Published On: Sat, May 23rd, 2020

ರಕ್ತದಾನದಿಂದ ಜೀವನದ ಜಾಗೃತಿ ಸಾಧ್ಯ : ಪ್ರವೀಣ್ ಶೆಟ್ಟಿ ವಕ್ವಾಡಿ

ಮುಂಬಯಿ:ರಕ್ತದಾನದ ಮಹತ್ವ ಮತ್ತು ಒಂದು ರಕ್ತದ ಹನಿ ಹೇಗೆ ಜೀವ ಉಳಿಸ ಬಲ್ಲದು ಎಂಬುದರ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದ ಬಗ್ಗೆ ಪ್ರವೀಣ್ ಶೆಟ್ಟಿ ವಕ್ವಾಡಿ ತಿಳಿಸಿದರು.ಅವರು ಡ್ರೈವ್ ಫಾರ್ಚೂನ್ ಪರಿವಾರದಿಂದ ಆರನೇ ವಾರ್ಷಿಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.     Fortune Blood Camp 1

ಜನಜೀವನ ಬಿಕ್ಕಟ್ಟಿನ ಸಂದರ್ಭದಲ್ಲಿ, ಜನರು ಹೆಜ್ಜೆ ಹಾಕಿದಾಗ ಮತ್ತು ತಮ್ಮ ನೆರೆಹೊರೆಯವರಿಗೆ ಸಹಾಯ ಮಾಡುವಾಗ ನಾವು ಮಾನವೀಯತೆಯ ಅತ್ಯುತ್ತಮತೆಯನ್ನು ನೋಡುತ್ತೇವೆ. ರಕ್ತ ಕೊಡುವುದನ್ನು ಅತ್ಯಗತ್ಯ ಸಮಾಜಸೇವೆ ಎಂದು ಪರಿಗಣಿಸಲಾಗುತ್ತದೆ. ಇದು ಅಸಾಧಾರಣ ಸಮಯ ಮತ್ತು ಕೋವಿಡ್ ಸಾಂಕ್ರಾಮಿಕರೋಗದ ಮಧ್ಯೆ, ನಾವು ಹೊರಗೆ ಬಂದು ರಕ್ತದಾನ ಮಾಡುವುದೇ ಮಹಾನ್ ದಾನವಾಗಿದೆ. ಈ ಕೊರೊನಾ ಮಧ್ಯೆ, ಸಾಮಾಜಿಕ ದೂರವನ್ನು ಅಭ್ಯಾಸ ಮಾಡುವ ಮತ್ತು ರಕ್ತದಾನ ಮಾಡುವ ಮೂಲಕ ಈ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುವ ತಿಳಿಸಿದರು.Fortune Blood Camp 6

Fortune Blood Camp 5ಉಡುಪಿ ಜಿಲ್ಲೆಯ ಕುಂದಾಪುರ ಬಾರಕೂರು ವಕ್ವಾಡಿ ಮೂಲತಃ ದುಬಾಯಿನ ಪ್ರತಿಷ್ಠಿತ ಉದ್ಯಮಿ, ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ ದುಬಾಯಿ ಸಂಸ್ಥೆಯ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ, ಕರ್ನಾಟಕ ಎನ್‍ಆರ್‍ಐ  ಫೋರಂ-ಯುಎಇ (ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ (ಯುಎಇ) ಅಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ವಕ್ವಾಡಿ ಅವರ ತೀರ್ಥರೂಪರಾದ  ನಾರಾಯಣ ಶೆಟ್ಟಿ ಮತ್ತು ಸರೋಜಿನಿ ಶೆಟ್ಟಿ ಅವರ 55ನೇ ವೈವಾಹಿಕ ವಾರ್ಷಿಕೋತ್ಸವದ ನೆನಪಿಗಾಗಿ ಆರನೇ ವರ್ಷದ ರಕ್ತದಾನ ಶಿಬಿರವನ್ನು ಕಳೆದ ಶುಕ್ರವಾರ ಯಶಸ್ವಿಯಾಗಿ ಆಯೋಜಿಸಿದ್ದರು.

Fortune Dubai Blood Camp A2

Fortune Blood Camp 14

Fortune Blood Camp 1ಕಾರ್ಯಕ್ರಮದಲ್ಲಿ ಲತೀಫಾ ಆಸ್ಪತ್ರೆ ರಕ್ತದಾನ ಕೇಂದ್ರ ದುಬಾಯಿ ಇದರ ವೈದ್ಯರು, ನರ್ಸ್‍ಗಳು ಮತ್ತು ಸಿಬ್ಬಂದಿಗಳ ಸಹಯೋಗದಿಂದ ನಡೆಸಲ್ಪಟ್ಟ ರಕ್ತದಾನ ಶಿಬಿರಕ್ಕೆವಸಂತ್ ಶೆಟ್ಟಿ, ಪ್ರಭಾಕರ್ ಅಂಬಲ್‍ತಾರೆ, ರೋನಾಲ್ಡ್ ಮಥಾಯಸ್, ನೋಯೆಲ್ ಅಲ್ಮೇಡಾ, ಪ್ರಕಾಶ್ ಪಕ್ಕಳ, ರಾಜೇಶ್ ಕುತ್ತಾರ್, ಪಂಚಮ್ ಹರಿರಮಣಿ, ಲಾರೆನ್ಸ್ ವಿಜಯ ಕುಟಿನ್ಹಾ, ದಯಾ ಕಿರೋಡಿಯನ್, ಬಾಲಕೃಷ್ಣ ಸಾಲ್ಯಾನ್, ಯಶ್ ಕಾರ್ಕೆರಾ, ಅಶೋಕ್ ಬೆಳ್ಮನ್ ಮತ್ತಿತರ ಗಣ್ಯರು ಸೇರಿದಂತೆ, ಕೆಎನ್‍ಆರ್‍ಐ  ಫೋರಂ ಸದಸ್ಯರು, ಫಾರ್ಚೂನ್ ಪರಿವಾರದ ಸ್ನೇಹಿತರು, ಫಾರ್ಚೂನ್ ಸಿಬ್ಬಂದಿಗಳು ಉಪಸ್ಥಿತರಿದ್ದು ಶಿಬಿರದ ಯಸಸ್ಸಿಗೆ ಸಹಕರಿಸಿದ್ದರು. ಕಾರ್ಯಕ್ರಮಕ್ಕೆ ಶ್ರಮಿಸಿದ ಸರ್ವರಿಗೂ ಹಾಗೂ ಎಲ್ಲಾ ರಕ್ತದಾನಿಗಳಿಗೆ, ಡ್ರೈವ್ ಫಾರ್ಚೂನ್ ತಂಡಕ್ಕೆಪ್ರವೀಣ್ ಶೆಟ್ಟಿ ಅಭಾರ ಧನ್ಯವಾದವಿತ್ತರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter