Published On: Sun, Jun 21st, 2020

ಅಬುಧಾಬಿಯಲ್ಲಿ ಮೃತಪಟ್ಟ ಯುವಕನ ಮೃತದೇಹ ತವರೂರಿಗೆ

ಕೈಕಂಬ: ಮಂಗಳೂರಿನ ಯುವಕ ಅಬುಧಾಬಿಯಲ್ಲಿ   ಹದಿನೈದು ದಿನಗಳ  ಹಿಂದೆ  ಅಡ್ಡೂರು ಪುನಿಕೋಡಿ  ಎಂಬಲ್ಲಿಯ   ಯುವಕನೋರ್ವನ ಮೃತಪಟ್ಟ ಘಟನೆ ನಡೆದಿದೆ.  ಪುನಿಕೋಡಿ  ದಿ. ನಾರಾಯಣ ಪೂಜಾರಿ ಮತ್ತು ಲಲಿತಾ ದಂಪತಿಯ ಪುತ್ರ ಯಶವಂತ ಪೂಜಾರಿ (37) ಮೃತಪಟ್ಟ ಯುವಕ  ಎನ್ನಲಾಗಿದೆ.   78007611-ba15-4645-9394-39bb13cab5bb

ಈ ದಂಪತಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯಿದ್ದು,  ಯಶವಂತ ಅವರು   ಉದ್ಯೋಗಕ್ಕೆ  ಮೂರು ವರ್ಷಗಳ ಹಿಂದೆ ಅಬುಧಾಬಿಗೆ  ತೆರಳಿದ್ದರು. ಜೂ.5ರಂದು ಇವರು ಹೃದಯಾಘಾತದಿಂದ ಮೃತಪಟ್ಟಿದ್ದರು.24e59c82-cf83-44c3-a3df-48099c096eae

ಅವರ ಮೃತದೇಹವನ್ನು  ಶನಿವಾರ ಪೂರ್ವಾಹ್ನ 11:30ಕ್ಕೆ ಮೃತದೇಹವನ್ನು ವಿಮಾನದಲ್ಲಿ ಕಳುಹಿಸಿಕೊಡಲಾಗಿದ್ದು, ರಾತ್ರಿ ಕಲ್ಲಿಕೋಟೆಗೆ ತಲುಪಿದೆ. ರವಿವಾರ ಬೆಳಗ್ಗೆ ಅಡ್ಡೂರಿನ ಪುಣಿಕೋಡಿಗೆ ಮೃತದೇಹ ತಲುಪಲಿದೆ ಎಂದವರು ಮಾಹಿತಿ ನೀಡಿದ್ದಾರೆ.

ಮಗನ ಅನಿರೀಕ್ಷಿತ ಸಾವಿನ ಸುದ್ದಿ ಕೇಳಿ ಕಂಗೆಟ್ಟ ತಾಯಿ ಲಲಿತಾ ಮಗನ ಅಂತಿಮ ದರ್ಶನಕ್ಕೆ ಹಂಬಲಿಸಿದರು. ಆದರೆ ಲಾಕ್‌ಡೌನ್ ಸಡಿಲಿಕೆಯಾದರೂ ಕೊರೋನ ಹಾವಳಿ ಮುಂದುವರಿದಿರುವುದರಿಂದ ವಿದೇಶದಿಂದ ಮೃತದೇಹವನ್ನು ತರುವುದು ಅಷ್ಟು ಸುಲಭವಿರಲಿಲ್ಲ.  ಮೃತ ದೇಹವನ್ನು ಊರಿಗೆ ಹೇಗಾದರೂ ತರಬೇಕೆಂದು ನಿರ್ಧರಿಸಿದ ಆಸಿಫ್ ತಕ್ಷಣ ಅಡ್ಡೂರಿನ ಉದ್ಯಮಿ  ಹಿದಾಯತ್‌ರಿಗೆ ವಿಷಯ ತಿಳಿಸಿ ನೆರವು ಯಾಚಿಸಿದರು.

ಇದಕ್ಕಾಗಿ ಊರಿನಲ್ಲಿ ಆಸಿಫ್ ಸೂರಲ್ಪಾಡಿ, ಮುಝಮ್ಮಿಲ್ ನೂಯಿ, ಭಾಗ್ಯರಾಜ್, ರಾಜೇಶ್ ಮರೋಳಿ, ದೀಪಕ್ ಮಂಗಳೂರು, ನ್ಯಾಯವಾದಿ ಉಲ್ಲಾಸ್ ಪಿಂಟೊ ಸಹಕರಿಸಿದ್ದರೆ, ಅನಿವಾಸಿ ಕನ್ನಡಿಗರ ಪೈಕಿ ಶ್ರೀಧರ್, ರಶೀದ್ ಬಿಜೈ, ಸಿರಾಜುದ್ದೀನ್ ಪರ್ಲಡ್ಕ, ಪ್ರದೀಪ್ ಕಿರೋಡಿಯನ್, ದಯಾ ಕಿರೋಡಿಯನ್, ನವೀದ್ ಮಾಗುಂಡಿ, ಪ್ರವೀಣ್ ಶೆಟ್ಟಿ, ಬಶೀರ್ ಕೊಡ್ಲಿಪೇಟೆ, ಶರೀಫ್ ಸರ್ವೆ, ಇಮ್ರಾನ್ ಖಾನ್ ಎರ್ಮಾಳ್, ದೀಪಾ ಪೂಜಾರಿ ಸಹಿತ ಹಲವರು ಕೈಜೋಡಿಸಿದ್ದಾರೆ. ಅಂದಹಾಗೆ ನಮ್ಮಲ್ಲಿ ಹೆಚ್ಚಿನವರಿಗೆ ಪರಸ್ಪರ ಗುರುತು ಪರಿಚಯವಿರಲಿಲ್ಲ. ಮುಖಾಮುಖಿಯಾದವರೂ ಅಲ್ಲ. ಮಗನ ಮೃತದೇಹವನ್ನು ನೋಡಬೇಕು ಎಂಬ ತಾಯಿಯ ಹಂಬಲವನ್ನು ಈಡೇರಿಸಬೇಕು ಎಂಬ ಏಕೈಕ ಉದ್ದೇಶದಿಂದ ಜಾತಿ, ಮತ, ಧರ್ಮ, ಊರು, ಗಡಿ ಮರೆತು ಎಲ್ಲರೂ ಒಗ್ಗೂಡಿ ಪರಿಶ್ರಮ ಪಟ್ಟಿದ್ದಾರೆ. ಯಶವಂತ ಪೂಜಾರಿಯ ಕುಟುಂಬವು ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ಅವರಿಗೂ ನೆರವು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೂಡ ಪ್ರಯತ್ನ ಸಾಗುತ್ತಿದೆ’’ ಎಂದು ತಿಳಿಸಿದ್ದಾರೆ.ಒಟ್ಟಿನಲ್ಲಿ ಊರಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಕೂಡ ಜಾತಿ, ಮತ ಭೇದ ಮರೆತು ಮಾನವೀಯ ದೃಷ್ಟಿಯಿಂದ ಕೆಲಸ ಮಾಡಿದುದರ ಫಲದಿಂದ ಯುವಕನ ಮೃತದೇಹ ತವರೂರು ತಲುಪಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter