Published On: Thu, Jul 2nd, 2020

ಸ್ವಚ್ಚತೆಗೆ ಧಕ್ಕೆ ತಂದರೆ ಕ್ರಮ ಕೈಗೊಳ್ಳಿ ಇಒ ರಾಜಣ್ಣ ಗ್ರಾಪಂಗೆ ಸೂಚನೆ

ಬಂಟ್ವಾಳ: ಸ್ವಚ್ಚತೆಗೆ ಯಾರೇ ಧಕ್ಕೆ ತಂದರೂ ಅಂತಹವರ ವಿರುದ್ದ ಕ್ರಮಕೈ ಗೊಳ್ಳುವ ಅಧಿಕಾರ ಗ್ರಾಪಂ ಆಡಳಿತ ಮಂಡಳಿಗೆ ಅಧಿಕಾರವಿದೆ ಎಂದು ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ತಿಳಿಸಿದ್ದಾರೆ.ಪುದು ಗ್ರಾಪಂ ನಲ್ಲಿ  ನಡೆದ ಕೋವಿಡ್ -19 ಕಾರ್ಯಪಡೆಯ ತುರ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪೊಲೀಸರ ಸಹಕಾರ ಪಡೆದು ಸ್ವಚ್ಚತೆಗೆ ಧಕ್ಕೆ ತರುವವರ ವಿರುದ್ದ ಕ್ರಮಕೈಗೊಳ್ಳುವಂತೆ ಸೂಚಿಸಿದರು.  ಇದಕ್ಕೆ  ಪ್ರತಿಕ್ರಿಯಿಸಿದ ಗ್ರಾಪಮನ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಮನೆ,ಮನೆ ಕಸ ಸಂಗ್ರಹಕ್ಕೆ ಪಂಚಾಯತ್ ನಿಂದ ಕ್ರಮ ಕೈಗೊಳ್ಳಲಾಗಿದೆ.ಹೊರ ಪ್ರದೇಶದವರು ಬಂದು ಇಲ್ಲಿನ ರಸ್ತೆ ಬದಿಯಲ್ಲಿ ಕಸ,ತ್ಯಾಜ್ಯ ಎಸೆಯತ್ತಾರೆ.ಮುಂದಿನ ದಿನದಲ್ಲಿ ಅಂತಹವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ ಐ ಪ್ರಸನ್ನ ಅವರು ಮಾತನಾಡಿ ಕೋವಿಡ್-೧೯ ಕಾರ್ಯಾಚರಣೆಗೆ ಯಾರೇ ಅಡ್ಡಿ ಪಡಿಸಿದರೆ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಇದೇ ವೇಳೆ ಪುದು ಪ್ರಾ.ಆ.ಕೇ.ದ ವೈದ್ಯಾಧಿಕಾರಿ ಸುದರ್ಶನ್ ಕೋವಿಡ್ ಸೋಂಕಿನ ಕುರಿತು ಮಾಹಿತಿ ನೀಡಿದರು.ಗ್ರಾಪಂ ಉಪಾಧ್ಯಕ್ಷೆ ಲಿಡಿಯಾ ಪಿಂಟೋ ಉಪಸ್ಥಿತರಿದ್ದರು.ಆಶಾ,ಅಂಗನವಾಡಿಕಾರ್ಯ ಕರ್ತೆಯರು,ಗ್ರಾಪಂ ಸದಸ್ಯರು ಭಾಗವಹಿಸಿದ್ದರು.ಪಿಡಿಒ ಆನಂದ್ ಸ್ವಾಗತಿಸಿ,ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter