Published On: Sat, May 23rd, 2020

ಕಳ್ಳಿಗೆ ಗ್ರಾಮಕ್ಕೆ ಶಾಸಕ ರಾಜೇಶ್ ನಾಯ್ಕ್ ದಿಢೀರ್ ಭೇಟಿ, ಕಾಮಗಾರಿ ಪರಿಶೀಲನೆ

ಬಂಟ್ವಾಳ:  ಶಾಸಕರ  ಅನುದಾನದಿಂದ ಕಳ್ಳಿಗೆ ಗ್ರಾಮದಲ್ಲಿ ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ದರಿಬಾಗಿಲು-ಕಳ್ಳಿಗೆ ರಸ್ತೆ ಡಾಮರೀಕರಣ ಕಾಮಗಾರಿ ನಡೆಯುತ್ತಿದ್ದು,  ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಕಳ್ಳಿಗೆ ಗ್ರಾಮಕ್ಕೆ ಭೇಟಿನೀಡಿ ಕಾಮಗಾರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈಚೆಗೆ  ಕಳ್ಳಿಗೆ ಗ್ರಾಮ ಪಂಚಾಯತಿ ಸದಸ್ಯೆ ರೇವತಿ ಮಾಡಂಗೆ ಕಾಮಗಾರಿಗೆ ಚಾಲನೆ ನೀಡಿದ್ದರು.
IMG-20200523-WA0029
 ಶನಿವಾರ ಶಾಸಕರು ಖುದ್ದು  ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದ್ದು, ಈ ವೇಳೆ ಕಾರ್ಯಕರ್ತರು ಕಳ್ಳಿಗೆ ಗ್ರಾಮದಲ್ಲಿ ನಡೆಯಲಿರುವ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಕಳ್ಳಿಗೆ ಗ್ರಾಮದ ಬಹುದಿನದ ಬೇಡಿಕೆ ಇದೀಗ ಈಡೇರಿದೆ. ರಾಷ್ಟ್ರೀಯ ಹೆದ್ದಾರಿಯಿಂದ  ಬ್ರಹ್ಮರಕೂಟ್ಲು ಮೂಲಕ ಪೊಳಲಿ, ಕಟೀಲು ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಡಾಮರೀಕರಣಗೊಂಡು ಅಭಿವೃದ್ದಿಗೊಳಿಸಲು ಸಹಕರಿಸಿದ ಶಾಸಕರಿಗೆ  ಕಾರ್ಯಕರ್ತರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ಪಚ್ಚಿನಡ್ಕ ಬೂತ್ ಸಮಿತಿ ಅಧ್ಯಕ್ಷ ಗ್ಲ್ಯಾಂಡ್ಸನ್ ಡಿಸೋಜ, ನೆತ್ರಕೆರೆ ಬೂತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಜಾರಂದಗುಡ್ಡೆ ಬೂತ್ ಸಮಿತಿ ಅಧ್ಯಕ್ಷ ಶಿವರಾಜ್ ಜಾರಂದಗುಡ್ಡೆ, ಕಾರ್ಯದರ್ಶಿಗಳಾದ ಸುನೀಲ್ ಜಾರಂದಗುಡ್ಡೆ, ದಿನಕರ ಚಂದ್ರಿಗೆ ಕಳ್ಳಿಗೆ ಬಿಜೆಪಿ ಕಾರ್ಯಕರ್ತರಾದ ದೇವಿಪ್ರಸಾದ್, ಮನೋಜ್ ವಳವೂರು, ರಾಹುಲ್ ಪಚ್ಚಿನಡ್ಕ, ಲಕ್ಷ್ಮಣ್ ಕಂಜತ್ತೂರು, ಪ್ರಶಾಂತ್ ಮಾಡಂಗೆ, ಸಂದೀಪ್ ಬೀಡು ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter