Published On: Wed, Jul 1st, 2020

ವೈದ್ಯರು ಆರೋಗ್ಯದ ರಕ್ಷಣೆ ಮಾಡುವ ನಿಜವಾದ ದೈವ ಸಂಬೂತ

ವೈದ್ಯೋ ನಾರಾಯಣ ಹರಿ: ಎಂಬ ಮಾತಿನಂತೆ ವೈದ್ಯರನ್ನು ನಾವು ದೇವರಿಗೆ ಹೋಲಿಕೆ ಮಾಡುತ್ತೇವೆ ಕಾರಣ ದೇವರು ಸೃಷ್ಟಿಕತ೯ನಾದರೆ ವೈದ್ಯರು ಆರೋಗ್ಯದ ರಕ್ಷಣೆ ಮಾಡುವ ನಿಜವಾದ ದೈವ ಸಂಬೂತರಾಗಿದ್ದಾರೆ.

IMG-20200701-WA0015
ಉಸಿರಾಟ ಏರುಪೇರಾ ದಾಗ, ದೇಹಕ್ಕೆ ಸಂಕಟ ಒದಗಿದ ಸಂದಭ೯ದಲ್ಲಿ ನಮಗೆ ನೆನಪಾಗುವುದು ವೈದ್ಯರು.ಪ್ರಸ್ತುತ ಸನ್ನಿವೇಶದಲ್ಲಿ ಈ ವೈದ್ಯರ ಸೇವೆ ಅನನ್ಯ ಅಮೋಘವಾಗಿದೆ. ಅವರ ಖಾಸಗಿ ಬದುಕನ್ನು ಬದಿಗಿರಿಸಿ ರೋಗಿಗಳ ಆರೋಗ್ಯ ರಕ್ಷಣೆಗೆ ಅದೆಲ್ಲವನ್ನು ತ್ಯಾಗ ಮಾಡಿ ಜೀವನ ನಡೆಸುತ್ತಿರುವ ಎಲ್ಲಾ ವೈದ್ಯರು ಅಭಿನಂದನಾಹ೯ರು.
ಭಗವಂತನು ವೈದ್ಯರ ರೂಪದಲ್ಲಿ ನಮ್ಮೆಲ್ಲರನ್ನು ರಕ್ಷಣಿ ಮಾಡುತ್ತಿವನು ಹೀಗಾಗಿ ವೈದ್ಯರ ಆರೋಗ್ಯಕ್ಕೆ ನಾವು ದೇವರಲ್ಲಿ ಪ್ರಾಥ೯ನೆ ಮಾಡಬೇಕು.
ಮಹಾನ್ ವೈದ್ಯರಾಗಿದ್ದ ಅದೇ ರೀತಿ ಪ.ಬಂಗಾಳದ ಮುಖ್ಯಮಂತ್ರಿಯಾಗಿ ಕಾಯ೯ನಿವ೯ಹಿಸಿದ ಭಾರತ ರತ್ನ ಡಾ” ಬಿಧಾನ್ ಚಂದ್ರ ರಾಯ್ ಅವರು ಜುಲೈ 1, 1882 ರಲ್ಲಿ ಜನಿಸಿ ಜುಲೈ 1 ,1962 ರಲ್ಲಿ ನಿಧನರಾದರು ಅವರ ಜನನ ಮತ್ತು ಮರಣದ ದಿನವಾದ ಜುಲೈ1 ರಂದು ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಿಸಲಾಗುತ್ತದೆ. ಅವರು ಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸಲು ವೈದ್ಯಕೀಯ ಕ್ಷೇತ್ರ ತನ್ನದಾಗಿಸುವ ಮೂಲಕ ವೈದ್ಯಕೀಯ ಲೋಕಕ್ಕೆ ಕೊಡುಗೆ ನೀಡಿದರು ರಾಜಕಾರಣಿಯಾಗಿ, ವೈದ್ಯರಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿ ಮಾಡಿದ ಸಾಧನೆಯನ್ನು ನೆನಪಿಸುವ ದೃಷ್ಟಿಯಿಂದ ಈ ದಿನವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ.
ಪ್ರಸ್ತುತ ಕೋವಿಡ್ ಸಂಧಭ೯ದಲ್ಲಿ ಹಗಲು ರಾತ್ರಿಯೆನ್ನದೆ ಸೇವೆ ಸಲ್ಲಿಸಿ ಎಷ್ಟೇ ತೊಂದರೆ, ಭೀತಿ ಯಿದ್ದರೂ ಅದನ್ನು ಲೆಕ್ಕಿಸದೆ ಸೇವೆ ಮಾಡುವ ವೈದ್ಯರು ನಿಜವಾದ ಜನ ಸೇವಕರು ಎಂದರೆ ಅತಿಶಯೋಕ್ತಿಯಾಗಲಾರದು.ದೇಶದ ಹೊರಗಿನ ಶತ್ರುಗಳೊಡನೆ ಯೋಧರು ಹೋರಾಡುತ್ತಿದ್ದಾರೆ, ದೇಶದ ಒಳಗಿನ ಈ ಶತ್ರುವನ್ನು ಹೊಡೆದೊಡಿಸಲು ಸಾಮಾಜಿಕ ಪಿಡುಗನ್ನು ದೂರ ಮಾಡಲು ಸೇವೆ ನೀಡುತ್ತಿರುವ ವೈದ್ಯ ಸೇನಾನಿಗಳು. ವೈದ್ಯರ ಬಗ್ಗೆ ಎಷ್ಟೇ ಹೇಳಿದರೂ ಕಡಿಮೆಯೇ ಅವರ ಸೇವೆಗೆ ಬೆಲೆ ನೀಡಲು ಅಸಾಧ್ಯ.
ಸಾಮಾಜಿಕ ಖಾಯಿಲೆಯ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರಿಗೆ ನಾವೆಲ್ಲರೂ ನಿಜವಾಗಿಯೂ ಗೌರವ ಸಲ್ಲಿಸಬೇಕಾದರೆ ಕರೋನಾದ ವಿರುದ್ದ ವೈದ್ಯರ ಹೋರಾಟಕ್ಕೆ ನಾಗರೀಕರಾದ ನಾವು ಕರೋನಾ ಮಾಗ೯ ಸೂಚಿಯನ್ನು ಪಾಲನೆ ಮಾಡಬೇಕು.
ನಾವೆಲ್ಲರೂ ಇಂದು ಸಂತೋಷದಿಂದ ಆರೋಗ್ಯವಂತರಾಗಿ ಬದುಕಿದೆವು ಹೇಳಿದರೆ ಅದಕ್ಕೆ ಕಾರಣ ಎಲ್ಲಾ ವೈದ್ಯ ಸಮೂಹ.ಅಂತಹ ವೈದ್ಯ ಸಮೂಹಕ್ಕೆ ಕೋಟಿ ಕೋಟಿ ಪ್ರಣಾಮಗಳು.ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸುತ್ತಾ ಸಕಾ೯ರ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳಬೇಕು .
ಕೊನೆಯದಾಗಿ ಸುಂದರ ಸಮಾಜಕ್ಕಾಗಿ ಹೋರಾಟ ಮಾಡುತ್ತಿರುವ ಎಲ್ಲಾ ವೈದ್ಯರಿಗೂ ವೈದ್ಯ ದಿನದ ಶುಭ ಹಾರೈಕೆಗಳು.

*ರಾಘವೇಂದ್ರ ಪ್ರಭು,
*ಕವಾ೯ಲು ವೈದ್ಯಕೀಯಪ್ರತಿನಿಧಿ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter