Published On: Tue, Jul 7th, 2020

ಸರ್ಕಾರದ ವಿಮಾ ಪಾಲಿಸಿಗೆ ಕಂದಾಯ, ಪಂಚಾಯತ್ ರಾಜ್ ಇಲಾಖೆಯನ್ನೂ ಸೇರಿಸಲು ಒತ್ತಾಯ

ಬಂಟ್ವಾಳ:    ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಒದಗಿಸುತ್ತಿರುವ ವಿಮಾ ಪಾಲಿಸಿಗೆ ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಯವರನ್ನೂ ಸೇರಿಸಿಕೊಳ್ಳಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಜನಾರ್ದನ ಹೇಳಿದ್ದಾರೆ.
ಈಗಾಗಲೇ ಸರ್ಕಾರ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಉಚಿತ ವಿಮಾ ಸೌಲಭ್ಯವನ್ನು ಅಂಗನವಾಡಿ, ಆಶಾ, ಪೊಲೀಸ್ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಒದಗಿಸುತ್ತಿದ್ದು, ಇದು ೩೦ ಲಕ್ಷ ರೂಗಳ ಪಾಲಿಸಿಯನ್ನು ಹೊಂದಿರುತ್ತದೆ. ಕೊರೊನಾ ಹರಡಲು ಆರಂಭವಾದ ದಿನದಿಂದ ಇಂದಿನವರೆಗೂ ಗ್ರಾಮೀಣ ಕಾರ್ಯಪಡೆಯಲ್ಲಿ ಗ್ರಾಮಕರಣಿಕರು, ಪಿಡಿಒಗಳು, ಬಿಲ್ ಕಲೆಕ್ಟರ್ ಗಳು ಹಗಲಿರುಳು ಕೆಲಸ ಮಾಡಿದ್ದಾರೆ. ಕಂದಾಯ ಇಲಾಖೆಯಲ್ಲಿ ಜಿಲ್ಲಾಧಿಕಾರಿಯಿಂದ ಗ್ರಾಮ ಸಹಾಯಕರವರೆಗೆ, ಪಂಚಾಯತ್ ರಾಜ್ ಇಲಾಖೆಯಲ್ಲಿ ಜಿಪಂ ಸಿಇಒರಿಂದ ಡಿ ಗ್ರೂಪ್ ನೌಕರರವರೆಗೆ ಎಲ್ಲರೂ ಪ್ರಾಮಾಣಿಕವಾಗಿ ಸಮಯದ ಮಿತಿಯನ್ನು ನೋಡದೆ ಕೊರೊನಾ ವಾರಿಯರ್ಸ್ ಗಳಾಗಿ ದುಡಿಯುತ್ತಿದ್ದು ಪ್ರತಿಯೊಂದು ಕೆಲಸಗಳಲ್ಲೂ ಇತರ ಇಲಾಖೆಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ.
ಮನೆಯಲ್ಲಿ ವೃದ್ಧರು, ಮಕ್ಕಳಿರುವ ಸಂದರ್ಭವೂ ಇತರ ಇಲಾಖೆಗಳಷ್ಟೇ ತುರ್ತು ಕೆಲಸ ಕಾರ್ಯಗಳನ್ನು ಹಗಲಿರುಳು ನಿರ್ವಹಿಸುವ ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರಿಗೂ ಸರ್ಕಾರದ ಉಚಿತ ವಿಮಾ ಪಾಲಿಸಿ ಒದಗಿಸಿಕೊಡಬೇಕು ಎಂದು ಅವರು ವಿನಂತಿಸಿದ್ದಾರೆ. ಕಂದಾಯ ಇಲಾಖೆ ಕಚೇರಿಗಳಾದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಾಲೂಕು ಮತ್ತು ನಾಡಕಚೇರಿಗಳಲ್ಲಿ ಹೆಚ್ಚಿನ ಸಿಬ್ಬಂದಿ ಮಹಿಳಾ ನೌಕರಿದ್ದಾರೆ ಎಂದವರು ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter