Published On: Wed, Jul 1st, 2020

ಪತ್ರಕರ್ತರ ಸಂಘದಿಂದ ಹಿರಿಯ ಪತ್ರಕರ್ತರ ನೆನಪಿನಲ್ಲಿ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ-ಗೌರವ ಅರ್ಪಣೆ

ಕೋಲಾರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಯ ಪತ್ರಕರ್ತರ ನೆನಪಿಲ್ಲಿ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ಪತ್ರಿಕಾ ರಂಗದಲ್ಲಿ ಅಪ್ರತಿಮ ಸೇವೆ ಸಲ್ಲಿಸಿ ಮರೆಯಾದ ಪತ್ರಕರ್ತರ ನೆನಪಿನಲ್ಲಿ ನೀಡುವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಆಯ್ಕೆಯಾದ ಸಾಧಕ ಪತ್ರಕರ್ತರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.IMG_20200701_201820

ಪ್ರಶಸ್ತಿ ಪುರಸ್ಕೃತ ಸಾಧಕ ಪತ್ರಕರ್ತರು

ಪತ್ರಕರ್ತರ ಸಂಘ ದಿವಂಗತ ಕೆ.ಆರ್.ಕೃಷ್ಣಸ್ವಾಮಿ ಅವರ ನೆನಪಿನಲ್ಲಿ ಕೋಲಾರದ ವಿಜಯವಾಣಿ ಹಿರಿಯ ವರದಿಗಾರ ಪಾ.ಶ್ರೀ. ಅನಂತರಾಮ್, ಜಿ.ನಾರಾಯಣಸ್ವಾಮಿ ಅವರ ನೆನಪಿನಲ್ಲಿ: ಶ್ರೀನಿವಾಸಪುರದ ಹಿರಿಯ ಪತ್ರಕರ್ತ ಟಿ.ನಾರಾಯಣಸ್ವಾಮಿ, ಬಿ.ವಿ.ನರಸಿಂಹಮೂರ್ತಿ ಅವರ ನೆನಪಿನಲ್ಲಿ ಬಂಗಾರಪೇಟೆಯ ಕೋಲಾರ ಸೊಬಗು ದಿನಪತ್ರಿಕೆ ಸಂಪಾದಕ ತೇ.ಸಿ ಬದರಿನಾಥ್‍ರನ್ನು ಆಯ್ಕೆ ಮಾಡಿದ್ದು, ಅವರನ್ನು ಇಂದು ಸಚಿವ ಹೆಚ್.ನಾಗೇಶ್ ಮತ್ತಿತರರು ಸನ್ಮಾನಿಸಿದರು.

ಹಾಗೆಯೇ ಎಂ.ಮಲ್ಲೇಶ್ ನೆನಪಿನಲ್ಲಿ ಪಬ್ಲಿಕ್ ಟಿ.ವಿ ಮಾಧ್ಯಮ ಛಾಯಾಗ್ರಾಹಕ ಹೆಚ್.ಆರ್ ವಿಕ್ಕಿ ಮದನ್‍ಕುಮಾರ್, ಬಿ.ಎನ್.ಗುರುಪ್ರಸಾದ್ ನೆನಪಿನಲ್ಲಿ ಮುಳಬಾಗಿಲು ಪ್ರಜಾವಾಣಿ ನಂಗಲಿ ಹೋಬಳಿ ವರದಿಗಾರ ಕೆ.ತ್ಯಾಗರಾಜಪ್ಪ, ಹೆಚ್.ಎನ್.ಸೋಮಶೇಖರಗೌಡ ನೆನಪಿನಲ್ಲಿ ಮಾಲೂರು ಕನ್ನಡ ಪ್ರಭ  ತಾಲೂಕು ವರದಿಗಾರ ರಾಜೇಂದ್ರ ವೈದ್ಯ, ಬಿ.ಆರ್ಮುಗಂ ನೆನಪಿನಲ್ಲಿ ಕೆ.ಜಿ.ಎಫ್‍ನ ಹೊನ್ನುಡಿ ತಾಲೂಕು ವರದಿಗಾರ ಎನ್.ಆರ್ ಪುರುಷೋತ್ತಮ್, ಸಿ.ಎಂ.ರಂಗಾರೆಡ್ಡಿ ನೆನಪಿನಲ್ಲಿಕೋಲಾರದ ಕನ್ನಡ ಪ್ರಭ ಜಿಲ್ಲಾ ವರದಿಗಾರ ಜೆ.ಸತ್ಯರಾಜ್, ವಿ.ಎಂ.ನಾಗಪ್ಪ ಅವರ ನೆನಪಿನಲ್ಲಿ ಕೋಲಾರದ ಡೈಲಿ ಸಾಲಾರ್ ಜಿಲ್ಲಾ ವರದಿಗಾರ ಸೈಯದ್ ತಬ್ರೇಜ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ ವಿಧಾನಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಸಿ.ಆರ್.ಮನೋಹರ್, ನಸೀರ್ ಅಹಮದ್,ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಪಂ ಸಿಇಒ ಹೆಚ್.ದರ್ಶನ್, ಎಎಸ್‍ಪಿ ಜಾಹ್ನವಿ, ಜಿಲ್ಲಾಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ರಾಜ್ಯಕಾರ್ಯಕಾರಿ ಸದಸ್ಯರಾದ ಬಿ.ವಿ.ಗೋಪಿನಾಥ್, ಮಹಮದ್ ಯೂನಸ್, ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ, ನಗರಸಭಾ ಸದಸ್ಯ ಮಂಜುನಾಥ್,ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಕರ್, ಖಜಾಂಚಿ ಸುರೇಶ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter