Published On: Thu, Jun 11th, 2020

ಜೈನಕಾಶಿ ಮೂಡುಬಿದಿರೆಗೆ ಪುರಪ್ರವೇಶ ದಾನ ತಪಸ್ಸು ಸಂಸಾಆಚಾರ್ಯ ಮಹಾಸಾಗರ ಮುನಿಮಹಾರಾಜ್

ಮೂಡುಬಿದಿರೆ: ಆಚಾರ್ಯ ಜಯಕೀರ್ತಿ ಮುನಿ ಮಹಾರಾಜರ ಶಿಷ್ಯ108 ಆಚಾರ್ಯ ಮಹಾಸಾಗರ ಮುನಿ ಮಹಾರಾಜ್ ಅವರು ಕಳೆದ ಮಂಗಳವಾರ ಬೆಳಿಗ್ಗೆ ಜೈನಕಾಶಿ ಮೂಡುಬಿದಿರೆ ಪುರಪ್ರವೇಶ ಮಾಡಿದರು. ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಆಚಾರ್ಯರನ್ನು ಕಲ್ಸಂಕ ಶ್ರೀ ಮಠ ಹಾಸ್ಟೆಲ್ ಸ್ವಸ್ತಿಶ್ರೀ ಭಟ್ಟಾರಕ ಬಡಾವಣೆ ಬಳಿಯಿಂದ ಶ್ರೀ ಮಠದ ಹಾಗೂ ಸಮಾಜ ವತಿಯಿಂದ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ ಕೊರಲಾಯಿತು.Jaina Acharya @ Moodabidire 2

ಈ ಸಂದರ್ಭದಲ್ಲಿ ಪಟ್ಣಶೆಟ್ಟಿ ಸುದೇಶ್ ಕುಮಾರ್, ಬಸದಿ ಮೊಕ್ತೇಸರ ದಿನೇಶ್ ಬೆಟ್ಕೇರಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮಂಜುಳಾ ಅಭಯಚಂದ್ರ, ಶ್ವೇತಾ, ಪದ್ಮಾವತಿ, ಸುಧಾ ಬಾಹುಬಲಿ, ಮೂಡುಬಿದಿರೆ ವಕೀಲ ಪ್ರಸಾದ್ ಮೂಡುಬಿದಿರೆ, ಕೃಷ್ಣರಾಜ ಹೆಗ್ಡೆ ಕಲ್ಲಬೆಟ್ಟು, ಜಯರಾಜ್ ಕಂಬ್ಳಿ, ಹರೀಶ್‍ಚಂದ್ರ ಜೈನ್, ಪಣಿರಾಜ್, ವೀರೇಂದ್ರ ಇಂದ್ರ, ವಿಜಯ ಕುಮಾರ್, ಚಕ್ರೇಶ ಅರಿಗಾ ಸೂರಜ್, ಸುಧಾಕರ್, ಜಿನೇಂದ್ರ ಬಲ್ಲಾಳ್, ಮಿತ್ರ ಸೇನ, ಪ್ರವೀಣ್ ಚಂದ್ರ, ಸುಹಾಸ್ ಅರಿಗ ಮತ್ತಿತರರು ಉಪಸ್ಥಿತರಿದ್ದರು.Jaina Acharya @ Moodabidire 1

ಜೈನಕಾಶಿ ಶ್ರೀ ಮಠದ ಮುನಿ ನಿವಾಸದಲ್ಲಿ ಮೊಕ್ಕಾಂ ಇರುವ ಮುನೀಶ್ವರ ಇವರ ದರ್ಶನ ಪಡೆಯುವ ಸಲುವಾಗಿ ನಿಯಮಿತ ಸಂಖ್ಯೆಯ ಶ್ರಾವಕ ಶ್ರಾವಿಕೆಯರು ಮುಖ ಪಟ್ಟಿ ಧರಿಸಿ ಅಂತರ ಕಾಯ್ದು ಭಕ್ತಾದಿಗಳು ದರ್ಶನ ಮಾಡಿ ಆಹಾರ ನೀಡಿದರು. ಶ್ರೀ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪಾದ ಪೂಜೆ ನೆರವೇರಿತು.

ಅಪರಾಹ್ನ ಪ್ರವಚನ ನೀಡಿದ ಆಚಾರ್ಯರು ಧರ್ಮದಿಂದ ಸಂಸ್ಕಾರ ಸಿಗುತ್ತದೆ ಸಂಸ್ಕಾರದಿಂದ ಮುಕ್ತಿ ದೇವರ ದರ್ಶನ ದೇವರ ಭಕ್ತಿ ಮನಸ್ಸಿನ ದುಗುಡಗಳನ್ನು ಕಡಿಮೆ ಮಾಡುತ್ತೆ ಸರಸ್ವತಿಯ ಕೇಂದ್ರ ಜೈನ ಕಾಶಿ ಮೂಡುಬಿದಿರೆ ಸರಸ್ವತಿ ಇದ್ದಲ್ಲಿ ಲಕ್ಷ್ಮಿ ತನ್ನಿಂದ ತಾನಾಗಿ ನೆಲೆ ಆಗುತ್ತೆ ಸ್ವಾಧ್ಯಯ ದಾನ ತಪಸ್ಸು ಸಂಸಾರದ ತಾಪಗಳನ್ನು ದೂರ ಮಾಡುತ್ತದೆ ಎಂದು ಅನುಗ್ರಹಿಸಿದರು.

ಸಂಜೆ 18 ಬಸದಿ ದರ್ಶನ ಮಾಡಿದರು. ಇಂದು ಬುಧವಾರ (ಜೂ.10) ಪ್ರಾತಃಕಾಲ ಆಚಾರ್ಯರ ಕೇಶಲೊಚ ಕಾರ್ಯಕ್ರಮ ನಡೆಸಲ್ಪಟ್ಟಿತು ಎಂದು ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ವ್ಯವಸ್ಥಾಪಕ ಸಂಜಯಂಥ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter