Published On: Mon, Jun 29th, 2020

50 ಕೋ.ರೂ.ಹಣ ಬಿಡುಗಡೆಗೆ ಜಿಲ್ಲಾ ಕಾನೂನು ವೇದಿಕೆಯಿಂದ ಸರಕಾರಕ್ಕೆ ಮನವಿ

ಬಂಟ್ವಾಳ: ಕೊವೀಡ್-19ರ ಲಾಕ್ ಡೌನ್ ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದ ವಕೀಲ ಸಮುದಾಯಕ್ಕೆ ಕನಿಷ್ಟ 50 ಕೋಟಿ ರೂ.ಹಣವನ್ನು ಬಿಡುಗಡೆ ಮಾಡುವಂತೆ  ದ.ಕ.ಜಿಲ್ಲಾ ಕಾನೂನು ವೇದಿಕೆಯ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

DSC_9247 ಸೋಮವಾರ ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಬಂಟ್ವಾಳ ವಕೀಲ ಸಮುದಾಯದ ಆಶ್ರಯದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಸರಕಾರ ಕೇವಲ 5 ಕೋ.ರೂ.ಬಿಡುಗಡೆ ಮಾಡಿದ್ದು,ಇದು ಏನೇನು ಸಾಲದು,ಕನಿಷ್ಠ 50 ಕೋ.ರೂ.ಹಣ ಬಿಡುಗಡೆ ಮಾಡಿ  ವಕೀಲ ಸಮುದಾಯವನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ.

DSC_9244ಕರೋನ ಮಹಾಮಾರಿಯಿಂದಾಗಿ ತಾಲೂಕು ಮಟ್ಟದಿಂದ ಹಿಡಿದು ಸು.ಕೋ.ವರೆಗೂ ಯಾವುದೇ ನ್ಯಾಯಾಲಯದಲ್ಲಿ ಕಲಾಪಗಳು ಆಕ್ಷರಶ: ಸ್ಥಗಿತವಾಗಿರುವ ಹಿನ್ನಲೆಯಲ್ಲಿ ವಕೀಲ ವೃತ್ತಿಯನ್ನು ನಂಬಿರುವ  ರಾಜ್ಯದ ವಕೀಲರು ಆರ್ಥಿಕ ಸಂಕಷ್ಟದ ಜತೆಗೆ ಮಾನಸಿಕವಾಗಿ ಜರ್ಜರಿತವಾಗಿದ್ದು, ತಕ್ಷಣ ಸರಕಾರ ವಕೀಲ ಸಮಿದಾಯಕ್ಕೆ ಸಹಾಯಧನ ಬಿಡುಗಡೆ ಮಾಡುವುದಲ್ಲದೆ ರಾಷ್ಟ್ರೀಕೃತ,ಸಹಕಾರಿ ಬ್ಯಾಂಕ್ ಗಳ ಮೂಲಕ 5 ಲಕ್ಷರೂ.ಬಡ್ಡಿ ರಹಿತ ಸಾಲವನ್ನು ಕೊಡಿಸಲು ಸೂಚಿಸುವಂತೆ ಎಸ್ ಪಿ ಚೆಂಗಪ್ಪ ಒತ್ತಾಯಿಸಿದ್ದಾರೆ. ಕೈದಿಗಳ ಭೇಟಿಗೆ ಅವಕಾಶ ನೀಡಿ:  ರಾಜ್ಯಾದಾದ್ಯಂತ ಹಲವಾರು ಬಂಧೀಖಾನೆಗಳಲ್ಲಿರುವ ವಿಚಾರಣಾಧೀನ ಮತ್ತು ಶಿಕ್ಷೆಗೊಳಗಾದ ಖೈದಿಗಳನ್ನು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಗೆ ಒಳಪಡಿಸಬೇಕು ಹಾಗೂ ಅವರ ಕುಟುಂಬಸ್ಥರ ಭೇಟಿಗೂ ಅವಕಾಶ ಕಲ್ಪಿಸಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದರು. ಬಳಿಕ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಉದನೇಶ್ವರ .ಬಿ, ವೀರೇಂದ್ರ ಎಂ.ಸಿದ್ದಕಟ್ಟೆ,ಉಮೇಶ್ ಕುಮಾರ್ ವೈ,ಬಿ.ವಿ.ಶೆಣ್ಯೆ,ಸುರೇಶ್ ಪೂಜಾರಿ,ರವೀಂದ್ರ ಕುಕ್ಕಾಜೆ, ತುಳಸೀದಾಸ್ ,ಮೋಹನ್ ಕಡೇಶ್ವಾಲ್ಯ,ರಾಜಾರಾಮ ನಾಯಕ್,ಪ್ರಸಾದ್ ಕುಮಾರ್ ರೈ ಮೊದಲಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter