Published On: Fri, May 22nd, 2020

ಗೋಹತ್ಯೆ ನಡೆಸುವವರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಒತ್ತಾಯ ಮಾಡಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ

ಬಂಟ್ವಾಳ: ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಗೋವುಗಳನ್ನು ಕಳವು ನಡೆಸಿ ಹತ್ಯೆ ಮಾಡುತ್ತಿರುವುದು ಅವ್ಯಾಹತವಾಗಿ ನಡೆಯುತ್ತಿರುವುದು ಖಂಡನೀಯ ಈ ಬಗ್ಗೆ ತನಿಖೆ ನಡೆಸಿ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಂಟ್ವಾಳ ಪ್ರಖಂಡ ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ ಅವರಿಗೆ ಮನವಿ ಮಾಡಿದರು.d92031f1-1c4f-4265-a72b-f6f4dce3812b

ಕಳೆದ ವಾರ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಕೂಟೇಲು ಎಂಬಲ್ಲಿ ಗೋ ಹತ್ಯೆ ಮಾಡಿ ಅದರ ತ್ಯಾಜ್ಯ ನದಿಗೆ ಎಸೆದಿದ್ದರು ಬಳಿಕ ಅಮ್ಟಾಡಿ ಗ್ರಾಮದ ಲೋರೆಟ್ಟೋಪದವು ಎಂಬಲ್ಲಿ ಅನಧಿಕೃತ ಕಸಾಯಿಕಾನೆ ನಡೆಸುತ್ತಿರುವುದರ ಬಗ್ಗೆ ಪ್ರಕರಣ ದಾಖಲಾಗಿದೆ.ಹಾಗಾಗಿ ಇದೇ ರೀತಿ ತಾಲೂಕಿನ ಅನೇಕ ಕಡೆಗಳಲ್ಲಿ ಗಮನಕ್ಕೆ ಬರದೆ ಅಕ್ರಮವಾಗಿ ದನಗಳನ್ನು ಹತ್ಯೆ ಮಾಡುತ್ತಿರುವ ಶಂಕೆ ವ್ಯಕ್ತಪಡಿಸಿದ್ದಾರೆ.a0f0d70a-0c25-4747-9909-b608f7207bb8

ಗೋವುಗಳನ್ನು ಕದ್ದು ಹತ್ಯೆ ಮಾಡುವುದರಿಂದ ಸಮಾಜದಲ್ಲಿ ಅಶಾಂತಿ ಯ ವಾತಾವರಣ ನಿರ್ಮಾಣವಾಗಬಹುದು ಅದಕ್ಕೆ ಅವಕಾಶ ಸಿಗದ ರೀತಿಯ ಲ್ಲಿ ಬಂಟ್ವಾಳ ಪೋಲೀಸರು ಕಾರ್ಯೋನ್ಮುಖರಾಗಬೇಕೆಂದು ಪೋಲೀಸರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಗೋರಕ್ಷ ಪ್ರಮುಖ್ ಸರಪಾಡಿ ಆಶೋಕ್ ಶೆಟ್ಟಿ ಸರಪಾಡಿ , ಜಿಲ್ಲಾ ಸಹಸಂಚಾಲಕ ಭರತ್ ಕುಮ್ಡೇಲು, ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ಸುರೇಶ್ ಬೆಂಜನಪದವು, ಭಜರಂಗದಳ ಬಂಟ್ವಾಳ ಸಂಚಾಲಕ ಶಿವಪ್ರಸಾದ್ ತುಂಬೆ, ಬಂಟ್ವಾಳ ಪ್ರಖಂಡ ಗೋರಕ್ಷಾಪ್ರಮುಖ್ ಅಭಿನ್ ರೈ,, ಬಂಟ್ವಾಳ ಪ್ರಖಂಡ ಸಹ ಸಂಚಾಲಕ ಭುವಿತ್ ಶೆಟ್ಟಿ, ಬಂಟ್ವಾಳ ಪ್ರಖಂಡ ಸಹಸಂಚಾಲಕ ಸಂತೋಷ್ ಕುಲಾಲ್, ಆಕೇಶ್ ಬೆಂಜನಪದವು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter