದೆ: ನರಸಿಂಹ ಮಾಣಿ

ಬಂಟ್ವಾಳ: ಸಮಾನ ನಾಗರಿಕ ಕಾನೂನು ಸೇರಿದಂತೆ ಹಲವು ರಾಷ್ಟ್ರೀಯ ಸಂಬಂಧಿಸಿದ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಭಾರತ ಜಗದ್ಗುರುವಾಗಲಿದೆ ಎಂದು ಪುತ್ತೂರು ಜಿಲ್ಲಾ ಹಿಂದು ಜಾಗರಣ ವೇದಿಕೆ ಸಂಪರ್ಕ ಪ್ರಮುಖ್  ನರಸಿಂಹ ಮಾಣಿ ಹೇಳಿದ್ದಾರೆ.            IMG-20200707-WA0049

ಹಿಂದು ಜಾಗರಣ ವೇದಿಕೆಯ ಬಂಟ್ವಾಳ ತಾಲೂಕಿನ ಕರ್ಪೆ ಘಟಕಕ್ಕೆ  ಚಾಲನೆ ನೀಡಿ ಮಾತಾನಾಡಿದ ಅವರು,  ಭಾರತವು ಈಗಾಗಲೇ ಶ್ರೇಷ್ಠ ನಾಯಕತ್ವದಡಿಯಲ್ಲಿ ಮುನ್ನುಗ್ಗುತಿದ್ದು, ಇದಕ್ಕೆ ಪೂರಕವಾಗಿ ದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಹಲವಾರು ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ.ಇದರಡಿಯಲ್ಲಿ ಹಿಂದು  ಜಾಗರಣ ವೇದಿಕೆ ದೇಶದ ನಾನಾ ಕಡೆ ಹಿಂದೂಗಳಲ್ಲು ಜಾಗೃತಿಯನ್ನು ಮೂಡಿಸುತ್ತಿದ್ದು ಭವಿಷ್ಯದ ದಿನಗಳಲ್ಲಿ ಭಾರತವು ಮತ್ತಷ್ಟು ಶಕ್ತಿಶಾಲಿ ರಾಷ್ಟ್ರವಾಗಲಿದೆ ಎಂದ ಹೇಳಿದರು.IMG-20200707-WA0050

ನೂತನ ಘಟಕವನ್ನು ಭಾರತ ಮಾತೇ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಸುಬ್ರಹ್ಮಣ್ಯ ಭಟ್ ದೋಟ ಅವರು ನೇರೆವೇರಿಸಿದರು.ಪುತ್ತೂರು ಜಿಲ್ಲಾ ಹಿ.ಜಾ.ವೇ.ಅದ್ಯಕ್ಷ ಜಗದೀಶ್ ನತ್ರಕೆರೆ ಸಭಾಧ್ಯಕ್ಷತೆ ವಹಿಸಿದ್ದರು.ಪುತ್ತೂರು ಜಿಲ್ಲಾ ಹಿ.ಜಾ.ವೇ.ಯ ಕಾರ್ಯದರ್ಶಿ ಚಂದ್ರ ಕಲಾಯಿ,ಪುತ್ತೂರು ಜಿಲ್ಲಾ ಹಿ.ಜಾ.ವೇ.ಹಿಂದು ಯುವವಾಹಿನಿ ಸಂಪರ್ಕ ಪ್ರಮುಖ್ ಪ್ರಶಾಂತ್ ಕೆಂಪುಗುಡ್ಡೆ,ಬಂಟ್ವಾಳ ತಾಲೂಕು ಹಿ.ಜಾ.ವೇ.ಅದ್ಯಕ್ಷ ತಿರುಲೇಶ ಬೆಳ್ಳೂರು,ಸ್ಥಳೀಯ ಪ್ರಮುಖರಾದ ಚಂದ್ರಶೇಖರ ಪೂವಳ,ಉಮೇಶ್ ಗೌಡ, ದಿನೇಶ್ ಶೆಟ್ಟಿ, ಸುಂದರ ಪೂಜಾರಿ, ಪುರಂದರ್ ಭಟ್,ಪ್ರಸಾದ್ ಹಲಕ್ಕೆ ಉಪಸ್ಥಿತರಿದ್ದರು.
ಜಿಪಂ ಸದಸ್ಯ  ತುಂಗಪ್ಪ ಬಂಗೇರ,ಮಾಜಿತಾಪಂ ಸದಸ್ಯ ರತ್ನಕುಮಾರ್ ಚೌಟ, ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.
ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸಿ.ಕಾರ್ಯಕ್ರಮ ನಿರೂಪಿಸಿದರು.
ಅಧ್ಯಕ್ಷರಾಗಿ ನವೀನ್ :
ಇದೇವೇಳೆ ನೂತನ ಸಮಿತಿಯನ್ನು ಜಿಲ್ಲಾದ್ಯಕ್ಷರು ಘೋಷಿಸಿದರು.ಹಿ.ಜಾ.ವೇಯ ಕರ್ಪೆ ಘಟಕದ ನೂತನ  ಅದ್ಯಕ್ಷರಾಗಿ ನವೀನ ಪೂಜಾರಿ ಆಯ್ಕೆಯಾಗಿದ್ದು, ಉಳಿದಂತೆ  ರಂಜೀತ್ ಪೂವಳ(ಉಪಾಧ್ಯಕ್ಷ),  ತೇಜಾಸ್ ಪೂಜಾರಿ(ಪ್ರಧಾನ ಕಾರ್ಯದರ್ಶಿ),     .: ಹರೀಶ್ ಪಾದೆ, ರಾಜೇಶ್ ಪೂಜಾರಿ ನಡಿಬೈಲು, ಉದಯ ದೋಟ,ರಾಮಕೃಷ್ಣ ನಾಯಕ್ ಕಿನ್ನಾಜೆ  (ಕಾರ್ಯದರ್ಶಿಗಳು), ರಾಜೇಂದ್ರ ಪೂಜಾರಿ ನೆಕ್ಲಾಜೆ ಕರ್ಪೆ( ಸಂಪರ್ಕ ಪ್ರಮುಖ್ ),    ಗಂಗಾಧರ(ಗಂಗು)ಮಂದಿರ ಕರ್ಪೆ( ಹಿಂದು ಯುವವಾಹಿನಿ  ಸಂಯೋಜಕ), ಅನುಷ್ ಅಡಂಗಾಜೆ(ಸಹ ಸಂಯೋಜಕ)    ರಾಗಿ ಹರೀಶ್ ವರಸಾರಿ(ನಿಧಿ ಪ್ರಮುಖ್),ಜಯಚಂದ್ರ ದೋಟ ಕರ್ಪೆ   (ಮಾತೃ ಸುರಕ್ಷ) ಅಯ್ಕೆಯಾಗಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter