Published On: Fri, Jul 3rd, 2020

ಬಂಟ್ವಾಳ: ಪತ್ರಿಕಾ ವಿತರಕ ಹಾಗೂ ಒಂದೇ ಮನೆಯ ಐದು ಮಂದಿಗೆ ಕೊರೋನ ಪಾಸಿಟಿವ್

ಬಂಟ್ವಾಳ: ಪತ್ರಿಕೆ ವಿತರಕ ಸಹಿತ ಆರು ಮಂದಿಗೆ ಬಂಟ್ವಾಳ,  ತಾಲೂಕಿನಲ್ಲಿ ಕೋವಿಡ್ – 19  ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಾ ಸಾಗಿದ್ದು ಬಂಟ್ವಾಳ ಪೇಟೆಯ ಪತ್ರಿಕೆ ವಿತರಕ ಸಹಿತ ಆರು ಮಂದಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.IMG_20200703_131108

ಫರಂಗಿಪೇಟೆಯ ಯುವಕನೊಬ್ಬನಿಗೆ ಸೋಂಕು ದೃಢಪಟ್ಟಿದ್ದು ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜ್ವರದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿದ್ದ ಅವರ ವರದಿ ಪಾಸಿಟಿವ್ ಬಂದಿದ್ದು ಅವರಿಗೆ ಯಾರ ಸಂಪರ್ಕದಿಂದ ಸೋಂಕು ತಗುಲಿದೆ ಎಂಬುದು ನಿಗೂಢವಾಗಿದೆ. ‌ಮಂಗಳೂರು ಧಕ್ಕೆಯಲ್ಲಿ ಕೆಲಸ ಮಾಡುವ ಅವರಿಗೆ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು ವೈದ್ಯರ ಸಲಹೆಯಂತೆ ಕೋವಿಡ್ ಪರೀಕ್ಷೆ ನಡೆಸಿದ್ದಾರೆ. ಆ ಬಳಿಕ ಅವರು ಮನೆಯಲ್ಲೇ ಇದ್ದರು. ಸೋಂಕು ದೃಢಪಟ್ಟ ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

ಕೆಲವು ದಿನಗಳ ಹಿಂದೆ ಬಿ.ಸಿ.ರೋಡ್ ಕೈಕಂಬ ಸಮೀಪದ ಪರ್ಲ್ಯದ ವೈದ್ಯರೊಬ್ಬರಿಗೆ ಕೊರೋನ ಪಾಸಿಟಿವ್ ಪತ್ತೆಯಾಗಿದ್ದು, ಅವರ ಕುಟುಂಬದ ನಾಲ್ವರಿಗೆ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಈ ಐವರು ಒಂದೇ ಮನೆಯಲ್ಲಿ ವಾಸವಿದ್ದರು. ಹಾಗೆಯೇ  ಬಂಟ್ವಾಳ ಪೇಟೆಯ ನಿವಾಸಿ, ಪತ್ರಿಕೆ ವಿತರಕರೊಬ್ಬರಿಗೂ ಕೊರೋನ ಪಾಸಿಟಿವ್ ಕಾಣಿಸಿ ಕೊಂಡಿದೆ.ಇವರ ಮನೆ ಮಂದಿಯ ಗಂಟಲದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು,ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ. ಶುಕ್ರವಾರ ಬಂಟ್ವಾಳ ಪರಿಸರದಲ್ಲಿ ಯಾವುದೇ ಪತ್ರಿಕೆಗಳು ವಿತರಣೆಯಾಗಿಲ್ಲ.

ಸದ್ಯ ಇವರ ಹಾಗೂ ಅಕ್ಕಪಕ್ಕದ ಅಂಗಡಿಗಳನ್ನು ಮುಚ್ಚಲಾಗಿದೆಯಲ್ಲದೆ ಬಂಟ್ವಾಳ ಪೇಟೆಯ ಕೆಲ ಹೊಟೇಲ್ ಗಳು ಕೂಡ ಸ್ವಯಂಪ್ರೇರಿತವಾಗಿ ಮುಚ್ಚಿವೆ,  ಹಾಗೆಯೇ ಕೊರೋನ ವಿಚಾರದಲ್ಲಿ ಕೆಲವೊಂದು ವದಂತಿಗಳು ವ್ಯಾಪಕವಾಗಿ ಹಬ್ಬುತ್ತಿದ್ದು,ಪರಿಣಾಮ ಜನರು ಮತ್ತಷ್ಟು ಆತಂಕಕ್ಕೆ ಭೀತಿಗೊಳಗಾಗುವಂತಾಗಿದೆ.

ತಾಪಂ ಕಚೇರಿಗೆ ನಿರ್ಬಂಧ: 

ಬಂಟ್ವಾಳ ತಾಲೂಕಿನಲ್ಲು ಕೊರೊನಾ ಸೋಂಕು ಭೀತಿ ಹೆಚ್ಚುತ್ತಿರುವುದರಿಂದ ತಾಲೂಕು ಪಂಚಾಯತ್ ಕಚೇರಿಗೆ ಮುಂಜಾಗೃತಾಕ್ರಮವಾಗಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ತಾ.ಪಂ.ನ ಕಚೇರಿಯ ಗೇಟಿನಲ್ಲಿ ನಾಮಫಲಕ ಹಾಕಲಾಗಿದೆ.
ಸಾರ್ವಜನಿಕರು ಅನಗತ್ಯವಾಗಿ  ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿಗೆ ಬರುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಪ್ರವೇಶಕ್ಕೆ ಮಾತ್ರ ನಿಷೇಧ ಹೇರಲಾಗಿದೆ ಎಂದು ಗೇಟಿಗೆ ನಾಮಫಲಕ ಅಳವಡಿಸಲಾಗಿದೆ.ಕಚೇರಿ ಎಂದಿನಂತೆ ಕಾರ್ಯಾಚರಿಸುತ್ತಿದ್ದು, ಇಒ,ಕಚೇರಿ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ,ಕೆಲದಿನಗಳ ಮಟ್ಟಿಗೆ ಮುಂಜಾಗೃತಾಕ್ರಮವಾಗಿ ಅನಗತ್ಯವಾಗಿ ಸಾರ್ವಜನಿಕ ಪ್ರವೇಶವನ್ನು ಮಾತ್ರ ನಿರ್ಬಂಧಿಸಲಾಗಿದೆ ಎಂದು ಕಚೇರಿ ಮೂಲಗಳು ತಿಳಿಸಿವೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter