Published On: Sun, Jul 5th, 2020

“ಗ್ರಾಮೀಣಾಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ”ಎಂಬ ಕುರಿತು ನಡೆದ ತರಬೇತಿ

ಉಡುಪಿ : ಯುವ ಜನತೆ ತಮ್ಮ ಬಿಡುವಿನ ವೇಳೆಯನ್ನು ಸಮಾಜಮುಖಿ ಕಾಯ೯ದಲ್ಲಿ ತೊಡಗಿಸಿಕೊಂಡರೆ ಗ್ರಾಮೀಣ ಮಟ್ಟದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜೇಸಿಐ ವಲಯ ತರಬೇತುದಾರ ರಾಘವೇಂದ್ರ ಪ್ರಭು,ಕವಾ೯ಲು ಹೇಳಿದರು.ಅವರು ಜೇಸಿಐ ಬೆಳ್ಮಣ್, ನೆಹರುಯುವ ಕೇಂದ್ರ ನಂದಳಿಕೆ ಅಬ್ಬನಡ್ಕ ಶ್ರೀ ದುಗಾ೯ ಪರಮೇಶ್ವರಿ ಫ್ರ್oಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಕ್ಲಬ್ ನ ರಂಗಮಂದಿರದಲ್ಲಿ “ಗ್ರಾಮೀಣಾಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ”ಎಂಬ ಕುರಿತು ನಡೆದ ತರಬೇತಿ ಕಾಯಾ೯ಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.IMG-20200705-WA0008
ಎಲ್ಲದಕ್ಕೂ ಸಕಾ೯ರವನ್ನು ಕಾಯದೆ ಸಂಘ ಸಂಸ್ಥೆಗಳು ಅಭಿವೃದ್ಧಿ ನಡೆಸಲು ಸಾಧ್ಯ ಅದೇ ರೀತಿ ಮೂಲಭೂತ ಅವಶ್ಯಕತೆ ಕೊರತೆ ಬಗ್ಗೆ ಸಕಾ೯ರ ದ ಗಮನ ಸೆಳೆಯಬಹುದು ಎಂದರು.
ಉದ್ಘಾಟನೆ ನೆರವೇರಿಸಿದ ಸ್ವಚ್ಚ ಭಾರತ ಪ್ರೇoಡ್ಸ್ ನ ಸ್ಥಾಪಕ, ಸಂಚಾಲಕ ಗಣೀಶ್ ಪ್ರಸಾದ ಜಿ.ನಾಯಕ್ ಯುವ ಜನರು ಸಂಘ ಸಂಸ್ಥೆಗಳಲ್ಲಿ ಸೇರುವ ಮೂಲಕ ವಿವಿಧ ಅಭಿವೃದ್ಧಿ ಪರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದರು.
ಜೇಸಿ ಅಧ್ಯಕ್ಷ, ಇಂದಾರು ಸತ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.ಕ್ಲಬ್ ಅಧ್ಯಕ್ಷ ಅಬ್ಬನಡ್ಕ ಸತೀಶ ಪೂಜಾರಿ, ಕಾಯ೯ದಶಿ೯ ಪ್ರಶಾಂತ್ ಪೂಜಾರಿ, ಮಹಿಳಾ ಕಾಯ೯ದಶಿ೯ ವೀಣಾ ಹರೀಶ್ ಪೂಜಾರಿ, ಜೆಸಿರೆಟ್ ಸೌಜನ್ಯ ಸತೀಶ್ ಕೋಟ್ಯಾನ್, ಜೆಜೆಸಿ ಸಂದೀಪ್ ಕುಲಾಲ್ ಮುಂತಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter