Published On: Sat, May 23rd, 2020

“ಬಲಿಷ್ಠ ಬಿಲ್ಲವೆರ್” ವಾಟ್ಸಾಪ್ ತಂಡದ “ಹೃದಯ ಸ್ಪಂದನೆ”ಯ ಸಹಾಯಧನ

ಕೈಕಂಬ: ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರೇರಣೆಯಂತೆ “ಬಲಿಷ್ಠ ಬಿಲ್ಲವೆರ್” ಎಂಬ ವಾಟ್ಸಾಪ್ ತಂಡ ವನ್ನು ಕಟ್ಟಿ  “ಹೃದಯ ಸ್ಪಂದನೆ”ಯ ಮೂಲಕ   ಇದೀಗ 11ನೇ ಸೇವಧನ ಹಸ್ತಾಂತರವನ್ನು ಬಡಗ ಬೆಳ್ಳೂರು  ಗ್ರಾಮದ ವರಕೋಡಿ ಮನೆಯ ಪ್ರವೀಣ್ ಪೂಜಾರಿ  ಅವರಿಗೆ ನೀಡಲಾಯಿತು.7795b30c-4d84-4866-ab7f-af128b18a625

ಇವರು ಕಳೆದ 6 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ತನ್ನ ಕಾಲಿನ  ಸಂಪೂರ್ಣ ಬಲವನ್ನು ಕಳೆದುಕೊಂಡು ಮಲಗಿದ್ದಲ್ಲೇ ಇದ್ದಾರೆ. ಸುಮಾರು  2 ಲಕ್ಷಕ್ಕಿಂತಲೂ ಅಧಿಕ ಮೊತ್ತ   ಖರ್ಚಾಗಿದ್ದು . ಇವರು ಮನೆಯ ಆಧಾರಸ್ತಂಭವಾಗಿದ್ದ  ಇವರ ಜೀವನವು ತುಂಬಾ ಕಷ್ಟಕರವಾಗಿದೆ  ಈಗಾಗಲೇ ಸಾಲ ಮೂಲ ಮಾಡಿ ಖರ್ಚು ಮಾಡಿರುತ್ತಾರೆ . ಇವರ ಚಿಕಿತ್ಸೆಗೆ ಆರ್ಥಿಕ ನೆರವಿಗಾಗಿ “ಬಲಿಷ್ಠ ಬಿಲ್ಲವೆರ್” ತಂಡದ ” ಸನತ್ ಅಂಚನ್‌ ಕುಕ್ಕೇಡಿ ಸಂಪತ್ ಅಂಚನ್ ಕುಕ್ಕೇಡಿ ಅವರು  “ಹೃದಯ ಸ್ಪಂದನೆ” ಯೋಜನೆಯ 11ನೇ ಸೇವಾ ಕಾರ್ಯವಾಗಿ 10,000 ರೂಪಾಯಿಗಳ ಧನಸಹಾಯವನ್ನು  ಮೇ.23 ರಂದು ಶನಿವಾರ  ಪ್ರವೀಣ್ ಪೂಜಾರಿಯ  ತಾಯಿ ಪುಷ್ಷ ಅವರಿಗೆ  ನೀಡಿದರು.

ಈ ಸಂದರ್ಭದಲ್ಲಿ  ದೀನ ಬಂದು ಸಮಾಜ ಸೇವಾ ಸಂಸ್ಥೆಯ ಸ್ಥಾಪಕ  ವೀಷ ವೈದ್ಯ  ಎಚ್ ಎಸ್ ಜನಾರ್ದನ್ ಪೂಜಾರಿ  ಬಡಗ ಬೆಳ್ಳೂರು,  ದಿನೇಶ್ ಪೂಜಾರಿ ಬಡಗ ಬೆಳ್ಳೂರು ಶ್ರೀನಿವಾಸ ಪೂಜಾರಿ ಬೆಳ್ಳೂರು, ಸುಂಕದಕಟ್ಟೆ ಯಕ್ಷಗಾನ ಮೇಳದ ಭಾಗವತ  ನಿರಂಜರ್ ಪೂಜಾರಿ ಬಡಗ ಬೆಳ್ಳೂರು ಮತ್ತಿತರರು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter