Published On: Fri, Jun 12th, 2020

ಉಡುಪಿ :  ಗಿಡಗಳೊಂದಿಗೆ_ಬದುಕುತ್ತಿರುವ  ಸುಂದರಿ ಅಜ್ಜಿ

ಹಸಿರು ಸೀರೆಯುಟ್ಟ ಇವರು ಸುಂದರಿ  ಅಜ್ಜಿ ಇವರ ಮುಗ್ಧ ಕಂಗಳಲ್ಲಿ ಹೊಳೆಯುವ ಆನಂದವೇ ಇವರ ಸೌಂದಯ೯ದ ಗುಟ್ಟು. ಈ ಆನಂದಕ್ಕೆ ಕಾರಣ ಇವರ ಜೀವನ ಪ್ರೇಮ. “ಸುಂದರಿ ಅಜ್ಜಿ”.. ನಿಮಗೀಗ ಎಂಭತ್ತಲ್ವ?” ಎಂದರೆ… “ಯಾರು ಹೇಳಿದ್ದು ನಿಮಗೆ? ನಂಗೆ ಈಗ ಅರುವತ್ತು ವಯಸ್ಸು ” ಎನ್ನುತ್ತಾರೆ. ಇವರ ದೇಹಾರೋಗ್ಯ ಹಾಗೂ ಮಾನಸಿಕ ಆರೋಗ್ಯದ ಗುಟ್ಟು ಈ ಪ್ರಕೃತಿ. IMG-20200612-WA0005

ಹಿರಿಯಡಕದ  ಸಾವ೯ಜನಿಕ ಅರಣ್ಯ ಇಲಾಖೆಯಲ್ಲಿ ಕಳೆದ 37 ವಷ೯ಗಳಿಂದ ಕೆಲಸ ಮಾಡುತ್ತಿದ್ದಾರೆ. ಹಾಗಂತ ಇವರದ್ದು  ಸರಕಾರಿ ಕೆಲಸವೇನಲ್ಲ.  ಬೇರೆ ಬೇರೆ ಹಣ್ಣುಗಳ ಬೀಜಗಳನ್ನು ಬಿತ್ತಿ, ಮೊಳಕೆ ಬಂದು ಸಸಿಯಾಗುವವರೆಗೆ ತನ್ನದೇ ಮಕ್ಕಳಂತೆ ಆರೈಕೆ ಮಾಡಿ ಇಲಾಖೆಯಲ್ಲಿ ಗಿಡ ಬೆಳೆಸುವುದು. ಕೇಳಿಕೊಂಡು ಬಂದವರಿಗೆ ತಾವೇ ಆರಿಸಿ ಕೊಡುತ್ತಾರೆ. ನಾವು ಯಾರೂ ಆ ಗಿಡಗಳನ್ನು ಮುಟ್ಟುವ ಹಾಗಿಲ್ಲ. ತಾನೇ ಆರಿಸಿ, ಹದಿನಾರರ ಹುಡುಗಿಯಂತೆ ಈ ಇಳಿವಯಸ್ಸಲ್ಲಿ ಲಾರಿಗೂ ತಾನೇ ಹತ್ತಿ ತುಂಬಿಸಿ, ಹೆಣ್ಣು ಮಗಳನ್ನು ತವರಿಂದ ಗಂಡನ ಮನೆಗೆ ಕಳುಹಿಸುವ ಹಾಗೆ ತಾವು ಬೆಳೆಸಿದ ಸಸಿ ಕೂಸುಗಳನ್ನು ತುಂಬು ಹೃದಯದಿಂದ ಕಳುಹಿಸಿಕೊಡುತ್ತಾರೆ.

ಅಜ್ಜಿಗೆ  6 ಮಕ್ಕಳು 8 ಮೊಮ್ಮಕ್ಕಳು. ಕಳೆದ 37 ವಷ೯ಗಳಿಂದ 27 ಲಕ್ಷಕ್ಕಿಂತಲೂ ಹೆಚ್ಚು  ಸಸಿಗಳನ್ನು ಬೆಳೆಸಿರುತ್ತಾರೆ. ಅಪ್ಪಿತಪ್ಪಿ ನಮ್ಮ ಕೈ ಕಾಲು  ಸಾಸಿವೆಯಷ್ಟು ಸಸಿಗೆ ತಾಗಿದರೂ ಸಿಟ್ಟು ಬರುತ್ತದೆ. ಅಜ್ಜಿ ಸುಸ್ತಾಗಲಿಲ್ವಾ ನಿಮಗೆ ? ಅಂತ ಕೇಳಿದರೆ ”ನನಗೇನೂ ಸುಸ್ತಾಗಲ್ಲ ಸೊಂಟಕ್ಕೆ ಕೆಲವೊಮ್ಮೆ ಸ್ವಲ್ಪ ನೋವು ಬರುತ್ತೆ ” ಅಂತಾರೆ ಸಸಿಗಳಲ್ಲಿ ಅಪಾರ ಕಾಳಜಿ ಇವರಿಗೆ..
ರವಿರಾಜ್ ಎಚ್.ಪಿ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter