Published On: Mon, Jun 29th, 2020

ನರಿಕೊಂಬು ಗ್ರಾಪಂ ವ್ಯಾಪ್ತಿಯಲ್ಲಿ 3.95 ಕೋ.ರೂ.ವೆಚ್ಚದ ಕಾಮಗಾರಿಗಳ ಉದ್ಘಾಟನೆ

ಬಂಟ್ವಾಳ : ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಒಟ್ಟು 3.95 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೋಮವಾರ ನೆರವೇರಿಸಿದರು.
DSC_0151
ಉದ್ಘಾಟನೆಗೊಂಡ ರಸ್ತೆಗಳು: 1.75  ಕೋಟಿ ವೆಚ್ಚದಲ್ಲಿ ಶೇಡಿಗುರಿ -ಮುಂಡೆಜೋರ ರಸ್ತೆ,80 ಲಕ್ಷದ ರೂ. ವೆಚ್ಚದಲ್ಲಿ ಮದಕ- ಕೇದಿಗೆ ರಸ್ತೆ, 69 ಲಕ್ಷ ರೂ. ವೆಚ್ಚದಲ್ಲಿ ಮೊಗರ್ನಾಡು- ಪುಳಿಕುಕ್ಕು ರಸ್ತೆ , 6 ಲಕ್ಷ ರೂ. ವೆಚ್ಚದಲ್ಲಿ ಅಂತರ ಬೈಲು ರಸ್ತೆ,  5 ಲಕ್ಷ ರೂ. ವೆಚ್ಚದಲ್ಲಿ ಭಾಗೀರಥಿಕೋಡಿ- ಗಡಂಗಿನಗುಡ್ಡೆ ರಸ್ತೆ, 15 ಲಕ್ಷ ರೂ. ವೆಚ್ಚದಲ್ಲಿ ನಾಯಿಲ- ಕಾಪಿಕಾಡು- ಬೋರುಗುಡ್ಡೆ ರಸ್ತೆ , 5 ಲಕ್ಷ ರೂ. ವೆಚ್ಚದಲ್ಲಿ ನರಿಕೊಂಬು ಹಿಂದೂ ರುದ್ರಭೂಮಿ ಸಂಪರ್ಕಿಸುವ ರಸ್ತೆಯನ್ನು ಶಾಸಕ ರಾಜೇಶ್ ನಾಯ್ಕ್ ಅವರು ಉದ್ಘಾಟಿಸಿದರು.
DSC_0165
ತಡೆಗೋಡೆ ಪರೀಶೀಲನೆ :  ಬಳಿಕ 30 ಲಕ್ಷ ರೂ. ವೆಚ್ಚದಲ್ಲಿ  ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಮುಂಭಾಗ ನಿರ್ಮಾಣವಾಗುತ್ತಿರುವ ತಡೆಗೋಡೆ, 10 ಲಕ್ಷ ರೂ. ವೆಚ್ಚದಲ್ಲಿ ಬೋರುಗುಡ್ಡೆ ರಸ್ತೆ ಬದಿ ನಿರ್ಮಾಣವಾಗುತ್ತಿರುವ ತಡೆಗೋಡೆಯ ಕಾಮಗಾರಿಯ ಪ್ರಗತಿಯನ್ನು ಶಾಸಕರು ವೀಕ್ಷಿಸಿದರು.
DSC_0185
ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು, ಸದಸ್ಯರಾದ ರಂಜಿತ್ ಕೆದ್ದೇಲು, ವಸಂತ ಭೀಮಗದ್ದೆ, ಜಯರಾಜ್ ಶಂಭೂರು, ಕಿಶೋರ್ ಶೆಟ್ಟಿ ಅಂತರ, ಉದಯ ಶಾಂತಿಲ, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ,ಮಾಜಿ ತಾಪಂ ಉಪಾಧ್ಯಕ್ಷ ಆನಂದ ಎ.ಶಂಭೂರು, ಸ್ಥಳೀಯ ಪ್ರಮುಖರಾದ ರಘು ಸಪಲ್ಯ, ಕೃಷ್ಣಾನಂದ ಮಾಣಿಮಜಲು, ಪಕ್ಷದ ಪ್ರಮುಖರಾದ ರಮಾನಾಥ ರಾಯಿ, ಸುರೇಶ್ ಕೋಟ್ಯಾನ್,  ನಾರಾಯಣ ಪೂಜಾರಿ ದರ್ಖಾಸು ಮತ್ತು ಬೂತ್ ಸಮಿತಿ ಪದಾಧಿಕಾರಿಗಳು , ಸದಸ್ಯರು, ಪಕ್ಷದ ಕಾರ್ಯಕರ್ತರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
DSC_0185 DSC_0193

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter