Published On: Thu, Jul 2nd, 2020

ವೈದ್ಯರು ರೋಗಿಗಳ ಜೀವರಕ್ಷಣಿಗೆ ತಮ್ಮ ಬದುಕನ್ನು ತ್ಯಾಗ ಮಾಡಿ ಸಮಾಜದ ರಕ್ಷಕರಾಗಿ ಕಾಯ೯ ನಿವ೯ಹಿಸುತ್ತಿದ್ದಾರೆ:ಡಾ| ಉಮೇಶ್ ಪ್ರಭು

ಉಡುಪಿ : ವೈದ್ಯರು ರೋಗಿಗಳ ಜೀವರಕ್ಷಣಿಗೆ ತಮ್ಮ ವೈಯತ್ತಿಕ ಬದುಕನ್ನು ತ್ಯಾಗ ಮಾಡಿ ಸಮಾಜದ ರಕ್ಷಕರಾಗಿ ಕಾಯ೯ ನಿವ೯ಹಿಸುತ್ತಿದ್ದಾರೆ.ಕೊವಿಡ್ ಸಮಯದಲ್ಲಿ ವೈದ್ಯರನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎಂದು ಭಾರತೀಯ ವೈದ್ಯ ಸಂಘ ಕರಾವಳಿ ಶಾಖೆ ಅಧ್ಯಕ್ಷ ಡಾ| ಉಮೇಶ್ ಪ್ರಭು ಹೇಳಿದರು.IMG_20200701_215833

ಅವರು ಜುಲೈ 1 ರಂದು ಬಡಗಬೆಟ್ಟು ಸೊಸೈಟಿಯ ಜಗನ್ನಾಥ್ ಸಭಾ ಭವನದಲ್ಲಿ ವೈದ್ಯಕೀಯ ಪ್ರತಿನಿಧಿ ಸಂಘ(ಕೆ.ಎಸ್.ಎಂ ಎಸ್.ಆರ್.ಎ) ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ 18ನೇ ವಷ೯ದ ವೈದ್ಯರ ದಿನಾಚರಣೆ ಕಾಯ೯ಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಹೇಳಿದರು.ಕೋವಿಡ್ ನಿಂದ ವೈದ್ಯರು, ವೈದ್ಯಕೀಯ ಸಿಬ್ಬ೦ದಿಗಳು ಹಗಲು ರಾತ್ರಿಯೆನ್ನದೆ ಕಾಯ೯ ನಿವ೯ಹಿಸುತ್ತಿರುವುದು ಅಭಿನಂದನೀಯ ಎಂದರು.
ಬಡಗಬೆಟ್ಟು ಸೊಸೈಟಿಯ ಪ್ರ.ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ವೈದ್ಯರು ನಿಜವಾದ ಸಮಾಜ ರಕ್ಷಕರು ಅವರ ಸೇವೆ ಅಭಿನಂದನೀಯ ಎಂದರು.ವೇದಿಕೆಯಲ್ಲಿ ವೇಣುಗೋಪಾಲ ಹೆಬ್ಬಾರ್, ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಕಾಯ೯ದಶಿ೯ ಶ್ರೀನಾಥ್ ಕೋಟ, ವೈದ್ಯಕೀಯ ಪ್ರತಿನಿಧಿ ಸಂಘದ ಪ್ರ.ಕಾಯ೯ದಶಿ೯ ಪ್ರಸನ್ನ ಕಾರಂತ್, ಪ್ರಕಾಶ್ ಆಚಾರ್ ಉಪಸ್ಥಿತರಿದ್ದರು. ಹಿರಿಯ ಸಾಧಕ ವೈದ್ಯರಾದ ಕುಟುಂಬ ವೈದ್ಯ ಡಾ| ಡೊನಾಲ್ಡ್ ಸೈಮನ್, ಕೆ.ಎಂ.ಸಿ ಮಣಿಪಾಲ ಇ.ಎನ್.ಟಿ ವಿಭಾಗದ ಡಾI ದೀಪಕ್ ರಂಜನ್ ನಾಯ್ಕ್  ರವರನ್ನು ಗೌರವಿಸಲಾಯಿತು.ಸನ್ಮಾನಿತರು ಶುಭ ಹಾರೈಸಿದರು.ಮಾಧವ ಆಚಾರ್ , ಸುಬ್ರಮಣ್ಯ, ಮೋಹನ್ ಸನ್ಮಾನ ಪತ್ರ ವಾಚಿಸಿದರು.ರಾಘವೇಂದ್ರ ಪ್ರಭು,
ಕವಾ೯ಲು ನಿರೂಪಿಸಿದರು. ಮಧುಸೂಧನ್ ಪ್ರಸ್ತಾಪಿಸಿದರು.ಕೋವಿಡ್ ಮಾಗ೯ ಸೂಚಿಯನ್ನು ಅನುಸರಿಸಿ ಕಾಯ೯ಕ್ರಮ ನಡೆಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter